janadhvani

Kannada Online News Paper

ಕಾರ್ಯಕರ್ತರು ಇತಿಹಾಸ ಅರಿವುಳ್ಳವರಾಗಬೇಕು: ಎಸ್ಪಿ ಹಂಝ ಸಖಾಫಿ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SჄS) ಈಶ್ವರಮಂಗಲ ಸೆಂಟರ್ ವತಿಯಿಂದ ಸೆಟೆಂಪ್ ಪ್ರತಿನಿಧಿ ಕಾರ್ಯಗಾರ ಮತ್ತು ಬೇಕಲ್ ಉಸ್ತಾದ್ ರವರ ಅನುಸ್ಮರಣಾ ಕಾರ್ಯಕ್ರಮ ಅಕ್ಟೋಬರ್ 17 ರಂದು ಈಶ್ವರಮಂಗಲ ತ್ವೈಬ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರಮಂಗಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ರವರು ವಹಿಸಿದ್ದರು.ಹಂಝ ಮುಸ್ಲಿಯಾರ್ ಈಶ್ವರಮಂಗಲ ರವರ ದುವಾದೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮವನ್ನು ದ ಕ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಹದಿ ಮಜೂರು ಉದ್ಘಾಟಿಸಿದರು.

ತಮ್ಮ ಇಡೀ ಜೀವನವನ್ನು ಆರಿವು ಮತ್ತು ವಿಜ್ಞಾನಕ್ಕೆ ಮೀಸಲಿಟ್ಟ ಮಹಾನ್ ಅಇಮ್ಮತುಗಳು ಮತ್ತು ವಿದ್ವಾಂಸರ ಇತಿಹಾಸವನ್ನು ಅಧ್ಯಯನ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಸಿದ್ಧರಾಗಬೇಕು ಎಂಬ ಸಂದೇಶ ನೀಡಿ ಕರ್ನಾಟಕ ರಾಜ್ಯ ಸುನ್ನಿ ಕೋಓಡಿನೇಶನ್ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಕಾರ್ಯಗಾರವನ್ನು ನಡೆಸಿದರು.

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಖಾಸಿಂ ಪದ್ಮುಂಜ ಜಿಲ್ಲಾ ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಮುಹಮ್ಮದ್ ಕುಂಞ್ಞಿ ಸರ್ಳಿಕಟ್ಟೆ , ಈಶ್ವರಮಂಗಲ ಸೆಂಟರ್ ಉಸ್ತುವಾರಿ ಸಿದ್ದೀಕ್ ಹಾಜಿ ಕಟ್ಚೆಕಾರ್ ಅಬ್ದುಲ್ ಅಝೀಝ್ ಮಿಸ್ಬಾಹಿ ಪ್ರಭಾಷಣ ಮಾಡಿದರು, ಕೆಸಿಎಫ್ ನಾಯಕ ಕೆಎಚ್ಚ್ ಮುಹಮ್ಮದ್ ಫೈಝಿ, ಜಿಲ್ಲಾ ಸದಸ್ಯರಾದ ಹನೀಫ್ ಹಾಜಿ ಗಾಳಿಮುಖ, ಅಬೂಬಕರ್ ಮುಸ್ಲಿಯಾರ್ ಪಾಳ್ಯತ್ತಡ್ಕ, ಎಸ್ ಎಸ್ ಎಫ್ ಜಿಲ್ಲಾ ಸದಸ್ಯ ಫೈಝಲ್ ಝುಹ್ರಿ ಕುಕ್ಕಾಜೆ, ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಕೊಯಿಲ ಸ್ವಾಗತಿಸಿ, ಕಾರ್ಯದರ್ಶಿ ಉಮರ್ ಸಅದಿ ವಂದಿಸಿದರು.ಕಾರ್ಯಕ್ರಮದಲ್ಲಿ ಸೆಂಟರ್ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಕೌಂಸಿಲರುಗಳು ಹಾಗೂ ಒಂಬತ್ತು ಬ್ರಾಂಚುಗಳ ಪ್ರತಿನಿಧಿಗಳು ಭಾಗವಹಿಸಿದರು.
ಎಸ್‌ಎಸ್ ಈಶ್ವರಮಂಗಲ ಸೆಕ್ಟರ್ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸ್ವಯಂಸೇವಕರಾಗಿ ಸಹಕರಿಸಿದರು.

error: Content is protected !! Not allowed copy content from janadhvani.com