janadhvani

Kannada Online News Paper

ಸಂದರ್ಶಕ ವೀಸಾ ಮೇಲಿನ ಬಿಗಿ ನಿಯಮವನ್ನು ರದ್ದುಪಡಿಸಿದ ಯುಎಇ

ದುಬೈ: ಸಂದರ್ಶಕ ಮತ್ತು ಪ್ರವಾಸಿ ವೀಸಾಗಳ ಮೇಲಿನ ಬಿಗಿ ನಿಯಮಗಳನ್ನು ದುಬೈ ರದ್ದುಪಡಿಸಿದೆ.

ರಿಟರ್ನ್ ಟಿಕೆಟ್‌ ನೊಂದಿಗೆ ಆರು ತಿಂಗಳ ಬ್ಯಾಂಕ್ ಖಾತೆ ವಿವರಗಳು, ಹೋಟೆಲ್ ಕಾಯ್ದಿರಿಸುವಿಕೆ ಅಥವಾ ವಸತಿ ಸೌಕರ್ಯಗಳು, ಜೊತೆಗೆ ನಿಗದಿತ ದಿನಾಂಕದಂದು ಮರಳುವುದಾಗಿ ಅಫಿಡವಿಟ್ ಮುಂತಾದ ಹೊಸ ನಿಯಮವನ್ನು ಇತ್ತೀಚೆಗೆ ಜಾರಿ ಮಾಡಿತ್ತು. ಇದರಿಂದಾಗಿ ಯುಎಇ ಸಂದರ್ಶಕ ವೀಸಾ ಪಡೆಯುವುದು ಕಷ್ಟವಾಗಿತ್ತು.

ಇದೀಗ ಹೊಸ ನಿಯಮಗಳನ್ನು ರದ್ದುಪಡಿಸಲಾಗಿದ್ದು, ಟ್ರಾವೆಲ್ ಏಜೆನ್ಸಿಗಳಿಗೆ ಸುತ್ತೋಲೆಯನ್ನು ನೀಡಲಾಗಿದೆ.ದುಬೈ ವಿಸಿಟ್ ವೀಸಾ ಮೊದಲಿನಂತೆ ಲಭ್ಯವಿರುತ್ತದೆ.

error: Content is protected !! Not allowed copy content from janadhvani.com