janadhvani

Kannada Online News Paper

ಹಾಲಿ ಪ್ರಧಾನಿಯೊಬ್ಬರ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ವಾಗಿ ಆಚರಿಸುವುದು ಎಷ್ಟು ಸರಿ?

(ಜನ ಧ್ವನಿ ವಿಶೇಷ) ಇಂದು ಸೆಪ್ಟೆಂಬರ್ 17, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮ ದಿನ. ಸಾಮಾಜಿಕ ತಾಣಗಳಲ್ಲಿ ಆ ವ್ಯಕ್ತಿಯ ಜನ್ಮ ದಿನಕ್ಕೆ ಹಾರೈಕೆ ಬಂದಿರುವುದಕ್ಕಿಂತ ಹೆಚ್ಚಾಗಿ ‘ರಾಷ್ಟ್ರೀಯ ನಿರುದ್ಯೋಗ ದಿನ’ವೆಂದು ಆಚರಿಸುವ ಯುವ ಜನತೆಯ ಸಂದೇಶಗಳೇ ರಾರಜಿಸುತ್ತಿದೆ. ಕಾರಣ ಇಷ್ಟೇ, ಭಾರತದ ಯುವಜನತೆಗೆ ನೌಕರಿ ನೀಡುವಲ್ಲಿ, ಪ್ರಧಾನಿ ವಿಫಲರಾಗಿದ್ದಲ್ಲದೇ, ಇತಿಹಾಸದಲ್ಲಿ ಅತೀ ಹೆಚ್ಚಿನ ನಿರುದ್ಯೋಗ ಸಮಸ್ಯೆ ಭಾರತದಲ್ಲಿ ಎದುರಾಗಿದೆ.

ಕೊರೋನಾ ನಿಯಂತ್ರಣದಲ್ಲಿ ಉಂಟಾದ ವೈಫಲ್ಯದಿಂದ ಈಗಾಗಲೇ ಜರ್ಝರಿತರಾಗಿರುವ ಹುಟ್ಟುಹಬ್ಬವನ್ನೆಂತು ಆಚರಿಸುತ್ತಾರೆ ಅಂದು ಕೊಂಡಿದ್ದ ಭಾರತದ ಜನತೆ, ಸರಿಯಾದ ರೀತಿಯಲ್ಲೇ ಜನುಮದಿನವನ್ನು ಆಚರಿಸಿಕೊಂಡಿದ್ದಾರೆ. ಇದುವರೆಗೆ ಜನುಮದಿನವನ್ನು ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಯುವಕರ ದಿನಾಚರಣೆ ಎಂದೆಲ್ಲಾ ಆಚರಿಸಲು ಕರೆಕೊಡುತ್ತಿದ್ದರು. ಇದೀಗ ಭಾರತದ ಪ್ರಜ್ಞಾವಂತ ನಾಗರೀಕರೇ ಪ್ರಧಾನಿಯ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನ’ವಾಗಿ ಆಚರಿಸಿದ್ದು ಭೂಮಂಡಲದ ಇತಿಹಾಸದಲ್ಲೇ ಇದೇ ಮೊದಲಾಗಿರಬೇಕು.

ಅಷ್ಟಕ್ಕೂ ಶ್ರೀ ನರೇಂದ್ರ ಮೋದಿಯವರ ಆಡಳಿತ ಹದಗೆಟ್ಟಿದಿಯಾ? ಹಳಿ ತಪ್ಪಿದೆಯಾ? ಎಂದು ಪ್ರಶ್ನಿಸಿದರೆ. ಹೌದೆಂದು ಉತ್ತರಿಸಬೇಕಾದ ಗತಿಕೇಡು ಭಾರತೀಯರಿಗೆ ಬಂದೊದಗಿದೆ. ಉದ್ಯೋಗ ಕಳಕೊಂಡವರು ಕೆಲಸ ಇಲ್ಲದ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಜನ್ಮದಿನವನ್ನೇ ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಈ ವ್ಯಕ್ತಿಯು ಪ್ರಧಾನ ಮಂತ್ರಿಯೇನೋ ಆಗಿ ಬಿಟ್ಟರು, ಆದರೆ ಜನ್ಮವನ್ನೇ ಈ ಪರಿ ಬಗೆದದ್ದು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿದೆ.

ರಾಷ್ಟ್ರದ ಪಾಲಿಗೆ ಈ ಟ್ರೆಂಡ್, ಅಂತರಾಷ್ಟ್ರೀಯ ಪತ್ರಿಕೆಗಳ ಮುಖ್ಯ ಸುದ್ದಿಯಾಗಿದೆ. ಮೋದಿಯವರ ಕುಖ್ಯಾತಿ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ರಾಷ್ಟ್ರ ವಿರೋಧಿ, ಸಂವಿಧಾನ ವಿರೋಧಿ ಕಾನೂನುಗಳನ್ನು ಪ್ರಜೆಗಳಿಗೆ ಹೇರಿದಾಗ, ಭಗವಂತನು ಕೊರೋನಾವನ್ನು ಗಂಟಲಿಗೆ ಸಿಲುಕಿಸಿ, ಉಸಿರಾಡದಂತೆ, ಗೃಹ ಸಚಿವರಾದಿಯಾಗಿ ಆಸ್ಪತ್ರೆಯ ಮೇಲ್ಚಾವಣಿ ನೋಡಿಕೊಂಡು ಮಲಗಬೇಕಾದ ಗತಿ ತರಿಸಿದೆ.

ಉದ್ಯೋಗ ಹೆಚ್ಚಳವನ್ನುಂಟು ಮಾಡಬಲ್ಲ ಯಾವುದೇ ಯೋಜನೆಗಳನ್ನು ರೂಪಿಸಲು ಇವರಿಂದ ಸಾಧ್ಯವಾಗದೇ ಇರುವುದು ಒಂದು ವೈಫಲ್ಯವಾದರೆ, ಇರೋ ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಮುಚ್ಚುತ್ತಿರುವುದು ಇನ್ನೊಂದು. ಉಆP ತಾನಿನ್ನು ಭಾರತದಲ್ಲಿ ಇರೋಲ್ಲ ಅನ್ನುವಷ್ಟರ ಮಟ್ಟಕ್ಕೆ ಅಸಹ್ಯ ಪಾತಾಳಕ್ಕೆ ತಲುಪಿದ್ದರೂ, ಪ್ರಧಾನಿ ಇನ್ನೂ ಆ ಪಟ್ಟದಲ್ಲಿ ಕೂತಿರೋದು ಸೋಜಿಗವಲ್ಲದೆ ಮತ್ತೇನು?

error: Content is protected !! Not allowed copy content from janadhvani.com