janadhvani

Kannada Online News Paper

ಸರಕಾರಿ ಕಚೇರಿಗಳಲ್ಲಿ ಬಿಎಸ್ಎನ್ಎಲ್ ಬಳಕೆ ಕಡ್ಡಾಯ- ಕೇಂದ್ರ ಆದೇಶ

ಹೊಸದಿಲ್ಲಿ: ಎಲ್ಲ ಸರಕಾರಿ ಕಚೇರಿಗಳು, ಸಚಿವಾಲಯಗಳು, ಸಾರ್ವಜನಿಕ ಇಲಾಖೆ ಮತ್ತು ಸಾರ್ವಜನಿಕ ಸೇವೆಗಳ ಘಟಕಗಳು ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ () ಮತ್ತು ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್(ಎಂಟಿಎನ್ಎಲ್) ಸೇವೆಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿದೆ.

ಸರಕಾರಿ ಕಚೇರಿಗಳು ಇಂಟರ್ನೆಟ್, ಬ್ರಾಡ್‌ಬ್ಯಾಂಡ್, ಸ್ಥಿರ ದೂರವಾಣಿ (ಲ್ಯಾಂಡ್‌ಲೈನ್) ಮತ್ತು ಲೀಸ್‌ಲೈನ್ ಮತ್ತು ಇತರೆ ದೂರಸಂಪರ್ಕ ಸೇವೆಗಳಿಗೆ ಬಿಎಸ್ಎನ್ ಎಲ್ / ಎಂಟಿಎನ್‌ಎಲ್ ನೆಟ್‌ವರ್ಕ್‌ ಅನ್ನೇ ಕಡ್ಡಾಯವಾಗಿ ಬಳಸುವಂತೆ ಆದೇಶಿಸಲಾಗಿದೆ.

ಈ ಕುರಿತು ಕೇಂದ್ರ ದೂರಸಂಪರ್ಕ ಸಚಿವಾಲಯ ಅಕ್ಟೋಬರ್ 12ರಂದೇ ಆದೇಶ ಹೊರಡಿಸಿದೆ. ಎಲ್ಲ ಸಚಿವಾಲಯಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ನಂತರವೇ ದೂರಸಂಪರ್ಕ ಇಲಾಖೆ ಆದೇಶ ಹೊರಡಿಸಿದೆ ಎಂದು ವೆಚ್ಚಗಳ ಸಚಿವಾಲಯ ತಿಳಿಸಿದೆ.

ಇದರಂತೆ ಎಲ್ಲ ಕೇಂದ್ರ ಸರಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಬಿಎಸ್ಎನ್ಎಲ್ 15,500 ಕೋಟಿ ರೂಪಾಯಿ, ಎಂಟಿಎನ್ಎಲ್ 3, 694 ಕೋಟಿ ರೂಪಾಯಿ ನಷ್ಟವಾಗಿದೆ. ಹೀಗಾಗಿ ನಷ್ಟದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಿಗೆ ಉತ್ತೇಜನ ನೀಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ನವೆಂಬರ್ 2008ರಲ್ಲಿ 2.9 ಕೋಟಿ ಇದ್ದ ಬಿಎಸ್ಎನ್ಎಲ್ ವೈರ್‌ಲೈನ್ ಗ್ರಾಹಕರ ಸಂಖ್ಯೆ ಪ್ರಸಕ್ತ ವರ್ಷದ ಜುಲೈಗೆ 80 ಲಕ್ಷಕ್ಕೆ ಇಳಿದಿದೆ. ಎಂಟಿಎನ್ಎಲ್ ನಲ್ಲಿ 2008ರ ನವೆಂಬರ್ ನಲ್ಲಿ 35.4 ಲಕ್ಷ ಇದ್ದ ಗ್ರಾಹಕರ ಸಂಖ್ಯೆ ಈ ವರ್ಷ ಜುಲೈಗೆ 30.7 ಲಕ್ಷಕ್ಕೆ ಇಳಿದಿದೆ.

error: Content is protected !! Not allowed copy content from janadhvani.com