janadhvani

Kannada Online News Paper

ವಿಸಿಟ್ ವಿಸಾದಲ್ಲಿ ಯುಎಇ ಗೆ ತೆರಳಲು ಕೇಂದ್ರ ಸರ್ಕಾರದ ಅನುಮತಿ

ದುಬೈ |ಭಾರತದಿಂದ ಯುಎಇಗೆ ಸಂದರ್ಶಕ ವೀಸಾದಲ್ಲಿ ತೆರಳಲು ಅನುಮತಿ. ಭಾರತೀಯರಿಗೆ ಯಾವುದೇ ರೀತಿಯ ವೀಸಾ ಮೂಲಕ ಯುಎಇ ಪ್ರವೇಶಿಸಬಹುದು ಎಂದು ಭಾರತೀಯ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ.

ಪ್ರವಾಸಿ ವೀಸಾದಲ್ಲಿ ಯುಎಇಗೆ ಪ್ರಯಾಣಿಸಲು ಭಾರತ ಸರ್ಕಾರ ನಿಷೇಧಿಸಿತ್ತು. ಈ ಕಾರಣದಿಂದಾಗಿ ಭಾರತದಲ್ಲಿ ಅನೇಕ ಜನರು ತೊಂದರೆಗೆ ಸಿಲುಕಿದ್ದರು. ಯುಎಇ ಪ್ರವೇಶ ಅನುಮತಿಸಿದ್ದೂ, ಭಾರತ ಸರ್ಕಾರದ ನಿಷೇಧದ ಬಗ್ಗೆ ಪ್ರತಿಭಟನೆಗಳು ಭುಗಿಲೆದ್ದವು. ವಂದೇ ಭಾರತ್ ಕಾರ್ಯಾಚರಣೆಯ ಭಾಗವಾಗಿ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಇತರ ವಿಸಾಗಳಂತೆ, ವಿಸಿಟ್ ವಿಸಾದಲ್ಲೂ ಈಗ ಯುಎಇಗೆ ಭೇಟಿ ನೀಡಬಹುದು.

ಹೊಸ ಆದೇಶ ನಿನ್ನೆ ಹೊರಡಿಸಲಾಗಿದೆ. ಇದು ಎರಡು ವಾರಗಳ ಅನಿಶ್ಚಿತತೆಗೆ ಅಂತ್ಯ ಹಾಡಿದೆ. ಯುಎಇ ಎರಡು ವಾರಗಳ ಹಿಂದೆ ಸಂದರ್ಶಕ ವೀಸಾಗಳನ್ನು ನೀಡಲು ಪ್ರಾರಂಭಿಸಿತ್ತು ಆದರೆ ಭಾರತವು ಸಂದರ್ಶಕ ವೀಸಾಗಳಲ್ಲಿ ವಿದೇಶ ಪ್ರವಾಸ ಮಾಡಲು ಅವಕಾಶ ನಿರಾಕರಿಸಿತ್ತು.

ಯುಎಇಯ ಸಾಮಾಜಿಕ ಕಾರ್ಯಕರ್ತರ ನಿರಂತರ ಒತ್ತಡದ ಕಾರಣ ಭಾರತ ಅನುಮತಿ ನೀಡಲು ಮುಂದಾಗಿದೆ ಎಂದು ಸ್ಮಾರ್ಟ್ ಟ್ರಾವೆಲ್ಸ್ ಎಂಡಿ ಅಫಿ ಅಹ್ಮದ್ ಹೇಳಿದರು.

error: Content is protected !! Not allowed copy content from janadhvani.com