janadhvani

Kannada Online News Paper

ಎಸ್ಸೆಸ್ಸೆಫ್ ಉಡುಪಿ ಜಿಲ್ಲೆ ಬ್ಲಡ್ ಸೈಬೋ: 3ನೇ ರಕ್ತದಾನ ಶಿಬಿರ ಯಶಸ್ವಿ

ರಾಜ್ಯದಲ್ಲೇ ಹೆಚ್ಚು ಸಂಚಲನ ಮೂಡಿಸಿದ SSF ಕರ್ನಾಟಕ ಹೆಲ್ಪ್ ಡೆಸ್ಕ್ ಬ್ಲಡ್ ಸೈಬೋ- ಕಿಲ್ಲೂರು ಸಅದಿ


ಉಡುಪಿ ಜಿಲ್ಲೆ ಬ್ಲಡ್ ಸೈಬೋ ಇದರ 3 ನೇ ರಕ್ತದಾನ ಶಿಬಿರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಡಿವಿಷನ್ ವ್ಯಾಪ್ತಿಯ ಕುಕ್ಕುಂದೂರು ಮಸ್ಜಿದ್ ವಠಾರದಲ್ಲಿ ನಡೆಯಿತು.ಕಾರ್ಕಳ ಸಿಟಿ ಆಸ್ಪತ್ರೆ ಸರ್ಜನ್ ಡಾ|ರಹ್ಮತುಲ್ಲಾ ರವರು ಉದ್ಘಾಟಿಸಿದರು. ಅಸ್ಸಯ್ಯಿದ್ ಅಲವಿ ಫಾಝಿಲ್ ಪೂಕೋಯ ತಂಙಳ್ ದುಆ ಮೂಲಕ ಚಾಲನೆ ನೀಡಿದರು.

ಮುಖ್ಯ ಭಾಷಣ ನಡೆಸಿದ ತ್ವೈಬಾ ಗಾರ್ಡನ್ ಪ್ರಿನ್ಸಿಪಾಲ್ ಕಿಲ್ಲೂರು ಸಅದಿ , ಜೀವ ದಾನ ನೀಡುವಂತಹ ರಕ್ತದಾನ ಬಹಳಷ್ಟು ಯಶಸ್ವಿಯಾಗಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು ಸಂಚಲನ ಮೂಡಿಸಿದ SSF ಕರ್ನಾಟಕ ಹೆಲ್ಪ್ ಡೆಸ್ಕ್ ನ ಬ್ಲಡ್ ಸೈಬೋ ಕಾರ್ಯಾಚರಣೆ ಶ್ಲಾಘನೀಯ ಎಲ್ಲರೂ ಇದರಲ್ಲಿ ಭಾಗಿಯಾಗಬೇಕೆಂದು ಕರೆಯಿತ್ತರು.

ಸಭೆಯ ಅಧ್ಯಕ್ಷ ರಾಗಿ ಕಾರ್ಕಳ ಡಿವಿಷನ್ ಅಧ್ಯಕ್ಷ ಅಲ್ತಾಫ್ ಬಂಗ್ಲೆಗುಡ್ಡೆ, ಉಡುಪಿ ಜಿಲ್ಲಾ ssf ಅಧ್ಯಕ್ಷ ಶಬೀರ್ ಸಖಾಫಿ, ಕಾರ್ಕಳ ಕರ್ನಾಟಕ ಕಿಸಾನ್ ಕಾರ್ಯದರ್ಶಿ ಉದಯ ಶೆಟ್ಟಿ, ಬಜಗೋಳಿ ಜಮಾ ಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮುಸ್ಲಿಯಾರ್,ಖ್ಯಾತ ಉದ್ಯಮಿ ತ್ರಿವಿಕ್ರಮ ಕಿಣಿ,ಕಾರ್ಕಳ SSF ನಾರ್ತ್ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಮದನಿ ಹುಮೈದಿ, ಇಂಡಿಯನ್ ರೆಡ್ಕ್ರಾಸ್ ಸೊಸೈಟ್ ಡಾ|ಶರವಣ್ ಮಾತನಾಡಿದರು.

ವೇದಿಕೆಯಲ್ಲಿ ಕಾರ್ಕಳ SMA ,ಅಧ್ಯಕ್ಷ ಅಬ್ದುರ್ರಹ್ಮಾನ್ ಐಡಿಯಲ್, ಕುಕ್ಕುಂದೂರು ಜಮಾ ಅತ್ ಮುಹ್ಯಿದ್ದೀನ್, ಕಾರ್ಕಳ SSF ಉಸ್ತುವಾರಿ ಪಯ್ಯಾರ್ ಮುಹ್ಯಿದ್ದೀನ್ ಸಖಾಫಿ, ಎಣ್ಣೆಹೊಳೆ ಖತೀಬ್ PJ ಮದನಿ, ಸಮದ್ ಬೊಳ್ಲೋಟ್ಟು,
ಉಪಸ್ಥಿತರಿದ್ದರು.ಒಟ್ಟು 74 ಮಂದಿ ರಕ್ತದಾನ ಮಾಡಿದರು.

ಉಡುಪಿ ಜಿಲ್ಲಾ ಹೆಲ್ಪ್ ಡೆಸ್ಕ್ ಕನ್ವೀನರ್ ಮಜೀದ್ ಹನೀಫಿ ಉಸ್ತಾದರನ್ನು ಈ ಸಂದರ್ಭದಲ್ಲಿ ಡಿವಿಷನ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
SSF ರಾಜ್ಯ ಸಮಿತಿ‌ ಸದಸ್ಯ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ NC ರಹೀಂ ಹೊಸ್ಮಾರ್ ಸ್ವಾಗತಿಸಿ, ಡಿವಿಷನ್ ಕಾರ್ಯದರ್ಶಿ ನವಾಝ್ ಬದ್ರಿಯಾ ವಂದಿಸಿದರು.
ಕಾರ್ಕಳ ನೋರ್ತ್ ಸೆಕ್ಟರ್ ಪ್ರ. ಕಾರ್ಯದರ್ಶಿ ಅನೀಸ್ ಸರ್ ಹಿಂದಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com