janadhvani

Kannada Online News Paper

ಖತ್ತರಿನಲ್ಲಿ ಸಂಕಷ್ಟದಲ್ಲಿದ್ದ ಮಹಿಳೆ – ಕೆಸಿಎಫ್ ಸಹಕಾರದೊಂದಿಗೆ ಮರಳಿ ತಾಯ್ನಾಡಿಗೆ

ದೊಹಾ : ಉದ್ಯೋಗ ನಿಮಿತ್ತ ಖತ್ತರಿಗೆ ಬಂದು ಸಂಕಷ್ಟ ಅನುಭವಿಸುತ್ತಿದ್ದ ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ಮಹಿಳೆಯೊಬ್ಬರನ್ನು ಕೆಸಿಎಫ್ ಖತ್ತರ್, ಸಮಿತಿಯ ಸಹಕಾರದಿಂದ ದೋಹಾ ದಿಂದ ಮಂಗಳೂರಿಗೆ ಕಳುಹಿಸಿಕೊಡಲಾಯಿತು.

ಕಳೆದ 10ತಿಂಗಳ ಹಿಂದೆ ಕೊಡಗಿನ ಮಡಿಕೇರಿ ನಿವಾಸಿ ಮಹಿಳೆಯೊಬ್ಬರು ಏಜೆನ್ಸಿಯ ಮೂಲಕ ಖತ್ತರಿಗೆ ಉದ್ಯೋಗ ಅರಸಿ ಬಂದಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಇತ್ತ ಉದ್ಯೋಗವು ನಡೆಸಲಾಗದೆ ಅತ್ತ ಕಡೆ ಊರಿಗೂ ತೆರಳಲಾಗದೆ ತ ಸಮಸ್ಯೆಗೊಳಗಾಗಿದ್ದರು. ಈ ವಿಷಯ ಊರಿನವರೊಬ್ಬರ ಮೂಲಕ ಖತ್ತರ್, ಕೆಸಿಎಫ್ ನ ಗಮನಕ್ಕೆ ಬಂದು ತಕ್ಷಣವೇ ಕಾರ್ಯಪ್ರವರ್ತರಾದ ಕೆಸಿಎಫ್ ಕಾರ್ಯಕರ್ತರು ಖತ್ತರ್ ನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಸಂಪರ್ಕ ಕಲ್ಪಿಸಿ ಆ ಮಹಿಳೆ ಊರಿಗೆ ಹೋಗಲು ಬೇಕಾದ ಎಲ್ಲಾ ‌ಅಗತ್ಯ ದಾಖಲಾತಿಗಳನ್ನು ಒದಗಿಸಲು ಸಹಕರಿಸಿದರು.

ಅಲ್ಲದೆ ಊರಿಗೆ ಹೋಗಲು ಬೇಕಾದ ವಿಮಾನದ ಟಿಕೆಟ್ ವ್ಯವಸ್ಥೆಯನ್ನು ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡ ಕೆಸಿಎಫ್ ಖತ್ತರ್ ಸಮಿತಿಯ ವತಿಯಿಂದ ನೀಡಲಾಗಿತ್ತು ಎಂದು ಕೆಸಿಎಫ್ ಸಾಂತ್ವನ ವಿಭಾಗ ಕಾರ್ಯದರ್ಶಿ ಹಸನ್ ಪೂಂಜಾಲ್ ಕಟ್ಟೆಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ .

ಒಟ್ಟಿನಲ್ಲಿ ನೊಂದ ಮಹಿಳೆಯೊಬ್ಬರಿಗೆ ಸಾಂತ್ವನ ನೀಡಿ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಡುವ ಮೂಲಕ ಕೆಸಿಎಫ್ ಖತ್ತರ್ ಕೆ ಸಿ ಎಫ್ ಸಮಿತಿಯು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದೆ.

error: Content is protected !! Not allowed copy content from janadhvani.com