janadhvani

Kannada Online News Paper

ವ್ಯಭಿಚಾರ ಅಪರಾಧ ಎನ್ನಲು ನಿಯಮಗಳಿಲ್ಲ- ಬಾಂಬೆ ಹೈಕೋರ್ಟ್

ಮುಂಬೈ : ವ್ಯಭಿಚಾರ ಅಪರಾಧ ವೆಂದು ಯಾವುದೇ ಕಾನೂನಿನಲ್ಲೂ ಇಲ್ಲ, ತಮಗೆ ಇಷ್ಟವಾದ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುವ ಹಕ್ಕು ಮಹಿಳೆಯರು ಹೊಂದಿದ್ದಾರೆ ಎಂದು ಬಾಂಬೆ ಹೈಕೋರ್ಟ್ ವ್ಯಾಖ್ಯಾನಿಸಿದೆ.
ಅವರ ಇಷ್ಟದ ವಿರುದ್ದವಾಗಿ ನಿರ್ಬಂಧ ವಿಧಿಸುವುದು ಸರಿಯಾದುದಲ್ಲ ಎಂದು ಹೇಳಿ ಮೂವರು ಮಹಿಳೆಯರನ್ನು ಬಂಧ ಮುಕ್ತಗೊಳಿಸಲು ಆದೇಶಿಸಿದೆ.

ಈ ಸಂಬಂಧ ನ್ಯಾಯಮೂರ್ತಿ ಪೃಥ್ವಿ ರಾಜ್ ಚೌಹಾಣ್, ಅಕ್ರಮ ಮಾನವ ಸಾಗಾಣಿಕೆ( ನಿಗ್ರಹ) ಕಾಯ್ದೆ ಕುರಿತು ಮಹತ್ವದ ವ್ಯಾಖ್ಯಾನ ಮಾಡಿದ್ದಾರೆ. ಕಳೆದ ವರ್ಷ ವ್ಯಭಿಚಾರ ಪ್ರಕರಣದಲ್ಲಿ ಸಿಲುಕಿದ್ದ ಮೂವರು ಯುವತಿಯರನ್ನು ಮಹಿಳಾ ಹಾಸ್ಟೆಲ್ ಗೆ ಕಳುಹಿಸುವಂತೆ ಅಧೀನ ನ್ಯಾಯಾಲಯದ ತೀರ್ಮಾನ ಸರಿಯಾದುದಲ್ಲ ಎಂದು ಹೇಳಿದೆ.

ಪಿಐಟಿಎ-1956 ಕಾಯ್ದೆಯಲ್ಲಿ ವ್ಯಭಿಚಾರವನ್ನು ರದ್ದುಪಡಿಸಬೇಕೆಂದು ಎಲ್ಲಿಯೂ ಹೇಳಿಲ್ಲ. ಅದನ್ನು ಶಿಕ್ಷಾರ್ಹ ಅಪರಾಧ ಎನ್ನಲು ಯಾವುದೇ ನಿಯಮಗಳಿಲ್ಲ. ಇಂತಹ ಪ್ರಕರಣಗಳಲ್ಲಿ ಸಿಲುಕಿದವರಿಗೆ ಶಿಕ್ಷೆ ವಿಧಿಸಬೇಕೆಂಬ ನಿಬಂಧನೆ ಇಲ್ಲ ಎಂದು ನ್ಯಾಯಮೂರ್ತಿ ಚೌಹಾಣ್ ಹೇಳಿದ್ದಾರೆ.
ಆದರೆ, ಅದೇ ಸಮಯದಲ್ಲಿ .. ವ್ಯಕ್ತಿಯನ್ನು ವಂಚಿಸಿ, ಸ್ವಪ್ರಯೋಜನಕ್ಕಾಗಿ ಸುಲಿಗೆ ನಡೆಸಿದರೆ ಮಾತ್ರ ಅದು ನಿಶ್ಚಿತವಾಗಿ ಶಿಕ್ಷೆ ವಿಧಿಸಬೇಕಾದ ಅಪರಾಧವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ ರಾಜ್ಯಾಂಗ ಪ್ರಕಾರ ದೇಶದಲ್ಲಿ ನಾಗರೀಕರು ಎಲ್ಲಿ ಬೇಕಾದರೂ ವಾಸಿಸುವ, ತಮಗೆ ಇಷ್ಟವಾದ ವೃತ್ತಿಯನ್ನು ಕೈಗೊಳ್ಳುವ ಹಕ್ಕು ನೀಡಿದೆ ಎಂದು ಹೇಳಿ, ತಕ್ಷಣವೇ ಬಂಧಿತ ಮೂವರು ಯುವತಿಯರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. ಸದರಿ ಯುತಿಯರು ಅಭಿಪ್ರಾಯ ಪಡೆದುಕೊಂಡ ನಂತರ ಅವರು ಎಲ್ಲಿರಬೇಕು ಎಂಬುದನ್ನು ನಿರ್ಣಯಿಸಿದರೆ ಸೂಕ್ತ ಎಂದು ಅಭಿಪ್ರಾಯ ಪಟ್ಟಿದೆ. ಸದರಿ ಯುವತಿಯರು ವ್ಯಭಿಚಾರ ವೃತ್ತಿಯನ್ನು ಜೀವನೋಪಾಧಿಗಾಗಿ ಆಯ್ದುಕೊಂಡ ಸಾಮಾಜಿಕ ವರ್ಗಕ್ಕೆ ಸೇರಿದವರು ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ನ್ಯಾಯಮೂರ್ತಿ ಚೌಹಾಣ್ ಹೇಳಿದ್ದಾರೆ.

error: Content is protected !! Not allowed copy content from janadhvani.com