janadhvani

Kannada Online News Paper

‘Engineer’s Day’ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯರವರ ಕೊಡುಗೆಯ ಸ್ಮರಣೆ

✍🏻ಇಂಝಮುಲ್ ಹಕ್ ಬಜ್ಪೆ

ಸರ್ ಎಂ ವಿಶ್ವೇಶ್ವರಯ್ಯರವರ ಕೊಡುಗೆಯನ್ನು ಸ್ಮರಿಸಿ ಪ್ರತೀ ವರ್ಷ ಅವರ ಜನನ ದಿನವಾದ ಸೆ. 15 ರಂದು ರಾಷ್ಟ್ರೀಯ ಇಂಜಿನಿಯರ್’ಗಳ ದಿನವನ್ನಾಗಿ ಆಚರಿಸಲಾಗುತ್ತೆ.

ಮೂಲತ ಕರ್ನಾಟಕದ ಮುಂಡೇನಹಳ್ಳಿಯಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು ಸೆಪ್ಟೆಂಬರ್ 15 ರಂದು ಜನಿಸಿದರು. ಸರ್ ಎಂ ವಿಶ್ವೇಶ್ವರಯ್ಯ ರವರ ಸ್ಮಾರಕವು ಮುಂಡೇನ ಹಳ್ಳಿಯಲ್ಲಿ ನೆಲೆನಿಂತಿದೆ. ಇದನ್ನು ವಿಶ್ವೇಶ್ವರಯ್ಯ ರಾಷ್ಟ್ರೀಯ ಮೆಮೋರಿಯಲ್ ಟ್ರಸ್ಟ್ ನಿಭಾಯಿಸುತ್ತಿದೆ.

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ಅನೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡು ಹಿಡಿಯುವುದರಲ್ಲಿ ವಿಶ್ವೇಶ್ವರಯ್ಯ’ರವರು ಯಶಸ್ವಿಯಾದರು. ಕರ್ನಾಟಕದ ಕೆ ಅರ್ ಎಸ್ ಅನೆಕಟ್ಟು ಸಹಿತ ಇತರ ರಾಜ್ಯದ ಅನೆಕಟ್ಟುಗಳಲ್ಲಿ ಇವು ಉಪಯೋಗವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಅದಲ್ಲದೆ ವಿಶ್ವೇಶ್ವರಯ್ಯ’ರವರು ಭಾರತವಲ್ಲದೆ ವಿಶ್ವದ ಅನೇಕ ಯೋಜನೆಗಳಲ್ಲಿ ಮುಖ್ಯ ಪಾತ್ರ ವಹಿಸಿಕೊಂಡು ಭಾರತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.

ರಾಷ್ಟ್ರ ಕಂಡ ಅಪ್ರತಿಮ ಮೇಧಾವಿಗಳಲ್ಲೋಬ್ಬರಾದ ಸರ್ ಎಂ ವಿಶ್ವೇಶ್ವರಯ್ಯ’ರವರು ಭಾರತರತ್ನ ಪ್ರಶಸ್ತಿ ಪುರಸ್ಕೃತರೊಂದಿಗೆ ವಿಶ್ವದ ಹಲವ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅವರ ಮಾತು ಎಲ್ಲರ ಜೀವನಕ್ಕೂ ಆದರ್ಶ.

ಒಂದು ದೇಶವು ಅಭಿವೃದ್ಧಿಯಾಗಲು ಇಂಜಿನಿಯರ್’ಗಳ ಪಾತ್ರ ಹಿರಿದಾಗಿರುತ್ತೆ. ಎಂಜಿಯರ್’ಗಳ ಪರಿಶ್ರಮ, ಸೇವೆ, ಆರ್ಥಿಕವಾದ ಮುನ್ನಡೆಗೆ ತಮ್ಮ ಪಾತ್ರ ವಹಿಸಿ ಸೇವೆ ಸಲ್ಲಿಸುವುದನ್ನು ಸ್ಮರಿಸಿ ಗೌರವ ನೀಡುವುದಕ್ಕಾಗಿ ಪ್ರತೀ ವರ್ಷವು ಈ ದಿನವನ್ನು ಇಂಜಿನಿಯರ್’ಗಳ ದಿನ ಎಂದು ಆಚರಿಸಲಾಗುತ್ತದೆ.

ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ನಿಮ್ಮ ಯಶಸ್ಸು ಮತ್ತು ಸಂತೋಷ ನಿಮ್ಮ ಸ್ವಂತಿಕೆಯನ್ನು ಅವಲಂಬಿಸಿರುತ್ತದೆ. ನಿಮ್ಮ ಜೀವನದ ಬಗ್ಗೆ ನೀವು ಯೋಚಿಸಿ ಮತ್ತು ಯೋಜನೆಯನ್ನು ರೂಪಿಸಿ”
ಸರ್ ಎಂ ವಿಶ್ವೇಶ್ವರಯ್ಯ

error: Content is protected !! Not allowed copy content from janadhvani.com