janadhvani

Kannada Online News Paper

ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದಿಂದ ಆಲಾಡಿಯಲ್ಲಿ ಶ್ರಮದಾನದ ಮೂಲಕ ಆಸರೆ

ಆಲಾಡಿ: ಬದ್ರಿಯಾ ಜುಮ್ಮಾ ಮಸ್ಜಿದ್ ಆಲಾಡಿ ಜಮಾತ್ಗೊಳಪಟ್ಟ ಹಾಗೂ ಬದ್ರಿಯಾ ಜುಮ್ಮಾ ಮಸ್ಜಿದ್ ಇದರ ಮನೆ ವಂತಿಗೆ ಸಂಗ್ರಹಿಸುವ ಇಸ್ಮಾಯಿಲ್ ಆಲಾಡಿ ಎಂಬವರ ಮನೆ ಕಟ್ಟಲು ಶ್ರಮದಾನದ ಮೂಲಕ ವಿಖಾಯ ತಂಡ ಮಹತ್ವದ ಹೆಜ್ಜೆ ಇಟ್ಟಿದೆ.ಈ ಮೊದಲು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇಸ್ಮಾಯಿಲ್ ಇವರು ಹಲವು ವರ್ಷಗಳಿಂದ ಕೆಲಸ ಮಾಡಲಾಗದೆ ಮನೆಯಲ್ಲೇ ಇದ್ದು , ಕಷ್ಟದಲ್ಲಿಯೇ ಜೀವನ ದೂಡುತ್ತಿರುವಾಗ ಮನೆ ಕುಸಿತ ಅಘಾತ ಉಂಟುಮಾಡಿದೆ.

ಇಸ್ಮಾಯಿಲ್ ಅವರ ಮನೆಯ ಒಂದು ಭಾಗ ಕಳೆದ ಮಳೆಗೆ ಕುಸಿತಕಂಡಿತು ಇದರ ಬಳಿಕ ಹಳೆ ಮನೆಯ ಸಮೀಪ ಹೊಸ ಮನೆ ನಿರ್ಮಾಣಕ್ಕೆ ಇಸ್ಮಾಯಿಲ್ ಅವರು ಹೊರಟಿದ್ದು ಆದರೆ ಇಲ್ಲಿ ಆರ್ಥಿಕ ಸಮಸ್ಯೆ ಎದುರಾಯಿತು. ಇದರ ಬಗ್ಗೆ ಗಮನ ಹರಿಸಿದ SkSSF ಆಲಾಡಿ ಯುನಿಟ್ ತಮ್ಮ ತಂಡದ ಸದಸ್ಯರಿಂದ ಶ್ರಮದಾನದ ಮೂಲಕ ಇಸ್ಮಾಯಿಲ್ ಆಲಾಡಿ ಅವರಿಗೆ ಆಸರೆಯಾಗುತ್ತಿದ್ದಾರೆ.

ಅಕ್ಟೋಬರ್ 04 ರ ಅದಿತ್ಯವಾರ ಬೆಳಿಗ್ಗೆ ಕೆಲಸ ಆರಂಭಕ್ಕೆ ಮೊದಲು ಬಹು! ರಿಯಾಝ್ ಪೈಝಿ ಮಲಾರ್ (ಖತೀಬರು ಆಲಾಡಿ ಜುಮ್ಮಾ ಮಸ್ಜಿದ್) ಇವರ ದುಅದ ಮೂಲಕ ಕೆಲಸ ಕಾರ್ಯಕ್ಕೆ ಚಾಲನೆ ನೀಡಲಾಯಿತು,ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಕುಚ್ಚಿಗುಡ್ಡೆ ಉದ್ದೋಟ್, ಬದ್ರಿಯಾ ಜುಮ್ಮಾ ಮಸ್ಜಿದ್ ಕಾರ್ಯದರ್ಶಿ ಯೂಸುಫ್ ಅಂಗಡಿ,ಬದ್ರಿಯಾ ಜುಮ್ಮಾ ಮಸ್ಜಿದ್ ಇದರ ಖಜಾಂಜಿಯಾದ ಮನ್ಸೂರ್ ಆಲಾಡಿ ಅಂಗಡಿ,SKSSF ಆಲಾಡಿ ಇದರ ಅಧ್ಯಕ್ಷರಾದ ಹಕೀಂ ಕಡಬ ,ಕಾರ್ಯದರ್ಶಿ ಅಹ್ಮದ್ ಕಬೀರ್ ಗಡಿಯಾರ,ವಿಖಾಯ ಅಧ್ಯಕ್ಷರು ಇಬ್ರಾಹಿಮ್ ಮೋನು,ಉಸ್ತುವಾರಿ ಅಶ್ರಫ್ ಕಳ್ಳಿಗೆ
ಸಜೀಪ ಕ್ಲಸ್ಟರ್ ಕಾರ್ಯದರ್ಶಿ ಯೂಸುಫ್ ಮಂಜಲ್ಪಾದೆ ಹಾಗೂ SKSSF ವಿಖಾಯದ ಕಾರ್ಯಕರ್ತರು ಭಾಗಿಯಾಗಿದ್ದರು‌.

error: Content is protected !! Not allowed copy content from janadhvani.com