ಯುಎಇ ಯಿಂದ ಭಾರತೀಯರ ಮೃತ ಶರೀರವನ್ನು ಕೊಂಡೊಯ್ಯಲು ಏಕೀಕೃತ ದರ

ದುಬೈ: ಯುಎಇಯಲ್ಲಿ ಮೃತಟ್ಟ ಭಾರತೀಯರ ಮೃತದೇಹವನ್ನು ಊರಿಗೆ ಕೊಂಡೊಯ್ಯುವುದಕ್ಕೆ ಪಡೆಯಲಾಗುವ ದರವನ್ನು ಏಕೀಕರಣಗೊಳಿಸಲು ಏರ್ ಇಂಡಿಯಾ ಚಿಂತನೆ ನಡೆಸಿದೆ.
ಈ ಕುರಿತು ಏರ್ ಇಂಡಿಯಾದ ಕಾರ್ಗೋ ವಿಭಾಗದ ಮೇಲ್ನೋಟ ವಹಿಸುವ ಅರೇಬಿಯನ್ ಟ್ರಾವಲ್ಸ್‌ನ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ. ಪ್ರಸಕ್ತ ಮೃತದೇಹದ ಗಾತ್ರಕ್ಕೆ ಅನುಗುಣವಾಗಿ ದರವನ್ನು ನಿಗದಿಪಡಿಸಲಾಗುತ್ತಿದ್ದು, ಅದಕ್ಕೆ ತೆರೆ ಬೀಳಲಿದೆ .

ಇನ್ನು ಮುಂದೆ ಭಾರತದ ಯಾವುದೇ ಕಡೆಗೆ ಮೃತದೇಹವನ್ನು ಕೊಂಡೊಯ್ಯುವುದಾದರು ಒಂದೇ ದರವನ್ನು ನಿಗದಿ ಪಡಿಸಲಾಗುತ್ತದೆ. ಇತರ ದೇಶಗಳು ಇದೇ ವಿಧಾನವನ್ನು ಅನುಸರಿಸುತ್ತಿದೆ ಎನ್ನಲಾಗಿದೆ. ಈ ಕಾರ್ಯಕ್ಕಾಗಿ ಸಾಮಾಜಿಕ ಕಾರ್ಯಕರ್ತ, ‘ಅನಿವಾಸಿ ಭಾರತೀಯ ಸಮ್ಮಾನ್’ ವಿಜೇತರೂ ಆದ ಅಶ್ರಫ್ ತಾಮರಶ್ಶೇರಿ ನಿರಂತರವಾಗಿ  ಅಧಿಕೃತರನ್ನು ಬೇಟಿಯಾಗುತ್ತಿದ್ದರು. ಇತ್ತೀಚೆಗೆ ಇದೇ ವಿಷಯಕ್ಕಾಗಿ ಒತ್ತಡ ಹೇರುವ ಸಲುವಾಗಿ ‘ತಾಮರಶ್ಶೇರಿಯೊಂದಿಗೆ’ ಎನ್ನುವ ಒಕ್ಕೂಟವನ್ನೂ ರೂಪೀಕರಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!