janadhvani

Kannada Online News Paper

ಲಾಕ್‌ಡೌನ್ ಅಗತ್ಯವಿಲ್ಲ, 2021ರ ಫೆಬ್ರುವರಿ ವೇಳೆಗೆ ಭಾರತದಲ್ಲಿ ಕೊರೋನಾ ಖತಂ?

ನವದೆಹಲಿ : ಕರೋನವೈರಸ್ ಸೋಂಕಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಸಮಿತಿ ದೊಡ್ಡ ಹೇಳಿಕೆ ನೀಡಿದೆ. ಫೆಬ್ರವರಿ 2021ರ ವೇಳೆಗೆ ಭಾರತದಲ್ಲಿ ಸಾಂಕ್ರಾಮಿಕ ರೋಗ ಕೊನೆಗೊಳ್ಳಬಹುದು ಎಂದು ಸಮಿತಿ ಹೇಳಿದೆ. ಅಷ್ಟೇ ಅಲ್ಲ ಭಾರತದಲ್ಲಿ ಕೊರೋನದ ಕೆಟ್ಟ ಹಂತ ಕಳೆದಿದೆ ಎಂದು ಸಮಿತಿ ಹೇಳಿಕೊಂಡಿದೆ.

ಫೆಬ್ರವರಿ 2021ರ ವೇಳೆಗೆ ಕೊರೋನಾ ಭಾರತದಲ್ಲಿ ಕೊನೆಗೊಳ್ಳುತ್ತದೆ ಎಂದು ಸರ್ಕಾರದ ಕೊರೋನಾ ಸಮಿತಿಯಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ಹೇಳುತ್ತಾರೆ. ಜೊತೆಗೆ ಕರೋನದ ಪ್ರಕರಣಗಳು ವೇಗವಾಗಿ ಕ್ಷೀಣಿಸುತ್ತಿವೆ ಎಂದವರು ತಿಳಿಸಿದ್ದಾರೆ.

ಭಾರತದಲ್ಲಿ ಒಂದು ಕೋಟಿ 6 ಲಕ್ಷಕ್ಕಿಂತ ಹೆಚ್ಚು ಕರೋನಾವೈರಸ್ (Coronavirus) ಪ್ರಕರಣಗಳು ಬರುವುದಿಲ್ಲ ಎಂದು ಸರ್ಕಾರಿ ಸಮಿತಿ ಹೇಳಿಕೊಂಡಿದೆ. ಪ್ರಸ್ತುತ ಸೋಂಕಿತರ ಸಂಖ್ಯೆಯಲ್ಲಿ ದೇಶ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ 7.5 ದಶಲಕ್ಷಕ್ಕೆ ತಲುಪಿದೆ, ಆದರೆ ವಿಶ್ವದಲ್ಲೇ ಕೊರೋನಾದಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯಲ್ಲಿ ಭಾರತ ಮುಂದಿದೆ.

ಇನ್ನು ಮುಂದೆ ಲಾಕ್‌ಡೌನ್ ಅಗತ್ಯವಿಲ್ಲ:
ಕೇಂದ್ರ ಸರ್ಕಾರ ನೇಮಿಸಿದ ಸಮಿತಿ ತನ್ನ ವರದಿಯಲ್ಲಿ ದೇಶದಲ್ಲಿ ಇನ್ನುಮುಂದೆ ಲಾಕ್‌ಡೌನ್ (Lockdown) ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವರದಿಯ ಪ್ರಕಾರ ಕರೋನಾ ಮಾರ್ಗಸೂಚಿಯನ್ನು ಅನುಸರಿಸಿದರೆ ಲಾಕ್‌ಡೌನ್ ಹೇರುವ ಅಗತ್ಯವಿರುವುದಿಲ್ಲ. ಆದ್ದರಿಂದ ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣವನ್ನು ಮುಂದಿನ ವರ್ಷದ ಆರಂಭದ ವೇಳೆಗೆ ನಿಯಂತ್ರಿಸಬಹುದು ಎಂದು ಹೇಳಲಾಗಿದೆ.

error: Content is protected !! Not allowed copy content from janadhvani.com