janadhvani

Kannada Online News Paper

ಸೌದಿ: ನಿತಾಖಾತ್ ಗೆ ಪ್ರಾಯ ಮಿತಿಯನ್ನು ನಿಗದಿಪಡಿಸಿದ ಸಚಿವಾಲಯ

ರಿಯಾದ್: ಸೌದಿ ಅರೇಬಿಯಾದಲ್ಲಿ, ನಿತಾಖಾತ್ ವ್ಯವಸ್ಥೆಯಲ್ಲಿನ ಸ್ಥಳೀಯ ಅನುಪಾತವನ್ನು ಪರಿಗಣಿಸಲು ನೌಕರರಿಗೆ ವಯಸ್ಸಿನ ಮಿತಿಯನ್ನು ಸಚಿವಾಲಯ ನಿಗದಿಪಡಿಸಿದೆ. ಸ್ಥಳೀಯ ಉದ್ಯೋಗಿಯೊಬ್ಬರು ನಿತಾಖಾತ್ ನಲ್ಲಿ ನೋಂದಾಯಿಸಲು ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 60 ಆಗಿದೆ. ನಿತಾಖಾತ್ ನಲ್ಲಿ ಅಪ್ರಾಪ್ತ ವಯಸ್ಕರು ಮತ್ತು ನಿವೃತ್ತರನ್ನು ಸೇರಿಸಲು ಸಂಸ್ಥೆಗಳು ಪ್ರಯತ್ನಿಸುತ್ತಿರುವುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶೀಕರಣ ಯೋಜನೆಯ ಭಾಗವಾಗಿ ನಿತಾಖಾತ್ ವ್ಯವಸ್ಥೆಗೆ ಕಂಪನಿಗಳಿಗೆ ನಿಗದಿಪಡಿಸಿದ ಅನುಪಾತವನ್ನು ಪೂರ್ತೀಕರಿಸಲು ಪ್ರಾಯದ ಮಿತಿಯ ಹೊರತಾಗಿ ದೇಶೀಯರನ್ನು ನೋಂದಾಯಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸ್ಪಷ್ಟೀಕರಣ ನೀಡಿದೆ. ಸ್ಥಳೀಯ ಅನುಪಾತವನ್ನು ಪರಿಗಣಿಸಲು ಕನಿಷ್ಠ ವಯಸ್ಸು ಹದಿನೆಂಟು ಆಗಿರಬೇಕು.

ಅಂತೆಯೇ, 60 ವರ್ಷಕ್ಕಿಂತ ಮೇಲ್ಪಟ್ಟವರನ್ನು ಸ್ಥಳೀಯ ಅನುಪಾತಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಹೇಳಿದೆ. ಇತ್ತೀಚೆಗೆ, ಸಚಿವಾಲಯವು ನಿತಾಖಾತ್ ಯೋಜನೆಯಲ್ಲಿ ಸ್ಥಳೀಯ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹೆಚ್ಚಿಸಿದ್ದು,3,000 ರಿಯಾಲ್‌ಗಳಿಂದ 4,000 ರಿಯಾಲ್‌ಗಳಿಗೆ ಏರಿಸಲಾಗಿದೆ.

ಇದನ್ನು ಕಾರ್ಯಗತಗೊಳಿಸಲು ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. 4,000 ರೂ.ಗಿಂತ ಕಡಿಮೆ ವೇತನ ಪಡೆಯುವ ಸ್ಥಳೀಯ ನೌಕರರನ್ನು ನಿತಾಖಾತ್ ನಲ್ಲಿ ಪೂರ್ಣ ಸ್ಥಳೀಯರೆಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ, ಸಂಬಳವು 3,000 ರಿಂದ 4,000 ರಿಯಾಲ್ ಗಳ ನಡುವೆ ಇದ್ದರೆ, ಅವರನ್ನು ಅರ್ಧ ಉದ್ಯೋಗಿ ಎಂದು ಪರಿಗಣಿಸಲಾಗುತ್ತದೆ. 3,000 ರಿಯಾಲ್‌ಗಳಿಂದ ಕಡಿಮೆ ವೇತನ ಪಡೆಯುವವರನ್ನು ನಿತಾಖಾತ್ ನಲ್ಲಿ ಪರಿಗಣಿಸಲಾಗುವುದಿಲ್ಲ. ಇದರ ಹೊರತಾಗಿ ಇದೀಗ ಪ್ರಾಯದ ಮಿತಿಯನ್ನು ನಿಗದಿಪಡಿಸಲಾಗಿದೆ.

error: Content is protected !! Not allowed copy content from janadhvani.com