janadhvani

Kannada Online News Paper

ವಿದ್ಯೆ ನೀಡುವ ಶಿಕ್ಷಕರನ್ನು ಪ್ರತಿ ದಿನವು ಅಭಿನಂದಿಸಬೇಕು ಉಕ್ಕುಡ ಉಸ್ತಾದ್

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಸ್ಮಾಯಿಲ್ ಮಂಗಿಲಪದವು ಅವರಿಗೆ ಪೌರ ಸನ್ಮಾನ.

ವಿಟ್ಲ :ವಿದ್ಯೆಯನ್ನು ಕಾಯಕವನ್ನಾಗಿಸಿ ಬದುಕು ರೂಪಿಸಿಕೊಡುವ ಶಿಕ್ಷಕರನ್ನು ಪ್ರತಿ ದಿನವೂ ಅಂಭಿನಂದಿಸಬೇಕು. ಅವರಿಗೆ ಲಭಿಸುವ ಪ್ರಶಸ್ತಿಯು ವಿದ್ಯೆಗೆ ಸಿಗುವ ಗೌರವವಾಗಿದೆ ಎಂದು ಉಕ್ಕುಡ ಮುದರ್ರಿಸ್ ಹಾಫಿಳ್ ಅಹಮದ್ ಶರೀಫ್ ಕಾಮಿಲ್ ಸಖಾಫಿ ನುಡಿದರು.

ಅವರು ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಇಸ್ಮಾಯಿಲ್ ಮಾಸ್ಟರ್ ಮಂಗಿಲದವು ಅವರಿಗೆ ವಿಟ್ಲದ ಸುನ್ನೀ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಸಿದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಂಗಿಲಪದವು ಬಿಲಾಲ್ ಜುಮಾ ಮಸ್ಜಿದ್ ಅವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ
ಶೈಖುನಾ ವಾಲೆಮುಂಡೋವು ಉಸ್ತಾದ್ ರವರು ಇಸ್ಮಾಯಿಲ್ ಮಾಸ್ಟರಿಗೆ ಪೌರ ಸನ್ಮಾನ ನೀಡಿ ಗೌರವಿಸಿದರು. ವಿಟ್ಲ ಜಂಯ್ಯಿತುಲ್ ಉಲಮಾ ಅಧ್ಯಕ್ಷರಾದ ಇಬ್ರಾಹಿಂ ಮದನಿ ಉಸ್ತಾದ್ ಕಂಬಳಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಬೂಬಕ್ಕರ್ ಸುನ್ನೀ ಪೈಝಿ ಪೆರುವಾಯಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಎಸ್ ಜೆ ಎಂ ವಿಟ್ಲ ರೇಂಜ್ ಮುಫತ್ತಿಶ್ ಅಬ್ದುಲ್ ಹಮೀದ್ ಮದನಿ, ಎಸ್‌ಎಂಎ ವಿಟ್ಲ ಝೊನಲ್ ಕಾರ್ಯದರ್ಶಿ ಖಾಸಿಂ ಸಖಾಫಿ ಅಳಕೆಮಜಲು, ಎಸ್ಸೆಸ್ಸೆಫ್ ಜಿಲ್ಲಾ ಸದಸ್ಯ ಅಬ್ದುರ್ರಹ್ಮಾನ್ ಶರಫಿ, ಎಸ್‌ವೈಎಸ್ ವಿಟ್ಲ ಸೆಂಟರ್ ಉಪಾಧ್ಯಕ್ಷ ಇಬ್ರಾಹೀಂ ಮುಸ್ಲಿಯಾರ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ, ಮಂಗಳಪದವು ಖತೀಬ್ ಅಬ್ದುಸ್ಸಲಾಮ್ ಅಮ್ಜದಿ ಮೊದಲಾದವರು ಕಾರ್ಯಕ್ರಮದಲ್ಲಿ ಶುಭ ಹಾರೈಸಿ ಮಾತನಾಡಿದರು.

ಎಸ್‌ಜೆಎಂ ವಿಟ್ಲ ರೇಂಜ್ ಅಧ್ಯಕ್ಷ ಶರೀಪ್ ಮದನಿ ಪೆರುವಾಯಿ, ಎಸ್ಎಂಎ ವಿಟ್ಲ ರಿಜ್ಯಿನಲ್ ಅಧ್ಯಕ್ಷ ಶರೀಫ್ ಉಕ್ಕುಡ, ಎಸ್‌ವೈಎಸ್ ಕನ್ಯಾನ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಖಾಫಿ ಅಂಗ್ರಿ, ರಝಾಕ್ ನಹೀಮಿ ಕಾನತಡ್ಕ, ಎಂಕೆಎಂ ಕಾಮಿಲ್ ಸಖಾಫಿ, ಉಸ್ಮಾನ್ ಹಾಜಿ ಟಿಪ್ಪು ನಗರ, ಮುಸ್ತಾಫಾ ಕೋಡಪದವು, ರಝ್ಝಾಕ್ ಸಖಾಫಿ ಕೆಲಿಂಜ, ರಝಾಕ್ ಮುಸ್ಲಿಯಾರ್ ಕೊಡಂಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ವೈಎಸ್ ವಿಟ್ಲ ಸೆಂಟರ್ ಅಧ್ಯಕ್ಷ ಅಬ್ದುಲ್ ಕಾದರ್ ಸಖಾಫಿ ಕಡಂಬು ಸ್ವಾಗತಿಸಿ, ಎಸ್‌ಎಸ್‌ಎಫ್ ಜಿಲ್ಲಾ ಉಪಾಧ್ಯಕ್ಷ ಸಲೀಮ್ ಹಾಜಿ ಬೈರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com