janadhvani

Kannada Online News Paper

ಮೃತ ಔಫ್ ಕುಟುಂಬಸ್ಥರನ್ನು ಭೇಟಿಯಾದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕಾಸರ್ಗೋಡ್ |ಇಲ್ಲಿನ ಕಾಞಂಗಾಡ್ ಕಲ್ಲುರಾವಿಯಲ್ಲಿ ಲೀಗ್‌ ಗೂಂಡಾ ಸಂಘದ ಚೂರಿ ಇರಿತದಿಂದ ಕೊಲ್ಲಲ್ಪಟ್ಟ ಎಸ್‌ವೈಎಸ್ ಕಾರ್ಯಕರ್ತ ಅಬ್ದುರ್ರಹ್ಮಾನ್ ಔಫ್ ಅವರ ಸಂಬಂಧಿಕರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕೇರಳ ಪರ್ಯಟನೆಯ ಸಂದರ್ಭದಲ್ಲಿ ಪಡನಕ್ಕಾಡ್‌ನಲ್ಲಿ ಭೇಟಿಯಾದರು.

ಔಫ್ ಅವರ ಚಿಕ್ಕಪ್ಪ ಹುಸೈನ್ ಮುಸ್ಲಿಯಾರ್ ಮತ್ತು ಇತರ ಸಂಬಂಧಿಕರು ಸಿಎಂ ಅವರನ್ನು ಭೇಟಿಯಾದರು. ಕಂದಾಯ ಸಚಿವ ಇ. ಚಂದ್ರಶೇಖರನ್, ಸಿಪಿಐ (ಎಂ) ಕೇಂದ್ರ ಸಮಿತಿ ಸದಸ್ಯ ಪಿ ಕರುಣಾಕರನ್ ಮತ್ತು ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಉಪಸ್ಥಿತರಿದ್ದರು. ಪ್ರಕರಣದ ತನಿಖೆಯು ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಔಫ್ ರ ಕುಟುಂಬಕ್ಕೆ ಎಲ್ಲಾ ವಿಧ ಸಹಕಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಸಚಿವ ಕೆ.ಟಿ.ಜಲಿಲ್ ಅವರು ಇಂದು ಔಫ್ ಮನೆ ಮತ್ತು ಸಮಾಧಿ ಸಂದರ್ಶನ ನಡೆಸಿದ್ದರು. ಯೂತ್ ಲೀಗ್ ರಾಜ್ಯಾಧ್ಯಕ್ಷ ಪಾನಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ಕೂಡ ಔಫ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಆದರೆ, ತಮ್ಮೊಂದಿಗೆ ಬಂದ ಸ್ಥಳೀಯ ಯೂತ್ ಲೀಗ್‌ನ ಪದಾಧಿಕಾರಿಗಳನ್ನು ಔಫ್‌ನ ನಿವಾಸಕ್ಕೆ ಪ್ರವೇಶಿಸಲು ಸ್ಥಳೀಯರು ಅನುಮತಿಸಲಿಲ್ಲ.

ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ನಂತರ, ಆರೋಪಿಗಳು ಲೀಗ್‌ನ ಸದಸ್ಯರಾಗಿದ್ದರೆ ಯಾವುದೇ ಸಂದರ್ಭದಲ್ಲೂ ಅವರನ್ನು ರಕ್ಷಿಸಲಾಗುವುದಿಲ್ಲ ಎಂಬ ಭರವಸೆಯೊಂದಿಗೆ ತಂಙಳ್ ಹಿಂದಿರುಗಿದರು.

error: Content is protected !! Not allowed copy content from janadhvani.com