janadhvani

Kannada Online News Paper

ಅಳಿಕೆ: ಮರ್ಹೂಂ ಇಬ್ರಾಹಿಂ ಕಟ್ಟೆ ಸ್ಮರಣಾರ್ಥ ರಕ್ತದಾನ ಶಿಬಿರ ಯಶ್ವಸಿ

ವಿಟ್ಲ ,ಅ3: ಅಳಿಕೆ ಮರ್ಹೂಂ ಇಬ್ರಾಹಿಂ ಕಟ್ಟೆ ರವರ ಸ್ಮರಣಾರ್ಥ, SYS.SSF.KCF ಪ್ರಾಯೋಜಕತ್ವದಲ್ಲಿ SSF ವಿಟ್ಲ SECTOR ನ ಸಹಕಾರದೊಂದಿಗೆ ರೆಡ್ ಕ್ರಾಸ್ ಮತ್ತು ಲೇಡಿಗೋಷನ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಇಂದು ನಡೆದ ರಕ್ತ ದಾನ ಶಿಬಿರ ಯಶ್ವಸಿಯಾಗಿ ನಡೆಯಿತು. ಬೆಳಗ್ಗೆ 8:00 ರಿಂದ ಮಧ್ಯಾಹ್ನ 1:30 ವರೆಗೆ ರಕ್ತ ದಾನ ಶಿಬಿರ ನಡೆಸಲಾಯಿತು.

ಅಳಿಕೆ ಗ್ರಾಮ ಪಂಚಯಾತ್ ಅಧ್ಯಕ್ಷ
ಪದ್ಮನಾಭ ಪೂಜಾರಿ ಸಣ್ಣಗುತ್ತು, ರೆಡ್ ಕ್ರಾಸ್ ಮುಖ್ಯಸ್ಥ ಪ್ರವೀಣ್ ಶೆಟ್ಟಿ , ಕರೀಂ ಕದ್ಕಾರ್,
ಇಮ್ರಾನ್ ರೆಂಜಲಾಡಿ, ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಅಳಿಕೆ, SYS ಅಳಿಕೆ ಬ್ರಾಂಚ್ ಅಧ್ಯಕ್ಷರಾದ A.P ಉಮ್ಮರ್ ಉಸ್ತಾದ್, SSF ಅಳಿಕೆ ಶಾಖೆ ಅಧ್ಯಕ್ಷ ಹುಸೈನಾರ್ NK ಅಳಿಕೆ ,
ಅಳಿಕೆ ಮಸೀದಿ ಅಧ್ಯಕ್ಷರಾದ ಶೇಖ್ ಅಲಿ ಚೆಂಡುಕಳ, ಅಬೂಬಕ್ಕರ್ ಹಾಜಿ ಬೈರಿಕಟ್ಟೆ, ಇಸ್ಮಾಯಿಲ್ ಮಾಸ್ಟರ್ ಮಂಗಲಪದವು, ಜಹಾಝ್ CH ಅಳಿಕೆ ಮುಂತಾದ ಗಣ್ಯರು ಹಾಗು SSF ಸೆಕ್ಟರ್,SSF ಡಿವಿಷನ್ ನೇತಾರರು ಭಾಗವಹಿಸಿದ್ದರು. ಅತಿಥಿಗಳನ್ನು ಪುಟ್ಟ ಕಾಣಿಕೆ ನೀಡಿ ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2020ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ ನಮ್ಮೆಲ್ಲರ ಸಂಘಟನಾ ನಾಯಕರೂ ಸಕ್ರಿಯ ಕಾರ್ಯಕರ್ತರೂ ಸುನ್ನೀ ಸಂಘ-ಸಂಸ್ಥೆಗಳ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರಲ್ಲಿ ಓರ್ವರೂ ಆದ ಇಸ್ಮಾಯಿಲ್ ಮಾಸ್ಟರ್ ಮಂಗಲಪದವು
ಇವರನ್ನು ಹಾಗೂ ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ, ಪ್ರಚಾರ ಬಯಸದ ಸದಾ ಲವಲವಿಕೆಯಲ್ಲಿ ಎತ್ತಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸುವ ನಿಸ್ವಾರ್ಥಿ ಬೈರಿಕಟ್ಟೆ ಅಬೂಬಕರ್ ಹಾಜಿ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುಂಚೆ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿದ ಅಬೂಬಕರ್ ಹಾಜಿ ಬೈರಿಕಟ್ಟೆ ಅವರು ತಾನು ಉದ್ಘಾಟನೆ ಮಾಡಿದ್ದಲ್ಲದೆ,
ಸ್ವಯಂ ರಕ್ತ ದಾನ ಮಾಡಿ ಇಂದಿನ ಪೀಳಿಗೆಯ ಯುವಕರಿಗೆ ಮಾದರಿಯಾದರು. ರಕ್ತದಾನದಿಂದ ಯಾವುದೇ ತೊಂದರೆಯಿಲ್ಲ ತಾನು ಈ ವಯಸ್ಸಿನಲ್ಲೂ ರಕ್ತದಾನ ಮಾಡಿದ್ದೇನೆ, ಇದರಿಂದ ಯಾವುದೇ ಅರೋಗ್ಯ ಸಮಸ್ಯೆಗಳು ಉಂಟಾಗುದಿಲ್ಲ ಎಂದು ರಕ್ತದಾನದ
ಮಹತ್ವವನ್ನು ಇಂದಿನ ಯುವಕರಿಗೆ ಮನದಟ್ಟು ಮಾಡಿದರು, ಅವರ ಈ ಸಾಮಾಜಿಕ ಹಾಗು ಧಾರ್ಮಿಕ ಚಟುವಟಿಕೆಗಳು ನಮ್ಮ ಸಮಾಜಕ್ಕೆ ಮಾದರಿ.

” ಒಟ್ಟು 61 ಯುನಿಟ್ ರಕ್ತ ಸಂಗ್ರಹ”!

ಎಸ್ಸೆಸ್ಸೆಪ್ ವಿಟ್ಲ ಡಿವಿಷನ್ ವ್ಯಾಪ್ತಿಯ ಅಳಿಕೆ ಶಾಖೆಯಲ್ಲಿ ಇಂದು ನಡೆದ ಎಸ್ಸೆಸ್ಸೆಪ್ ಬ್ಲಡ್ ಸೈಬೊ ದ.ಕ ಜಿಲ್ಲೆ ಇದರ 191 ನೇ ರಕ್ತದಾನ ಶಿಬಿರದಲ್ಲಿ 61 ಯುನಿಟ್ ರಕ್ತ ಸಂಗ್ರಹವಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿದೆ.

error: Content is protected !! Not allowed copy content from janadhvani.com