janadhvani

Kannada Online News Paper

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕ್ಕೆ ದುಬೈ ಪ್ರವೇಶ ನಿರ್ಬಂಧ

ದುಬೈ :ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳನ್ನು ಅಕ್ಟೋಬರ್‌ 2ರವರೆಗೆ ನಿಷೇಧಿಸಿ ‘ದುಬೈ ನಾಗರಿಕ ವಾಯುಯಾನ ಪ್ರಾಧಿಕಾರ’ (ಡಿಸಿಎಎ) ಆದೇಶ ಹೊರಡಿಸಿದೆ.

ಕಳೆದ ಕೆಲವು ವಾರಗಳಲ್ಲಿ ಎರಡು ಬಾರಿ ಕೊರೊನಾ ವೈರಸ್‌ ಪಾಸಿಟಿವ್ ಸರ್ಟಿಫಿಕೇಟ್ ಹೊಂದಿರುವ ಪ್ರಯಾಣಿಕರನ್ನು ಕರೆತಂದಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ಯುಎಇ ಸರ್ಕಾರದ ಕಾನೂನಿನ ಪ್ರಕಾರ, ಭಾರತದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರ ಬಳಿ ವಿಮಾನ ಪ್ರಯಾಣ ಆರಂಭಿಸುವ 96ಗಂಟೆಗಳ ಮೊದಲು ಆರ್ ಟಿ-ಪಿಸಿಆರ್ ಮೂಲಕ ಪರೀಕ್ಷೆ ನಡೆಸಿ ಕೊರೊನಾ ವೈರಸ್‌ ನೆಗೆಟಿವ್ ವರದಿಯ ಒರಿಜಿನಲ್ ಸರ್ಟಿಫಿಕೇಟ್‌ ಹೊಂದಿರುವುದು ಕಡ್ಡಾಯವಾಗಿದೆ. ಆದರೆ, ಏರ್‌ ಇಂಡಿಯಾ ಕೊರೊನಾ ಪಾಸಿಟಿವ್ ವ್ಯಕ್ತಿಗಳಿಗೂ ಪ್ರಯಾಣಕ್ಕೆ ಅನುಮತಿ ನೀಡಿರುವ ಆರೋಪ ಮೇಲೆ ನಿಷೇಧಕ್ಕೆ ಒಳಗಾಗಿದೆ.

ಸೆಪ್ಟೆಂಬರ್ 2ರಂದು ಕೋವಿಡ್ 19 ಪಾಸಿಟಿವ್ ಪ್ರಮಾಣ ಪತ್ರ ಹೊಂದಿದ್ದ ವ್ಯಕ್ತಿಯೊಬ್ಬರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೆಪ್ಟೆಂಬರ್ 4ರಂದು ಜೈಪುರದಿಂದ ದುಬೈಗೆ ಪ್ರಯಾಣಿಸಿದ್ದರು. ಇಂಥದೇ ಘಟನೆ ಮತ್ತೊಂದು ಏರ್‌ಲೈನ್ಸ್ ವಿಮಾನದಲ್ಲೂ ನಡೆದಿತ್ತು.

ಈ ಎರಡು ಘಟನೆ ನಂತರ ದುಬೈ ನಾಗರಿಕ ವಿಮಾನಯಾನ ಅಧಿಕಾರಿಗಳು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳ ಸಂಚಾರವನ್ನು ಸೆಪ್ಟೆಂಬರ್ 18ರಿಂದ ಅಕ್ಟೋಬರ್ 2ರವರೆಗೆ ರದ್ದುಗೊಳಿಸಿರುವುದಾಗಿ ವಿವರಿಸಿದ್ದಾರೆ.

error: Content is protected !! Not allowed copy content from janadhvani.com