janadhvani

Kannada Online News Paper

ಗೋಹತ್ಯೆ ನಿಷೇಧ ಕಾಯ್ದೆ; ಎಸ್ಸೆಸ್ಸೆಫ್ ಖಂಡನೆ

ಬೆಂಗಳೂರು: ರಾಜ್ಯದಲ್ಲಿ ಗ್ರಾಮಪಂಚಾಯತ್ ಚುನಾವಣೆಯ ಅಧಿಸೂಚನೆ ಹಾಗೂ ನೀತಿಸಂಹಿತೆ ಜಾರಿಯಲ್ಲಿದ್ದಾಗ್ಯೂ ಸರಕಾರವು ತರಾತುರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡಿಸಿರುವುದು ಖಂಡನೀಯ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.

ಕಾಯ್ದೆಯಲ್ಲಿ ವಿನಾಯ್ತಿ‌ ಹೊಂದಿದ ಜಾನುವಾರು ವಧೆಗೆ ಸಂಬಂಧಿಸಿ ಸೂಕ್ತ ಭದ್ರತೆಯ ಪ್ರಸ್ತಾಪ ಇಲ್ಲದಿರುವುದು ಹಾಗೂ ಗೋಹತ್ಯೆ ತಡೆಯುವವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದೆಂಬ ಅಂಶವು ಅಪಾಯಕಾರಿಯಾಗಿದೆ. ದುಷ್ಕರ್ಮಿಗಳು ಈ ಕಾಯ್ದೆಯನ್ನು ದುರುಪಯೋಗಪಡಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಪಾಯ ಇದೆ. ತಾರ್ಕಿಕವಲ್ಲದ ಈ ಅವೈಜ್ಞಾನಿಕ ಕಾಯ್ದೆಯನ್ನು ರಾಜ್ಯಸರಕಾರವು ಹಿಂಪಡೆಯಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಸಮಿತಿಯು ಪ್ರಕಟನೆಯಲ್ಲಿ ಆಗ್ರಹಿಸಿದೆ.

error: Content is protected !! Not allowed copy content from janadhvani.com