janadhvani

Kannada Online News Paper

ಬಿಜೆಎಂ ಬದ್ಯಾರ್:ಆಡಳಿತ ಸಮಿತಿಯ ಅಧ್ಯಕ್ಷರಾಗಿ ಎ.ಮ್ ಅಬೂಬಕರ್ ಅವಿರೋಧ ಆಯ್ಕೆ

ಬದ್ಯಾರ್, ಗುರುವಾಯನಕೆರೆ: ಬದ್ರಿಯಾ ಜುಮ್ಮಾ ಮಸ್ಜಿದ್ ಬದ್ಯಾರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 25/12/2020 ರಂದು ಶುಕ್ರವಾರ ಜುಮ್ಮಾ ನಮಾಝಿನ ಬಳಿಕ ಬದ್ಯಾರ್ ಜುಮ್ಮಾ ಮಸೀದಿಯ ವಠಾರದಲ್ಲಿ ನಡೆಯಿತು.

ಸಭೆಯನ್ನು ಜಮಾ’ಅತ್ ಖತೀಬರಾದ ಅನ್ಸಾರ್ ಸಖಾಫಿ ಮುಕ್ವೆ ಇವರು ದುವಾ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು.. “ಮಸೀದಿಯ ಆಡಳಿತವನ್ನು ವಹಿಸುವುದು ಮುಸ್ಲಿಮನಿಗೆ ಒಂದು ಸವಾಲಾಗಿದ್ದು, ಸೂಕ್ಷ್ಮತೆಯನ್ನು ಪಾಲಿಸಿ ಅಲ್ಲಾಹನ ಸಂಪ್ರೀತಿಯನ್ನು ಪಡೆಯುವ ಉದ್ದೇಶದಿಂದ ಮಾತ್ರ ಆಡಳಿತ ನಡೆಸಬೇಕೆಂದು ಕರೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಹಸೈನಾರ್ ಬಾಬೆಯವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಅದ್ಯಕ್ಷರಾದ ಅಬ್ದುಲ್ ರಝಾಕ್ ಬದ್ಯಾರ್ ರವರು ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಮಸೀದಿಯ ಅಭಿವೃದ್ಧಿಯನ್ನು ವಿವರಿಸಿ ಜಮಾ’ಅತಿಗರ ಮನ್ನಣೆಗೆ ಪಾತ್ರರಾದರು.
ಇದೇ ವೇಳೆ ಖತೀಬರಾದ ಅನ್ಸಾರ್ ಸಖಾಫಿಯವರ ಗೌರವ ಅಧ್ಯಕ್ಷತೆಯಲ್ಲಿ ಹಳೆಯ ಸಮಿತಿಯನ್ನು ಬರ್ಕಾಸುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಎ.ಎಮ್ ಅಬೂಬಕರ್, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬರಾಯ, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಬರಾಯ ಆಯ್ಕೆಯಾದರು.
ಸಮಿತಿಯ ಉಪಾಧ್ಯಕ್ಷರಾಗಿ ಅಕ್ಬರಾಲಿ ಬದ್ಯಾರ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ಲಾ ಟೈಲರ್ ಹಾಗೂ ಹಸೈನಾರ್ ಬಾಬೆ, ಸಲಹೆಗಾರರಾಗಿ ಹಸನಬ್ಬ ಪಿ.ಕೆರೆ, ಹುಸನಬ್ಬ ಮಸೀದಿ ಬಳಿ, ಕಾಸಿಮ್ ಹೋಟೆಲ್ ಹಾಗೂ ಸಮಿತಿಯ ಇತರ ಸದಸ್ಯರಾಗಿ ಅಬ್ದುಲ್ ರಝಾಕ್ ಬದ್ಯಾರ್, ಲತೀಫ್ ಪಿ.ಕೆರೆ, ಅಬ್ಬಾಸ್ ಬರಾಯ, ರಝಾಕ್ ದದ್ದು, ಖಾದಿರ್ ಪಲ್ಲಿಜಾಗೆ, ಅಶ್ರಫ್ ಗುಡ್ಡೆಮನೆ, ಸುಲೈಮಾನ್ ಮಸೀದಿ ಬಳಿ, ಅಶ್ರಫ್ ಬದ್ಯಾರ್, ಉಸ್ಮಾನ್ ಬರಾಯ ಪಲ್ಲ, ಉಮರ್ ಮಸೀದಿ ಬಳಿ, ರಝಾಕ್ ಗುಡ್ಡೆಮನೆ, ಅಶ್ರಫ್ ನೈಕುಳಿ, ಹಸನಬ್ಬ ಸೌದಿ ಸಹಿತವಿರುವ ಇಪ್ಪತ್ತೈದು ಸದಸ್ಯರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಆಡಳಿತ ಸಮಿತಿಗೆ ಗೌರವ ಸದಸ್ಯರಾಗಿ ಸ್ಥಳೀಯ ಖತೀಬರಾದ ಅನ್ಸಾರ್ ಸಖಾಫಿ ಮುಕ್ವೆ ಇವರನ್ನು ನೇಮಕ ಮಾಡಲಾಯಿತು.

ಸಭೆಯನ್ನು ಕಾರ್ಯದರ್ಶಿ ಹಸೈನಾರ್ ಬಾಬೆ ಸ್ವಾಗತಿಸಿ, ನಿರೂಪಿಸಿದರು.

ವರದಿ: ಆಸಿಫ್ ಬದ್ಯಾರ್

error: Content is protected !! Not allowed copy content from janadhvani.com