janadhvani

Kannada Online News Paper

ಕೊರೋನಾ ಲಸಿಕೆಯಲ್ಲಿ ಹಂದಿ ಮಾಂಸದ ಅಂಶ: ಧಾರ್ಮಿಕ ವಿವಾದ

ಬ್ರಿಟೀಷ್ , ಇಸ್ಲಾಮಿಕ್ ಮೆಡಿಕಲ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಡಾ.ಸಲ್ಮಾನ್ ವಾಕರ್ ಅವರು ಬಹಳಷ್ಟು ಔಷಧಿಗಳಲ್ಲಿ ಜಿಲಾಟಿನ್ ಅಂಶ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಕಾರ್ತ, ಡಿ.20: ಮಹಾಮಾರಿ ಕೊರೊನಾ ಲಸಿಕೆಗೆ ಬಳಕೆ ಮಾಡಲಾಗಿರುವ ಅಂಶಗಳು ಧಾರ್ಮಿಕ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ.ಇಂಡೋನೇಷ್ಯಾದ ರಾಜ ತಾಂತ್ರಿಕರು ಮತ್ತು ಇಸ್ಲಾಂ ಧಾರ್ಮಿಕ ಗುರುಗಳು ಅಲ್ಲಿ ಔಷಧ ತಯಾರಿಕೆಯ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆನಂತರ ಇಂಡೋನೇಷ್ಯಾಗೆ ಲಕ್ಷ ಗಟ್ಟಲೆ ಔಷಧಿಯ ಡೋಸೇಜ್‍ಗಳನ್ನು ಕಳುಹಿಸಲಾಗಿದೆ.

ಕೊರೊನಾ ಲಸಿಕೆ ಉತ್ಪಾದಕ ಕಂಪೆನಿಗಳು ಸುರಕ್ಷತೆ , ಸಾಗಾಣಿಕೆ ಮತ್ತು ಸಂಗ್ರಹಣೆಯ ದೃಷ್ಟಿಯಿಂದಾಗಿ ಹಂದಿ ಮಾಂಸದಿಂದ ತಯಾರಿಸಲಾದ ಜಿಲಾಟಿನ್ ಉತ್ಪನ್ನವನ್ನು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಕೆಲವು ಧಾರ್ಮಿಕ ಗುಂಪುಗಳ ವಿರೋಧಕ್ಕೆ ಕಾರಣವಾಗಿದೆ. ಹಂದಿ ಮಾಂಸದ ಅಂಶಗಳಿಂದ ಉತ್ಪಾದನೆಯಾದ ಲಸಿಕೆಗಳನ್ನು ತಿರಸ್ಕರಿಸುವಂತೆ ಕೆಲವು ಧಾರ್ಮಿಕ ಮುಖಂಡರುಗಳು ಕರೆ ನೀಡಿದ್ದಾರೆ.

ಬ್ರಿಟೀಷ್ , ಇಸ್ಲಾಮಿಕ್ ಮೆಡಿಕಲ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಡಾ.ಸಲ್ಮಾನ್ ವಾಕರ್ ಅವರು ಬಹಳಷ್ಟು ಔಷಧಿಗಳಲ್ಲಿ ಜಿಲಾಟಿನ್ ಅಂಶ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫೀಜರ್ , ಮಾಡರ್ನ್ ಮತ್ತು ಅಸ್ಟ್ರೆಜೆನೇಕಾ ಔಷಧಿಗಳು ಹಂದಿ ಮಾಂಸದ ಅಂಶಗಳಿಂದ ಮುಕ್ತವಾಗಿದೆ ಎಂದು ಆಯಾಯ ಕಂಪೆನಿಗಳ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ವಾದದ ಪ್ರಕಾರ ಔಷಧಿ ಚುಚ್ಚುಮದ್ದಿನ ರೂಪದಲ್ಲಿ ಇರುವುದರಿಂದ ಇಂದು ಧಾರ್ಮಿಕ ಹಿತಾಸಕ್ತಿಗೆ ಧಕ್ಕೆ ತರುವುದಿಲ್ಲ. ಬಾಯಿಂದ ಸೇವಿಸುವ ಅಂಶವಿದ್ದರೆ ಮಾತ್ರ ಅದು ಧರ್ಮ ನಿಷಿದ್ಧವಾಗಿದೆ ಎಂದು ಇಸ್ರೇಲ್‍ನ ರಬೆನಿಕಲ್ ಸಂಘಟನೆಯ ಅಧ್ಯಕ್ಷ ರಬಿ ಡೇವಿ ಸ್ಟೇವ್ ಸ್ಪಷ್ಟಪಡಿಸಿದ್ದಾರೆ.ಈ ಗೊಂದಲಗಳ ನಡುವೆಯೂ ಕೊರೊನಾ ಲಸಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಹಲವಾರು ಮುಖಂಡರು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com