janadhvani

Kannada Online News Paper

ಸೆ.17: ಮೋಂಟುಗೋಳಿಯಲ್ಲಿ ಪೂರ್ವ ವಿದ್ಯಾರ್ಥಿ ಸಂಗಮ ಹಾಗೂ ಆಧ್ಯಾತ್ಮಿಕ ಮಜ್ಲಿಸ್

ಮಂಗಳೂರು: ಮಾಣಿ ಇಬ್ರಾಹಿಂ ಸಅದಿ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಮಿಸ್ಬಾಹುಲ್ ಹುದಾ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಪೂರ್ವ ವಿದ್ಯಾರ್ಥಿ ಸಂಗಮವು ಸಪ್ಟೆಂಬರ್ 17ನೇ ಗುರುವಾರ ಬೆಳಿಗ್ಗೆ 10ಗಂಟೆಗೆ ಸರಿಯಾಗಿ ಮೋಂಟುಗೋಳಿ ಗೌಸಿಯಾ ಕಮ್ಯೂನಿಟಿ ಹಾಲ್ ಸಭಾಂಗಣದಲ್ಲಿ ನಡೆಯಲಿದೆ.

ಆದುದರಿಂದ ಉಸ್ತಾದರ ಬಳಿ ವಿವಿಧ ಕಡೆಗಳಲ್ಲಿ ದರ್ಸ್ ನಲ್ಲಿ ಕಲಿತ ಎಲ್ಲಾ ಶಿಷ್ಯಂದಿರು ಕಡ್ಡಾಯವಾಗಿ ಈ ಸಂಗಮದಲ್ಲಿ ಭಾಗವಹಿಸುವಂತೆ ಸಂಘಟನೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com