janadhvani

Kannada Online News Paper

ಸ್ವದೇಶಕ್ಕೆ ಮರಳುವ ಕಾರ್ಮಿಕರಿಗೆ ಎಲ್ಲಾ ಸವಲತ್ತುಗಳನ್ನು ನೀಡಬೇಕು

ಅಬುಧಾಬಿ: ಉದ್ಯೋಗ ಕಳೆದುಕೊಂಡು ಮನೆಗೆ ಮರಳುವ ಕಾರ್ಮಿಕರಿಗೆ ಎಲ್ಲಾ ಸವಲತ್ತುಗಳನ್ನು ಪೂರ್ಣವಾಗಿ ನೀಡಬೇಕು ಎಂದು ಯುಎಇ ಅಧಿಕಾರಿಗಳು ಹೇಳಿದ್ದಾರೆ.

ರಜಾ ವೇತನ, ಸೇವಾ ಬೋನಸ್, ಬಾಕಿ ಇರುವ ವೇತನ ಈ ಮೂರು ರೀತಿಯ ಹಕ್ಕುಗಳಿಗೆ ಕಾರ್ಮಿಕರಿಗೆ ಅರ್ಹತೆ ಇದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ದುಬೈನ ಇಂಡಿಯನ್ ಕಾನ್ಸುಲ್ ಜನರಲ್ ಕೂಡ ಭಾರತೀಯ ಕಂಪನಿಗಳು ಕಾರ್ಮಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com