ಅಬುಧಾಬಿ: ಉದ್ಯೋಗ ಕಳೆದುಕೊಂಡು ಮನೆಗೆ ಮರಳುವ ಕಾರ್ಮಿಕರಿಗೆ ಎಲ್ಲಾ ಸವಲತ್ತುಗಳನ್ನು ಪೂರ್ಣವಾಗಿ ನೀಡಬೇಕು ಎಂದು ಯುಎಇ ಅಧಿಕಾರಿಗಳು ಹೇಳಿದ್ದಾರೆ.
ರಜಾ ವೇತನ, ಸೇವಾ ಬೋನಸ್, ಬಾಕಿ ಇರುವ ವೇತನ ಈ ಮೂರು ರೀತಿಯ ಹಕ್ಕುಗಳಿಗೆ ಕಾರ್ಮಿಕರಿಗೆ ಅರ್ಹತೆ ಇದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ದುಬೈನ ಇಂಡಿಯನ್ ಕಾನ್ಸುಲ್ ಜನರಲ್ ಕೂಡ ಭಾರತೀಯ ಕಂಪನಿಗಳು ಕಾರ್ಮಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.