janadhvani

Kannada Online News Paper

ಪ್ರಧಾನಿ ಮೋದಿಯ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್

ನವದೆಹಲಿ,ಸೆ. 03: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದನ್ನು ಟ್ವಿಟ್ಟರ್ ಸಂಸ್ಥೆ ಇಂದು ದೃಢಪಡಿಸಿದೆ. ದುಷ್ಕರ್ಮಿಗಳು ಮೋದಿ ಅವರ ಖಾತೆ ಹ್ಯಾಕ್ ಮಾಡಿ, ಕ್ರಿಪ್ಟೋಕರೆನ್ಸಿ ಮೂಲಕ ಪಿಎಂ ನ್ಯಾಷನಲ್ ರಿಲೀಫ್ ಫಂಡ್ಗೆ ದೇಣಿಗೆ ನೀಡಬೇಕೆಂದು ಕೇಳಿ ಸರಣಿ ಟ್ವೀಟ್ಗಳನ್ನ ಮಾಡಿದ್ದರು. ಇದಾದ ಬಳಿಕ ಅವರ ಖಾತೆ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದೆ. ಈಗ ಖಾತೆಯನ್ನು ಮರಳಿ ಪಡೆಯಲಾಗುತ್ತಿದ್ದು ಆ ಸರಣಿ ಟ್ವೀಟ್ಗಳನ್ನ ಡಿಲೀಟ್ ಮಾಡಲಾಗಿದೆ.

ಪ್ರಧಾನಿ ಕಾರ್ಯಾಲಯದಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಟ್ವಿಟ್ಟರ್ ಅಕೌಂಟ್ಗಳಿವೆ. @Narendra_in ಎಂಬ ತಾಣದ ಅಕೌಂಟ್ ಹ್ಯಾಕ್ ಆಗಿದೆ.ಇದರಲ್ಲಿ 25 ಲಕ್ಷ ಫಾಲೋವರ್ಸ್ ಇದ್ದಾರೆ. ಇದರಲ್ಲಿ ಅವರು ಹಿಂದಿಯಲ್ಲಿ ಹೆಚ್ಚಾಗಿ ಟ್ವೀಟ್ ಮಾಡುತ್ತಾರೆ. ಪ್ರಧಾನಿ ಅವರ ಮತ್ತೊಂದು ಅಕೌಂಟ್ ಇದ್ದು ಅದರಲ್ಲಿ 60 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಇದ್ದಾರೆ.

ಟ್ಟಿಟ್ಟರ್ ಸಂಸ್ಥೆ ಕೂಡ ಮೋದಿ ಅವರ ಖಾತೆ ಹ್ಯಾಕ್ ಆಗಿರುವುದು ತಮ್ಮ ಗಮನಕ್ಕೆ ಬಂದಿದೆ. ಅದನ್ನು ಸುರಕ್ಷಿತಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ.ತನಿಖೆ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಹೆಚ್ಚುವರಿ ಖಾತೆಗಳನ್ನೂ ಹ್ಯಾಕ್ ಮಾಡಲಾಗಿದೆಯಾ ಎಂಬುದು ತಿಳಿದುಬಂದಿಲ್ಲ ಎಂದೂ ಟ್ವಿಟ್ಟರ್ನ ವಕ್ತಾರರೊಬ್ಬರು ಹೇಳಿಕೆ ನೀಡಿದ್ಧಾರೆ.

ಟ್ವಿಟ್ಟರ್ ವೆಬ್ಸೈಟ್ಗಳನ್ನ ಹ್ಯಾಕ್ ಮಾಡುತ್ತಿರುವುದು ಇದೇ ಮೊದಲಲ್ಲ. ಈಚೆಗೆ ಕೆಲ ತಿಂಗಳುಗಳಿಂದ ವಿಶ್ವದ ಹಲವು ಗಣ್ಯ ನಾಯಕರ ಖಾತೆಗಳನ್ನ ಹ್ಯಾಕ್ ಮಾಡಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲೂ ಕ್ರಿಪ್ಟೋಕರೆನ್ಸಿ ಮೂಲಕ ಹಣದ ದೇಣಿಗೆ ಪಡೆಯಲು ದುಷ್ಕರ್ಮಿಗಳು ಚಿತಾವಣಿ ನಡೆಸಿರುವುದು ದೃಢಪಟ್ಟಿದೆ. ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಇಲಾನ್ ಮಸ್ಕ್ ಮೊದಲಾದವರ ಟ್ವಿಟ್ಟರ್ ವೆಬ್ ಹ್ಯಾಕ್ ಆಗಿದ್ದವು.

error: Content is protected !! Not allowed copy content from janadhvani.com