janadhvani

Kannada Online News Paper

ಸಂಕಷ್ಟದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಊರಿಗೆ ಕಳುಹಿಸಿದ ಕೆ.ಸಿ.ಎಫ್ ಸೌದಿ ಅರೇಬಿಯಾ ಸಾಂತ್ವನ ತಂಡ…

ಸೌದಿ ಅರೇಬಿಯಾದ: ಖಮೀಸ್ ಮುಶೈತ್, ಎಂಬಲ್ಲಿ ಕಳೆದ ಸುಮಾರು ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೂಲತಃ ಹೈದರಾಬಾದ್ (ತೆಲಂಗಾಣ) ನಿವಾಸಿ #ಶೇಖ್ ಮುಹಮ್ಮದ್# ಎಂಬವರನ್ನು , ಕೆ.ಸಿ.ಎಫ್ ಸಾಂತ್ವನ ತಂಡದ ನಾಯಕರು ಸಂಪರ್ಕಿಸಿ, ಅವರಿಗೆ ಬೇಕಾಗಿರುವ ಎಲ್ಲಾ ರೀತಿಯ ಆರೋಗ್ಯ, ಸಲಹೆ, ಆರೈಕೆಯನ್ನು ಮಾಡಿ ಕೊನೆಗೂ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಈ ಒಂದು ಸಾಂತ್ವನ ಸೇವೆಗೆ ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ನಾಯಕರಾದ #ಜನಾಬ್ ಅಬ್ದುಲ್ ರಝಾಕ್ ಬನ್ನೂರ್ ಹಾಗೂ #ಸಲ್ಮಾನ್‌ ಚಿಕ್ಕಮಗಳೂರು, #ಖಾಲಿದ್ ಕಬಕ, #ಇಕ್ಬಾಲ್ ಮದನಿ ಪಾವೂರು, ಕೆ.ಸಿ.ಎಫ್ ಮದೀನಾ ಸಾಂತ್ವನ ವಿಭಾಗದ ನಾಯಕರಾದ #ಅಬ್ದುಲ್ ರಝಾಕ್ ಉಳ್ಳಾಲ್# ಸಹಿತವಿರುವ ತಂಡ.. ನಡೆಯಲು ಸಾಧ್ಯವಾಗದ ಶೇಖ್ ಮುಹಮ್ಮದ್ ರವರನ್ನು ನಿನ್ನೆ (10/10/2020) ರಂದು ಜಿದ್ದಾ ವಿಮಾನ ನಿಲ್ದಾಣ ಮೂಲಕ ಪ್ರತ್ಯೇಕ ಆಸನದ ಸೌಕರ್ಯವನ್ನು ಏರ್ಪಡಿಸಿ ತಾಯ್ನಾಡಿಗೆ ಕಳುಹಿಸಲು ಯಶಸ್ವಿಯಾಗಿದ್ದಾರೆ.

ಈ ಮೂಲಕ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆ.ಸಿ.ಎಫ್ ನೇತೃತ್ವದಲ್ಲಿ, ಕನ್ನಡಿಗರಲ್ಲದೆ ಇತರ ರಾಜ್ಯದ ಅನಿವಾಸಿಗರಿಗೂ ತನ್ನ ಸಾಂತ್ವನ ಸೇವೆಯ ಪುಷ್ಟಿಯನ್ನು ನೀಡುತ್ತಾ ಕೆ.ಸಿ.ಎಫ್ ನ ಕಾರ್ಯಾಚರಣೆಯನ್ನು ಯಾವುದೇ ಭೇದವಿಲ್ಲದೆ ಎಲ್ಲಾ ಕಾರ್ಯಕ್ಷೇತ್ರಗಳಿಗೆ ಮೀಸಲಿಟ್ಟಿದ್ದು ಹೆಮ್ಮೆಯ ವಿಚಾರ ಎಂದು ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ಅದ್ಯಕ್ಷರಾದ #ಅಬ್ದುಲ್ ರಝಾಕ್ ಬನ್ನೂರು# ಈ ಕುರಿತು ಅಭಿಪ್ರಾಯ ಪಟ್ಟಿದ್ದಾರೆ.

ವರದಿ:
ಆಸಿಫ್ ಬದ್ಯಾರ್,

error: Content is protected !! Not allowed copy content from janadhvani.com