janadhvani

Kannada Online News Paper

ರಿಯಾದಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರ- ಕೆಸಿಎಫ್ ಸಹಕಾರದಲ್ಲಿ ತಾಯ್ನಾಡಿಗೆ

ಸೌದಿ ಅರೇಬಿಯಾದ ರಿಯಾದಿನ ಅಲ್ ಇಮಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸಹೋದರರೊಬ್ಬರನ್ನು, ರಿಯಾದಿನ ಪ್ರತಿಷ್ಠಿತ ಕ್ಲಿನಿಕ್ ನಲ್ಲಿ ಉನ್ನತ ವ್ಯದ್ಯರಾಗಿರುವ ಡಾಕ್ಟರ್ ಅಬ್ದುಲ್ ಮೊಯಿನ್ ಬ್ಯಾರಿ ಇವರ ಸಹಕಾರದಿಂದ ಕೆಸಿಎಫ್ ರಿಯಾದ್ ಸಮಿತಿಯು ದಮ್ಮಾಮಿನಿಂದ ಮಂಗಳೂರಿಗೆ ಕಳುಹಿಸಿತು.

ಮಂಗಳೂರಿಗೆ ತಲುಪಿದ ಕೂಡಲೇ ಕೆಸಿಎಫ್ ರಿಯಾದ್ ಆಯೋಜಿಸಿದ ಆಂಬುಲೆನ್ಸ್ ಮುಖಾಂತರ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗೆ ಕರೆದೊಯ್ಯಲಾಯಿತು. ರೋಗ ಪತ್ತೆಯಾದ ದಿನಂದಿಂದ ಡಾಕ್ಟರ್ ಅಬ್ದುಲ್ ಮೊಯಿನ್ ಬ್ಯಾರಿ ಅವರು ರೋಗಿಗೆ ಬೇಕಾದ ಊಟ, ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಅದೇ ರೀತಿ ಕೆಸಿಎಫ್ ರಿಯಾದ್ ಸಮಿತಿ ಸದಸ್ಯರಾದ ಹಂಝ ಮೈಂದಾಳ , ನಿಝಾಮ್ ಸಾಗರ್, ಅಬ್ದುಲ್ ರಝಕ್ ಹಾಜಿ ಉಜಿರೆ ಹಾಗೂ ಇಸ್ಮಾಯಿಲ್ ಕಣ್ಣಂಗಾರ್ ರೋಗಿಗೆ ಬೇಕಾದ ಟಿಕೆಟ್, ದಸ್ತಾವೇಜು ಸಿದ್ಧಪಡಿಸುವಿಕೆ , ಸಾರಿಗೆ ಹಾಗೂ ಇನ್ನಿತರ ರೀತಿಯ ಸೇವೆಗಳನ್ನು ಒದಗಿಸಿದರು. ದಮ್ಮಾಮ್ ಕೆಸಿಎಫ್ ನೇತಾರರಾದ ಮುಹಮ್ಮದ್ ಮಲೆಬೆಟ್ಟು ಹಾಗೂ ಭಾಷಾ ಗಂಗಾವಳಿ ರೋಗಿಯನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು.

error: Content is protected !! Not allowed copy content from janadhvani.com