ಬಹರೈನ್ ಕೆ.ಸಿ.ಎಫ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಝೈನುಲ್ ಉಲಮಾ ಮಾಣಿ ಉಸ್ತಾದರಿಗೆ ಸನ್ಮಾನ ಸಮಾರಂಭ

ಬಹರೈನ್ :  ಕೆ.ಸಿ.ಎಫ್ ಬಹರೈನ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಝೈನುಲ್ ಉಲಮಾ ಮಾಣಿ ಉಸ್ತಾದರಿಗೆ ಅಭಿನಂದನಾ ಸಮಾರಂಭವು ಮನಾಮ ಐ.ಸಿ.ಎಫ್ ಸುನ್ನೀ ಸೆಂಟರ್ ಹಾಲ್ನಲ್ಲಿ 9-03-2018 ರಂದು ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಅಧ್ಯಕ್ಷರಾದ ಫಾರೂಕ್ ಎಸ್.ಎಂ. ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಝೈನುಲ್ ಉಲಮಾ ಮಾಣಿ ಉಸ್ತಾದರ ದುಃಅ ದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟುರವರು ಖಿರಾಅತ್ ಪಠಿ ಸಿದರು.ಸ್ವಾಗತ ಭಾಷಣವನ್ನು ಮಾಡಿದ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ದಾರುಲ್ ಇರ್ಷಾದ್ ಶಿಲ್ಪಿ ಝೈನುಲ್ ಉಲಮಾ ಮಾಣಿ ಉಸ್ತಾದರ ಹಾಗೂ ಸ್ಥಾಪನೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.ಉದ್ಘಾಟನೆಯನ್ನು ಮಾಡಿದ ಐ.ಸಿ ಎಫ್ ಮನಾಮ ಸೆಂಟರ್ ಅಧ್ಯಕ್ಷರಾದ ಶಾನವಾಜ್ ಮದನಿ ಉಸ್ತಾದರು ಉಲಮಾರವರ ಮಾರ್ಗದರ್ಶನವಿರುವ ಸಂಘಟನೆಯಿಂದ ಮಾತ್ರ ಇಹ ಪರ ವಿಜಯ ಸಾಧ್ಯ.ಕೆ.ಸಿ.ಎಫ್ ಹಾಗೂ ಐ.ಸಿ.ಎಫ್ ಈ ನಿಟ್ಟಿನಲ್ಲಿ ಕಾರ್ಯಾ ಚರಿಸುತ್ತಿದೆ ಎಂದರು.

ಸಮಾರಂಭದ ಮುಖ್ಯ ಅತಿಥಿ ಝೈನುಲ್ ಉಲಮಾ ಮಾಣಿ ಉಸ್ತಾದರು, ಈ ಲೋಕವು ನಶ್ವರವಾಗಿದ್ದು ಪರಲೋಕ ವಿಜಯಿ ಯಾಗಲು ಅಲ್ಲಾಹನನ್ನು ಭಯಪಟ್ಟು ಜೀವಿಸಿರಿ, ಉತ್ತಮವಾದ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಎಲ್ಲರಿಗೂ ಒಳಿತಾಗಲಿ ಎಂಬ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಉಪದೇಶವನ್ನು ನೀಡಿದರು.ಬದ್ರುದ್ದೀನ್ ಅಹ್ಸನಿ ಉಸ್ತಾದರು ದಾರುಲ್ ಇರ್ಷಾದ್ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್.ಎಂ ರವರು ಕರ್ನಾಟಕದಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿದ ಏಕೈಕ ಸುನ್ನೀ ಸಂಸ್ಥೆಯಾದ ದಾರುಲ್ ಇರ್ಷಾದ್ಗೆ ಸರ್ವರೂ ಸಹಕರಿಸ ಬೇಕು ಎಂದು ಕರೆಯಿತ್ತರು.

ದಾರುಲ್ ಇರ್ಷಾದ್ ಸೌದಿ ಅರೇಬಿಯಾ ನ್ಯಾಷನಲ್ ಸಮಿತಿ ಅಧ್ಯಕ್ಷರಾದ ಅನ್ವರ್ ಹುಸೈನ್ ಹಾಗೂ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ರವರು ದಾರುಲ್ ಇರ್ಷಾದ್ ಕಾರ್ಯ ಚಟುವಟಿಕೆಗಳ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು.
ಕೆ.ಸಿ.ಎಫ್ ಬಹರೈನ್ ಐ ಎನ್ ಸಿ ಪ್ರತಿನಿಧಿ ಗಳಾದ ಅಲಿ ಮುಸ್ಲಿಯಾರ್, ಬಶೀರ್ ಕಾರ್ಲೆ, ಬಹರೈನ್ ಸುನ್ನೀ ಉಲಮಾ ಒಕ್ಕೂಟದ ಹೈದರ್ ಸಅದಿ ಮಂಚಿ,ಅಹ್ಮದ್ ಮುಸ್ಲಿಯಾರ್ ಗಟ್ಟಮನೆ ಶುಭಾಶಂಸಗೈದರು. ಕೆ.ಸಿ.ಎಫ್ ಐಎನ್ಸಿ ಪಿಆರ್ ಓ ಚೇರ್ಮ್ಯಾನ್ ಜಮಾಲುದ್ದೀನ್ ವಿಟ್ಟಲ್, ಐ ಎನ್ ಸಿ ಸದಸ್ಯರಾದ ಫಕ್ರುದ್ದೀನ್ ಪೈಂಬಚ್ಚಾಲ್, ಕೆ.ಸಿ.ಎಫ್ ನ್ಯಾಷನಲ್ ಸಮಿತಿ ಕೋಶಾಧಿಕಾರಿ ಅಝೀಝ್ ಸುಳ್ಯ, ನ್ಯಾಷನಲ್ ಸಮಿತಿ ಕ್ಯಾಬಿನಟ್ ಸದಸ್ಯರಾದ ಹನೀಫ್ ಕಿನ್ಯ, ಮಜೀದ್ ಮಾದಪುರ,ಇಕ್ಬಾಲ್ ಮಂಜನಾಡಿ, ಸೂಫಿ ಪಯಂಬಚಾಲ್, ತೌಫೀಕ್ ಬೆಳ್ತಂಗಡಿ ಕೆ.ಸಿ.ಎಫ್ ನೋರ್ತ್ ಝೋನ್ ಅದ್ಯಕ್ಷರಾದ ಹನೀಫ್ ಗುರುವಾಯನ ಕೆರೆ,ಸೌತ್ ಝೋನ್ ಅದ್ಯಕ್ಷರಾದ ಮನ್ಸೂರ್ ಬೆಲ್ಮ ಹಾಗೂ ಬಹರೈನ್ ಸುನ್ನೀ ಉಲಮಾ ಒಕ್ಕೂಟದ ನೇತಾರರಾದ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ,ಹನೀಫ್ ಮುಸ್ಲಿಯಾರ್, ಅಬೂಬಕ್ಕರ್ ಮದನಿ,ಮಹಮ್ಮದಲಿ ವೇಣೂರು ಉಸ್ತಾದ್ ಹಾಗೂ ಸೌದಿ ಅರೇಬಿಯಾ ದಾರುಲ್ ಇರ್ಷಾದ್ ನಾಯಕರಾದ ಯೂಸುಫ್ ವಿಟ್ಲ,ಶಮೀಮ್, ಅಬೂಬಕ್ಕರ್ ಬೆಳ್ತಂಗಡಿ, ನೌಷಾದ್ ಪಾಳ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕೆ.ಸಿ.ಎಫ್ ಎಲ್ಲಾ ಸೆಕ್ಟರ್ ಪ್ರತಿನಿಧಿಗಳು ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಕೆ.ಸಿ.ಎಫ್ ನ್ಯಾಷನಲ್ ಸಮಿತಿ ಎಜುಕೇಷನ್ ಚೇರ್ಮ್ಯಾನ್ ಕಲಂದರ್ ಶರೀಫ್ ಕಕ್ಕೆಪದವು ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!