janadhvani

Kannada Online News Paper

ಯುಎಇ: ದಂಡ ರಹಿತ ದೇಶ ತೊರೆಯಲು ಅವಧಿ ವಿಸ್ತರಣೆ

ದುಬೈ: ಯುಎಇ ಯಲ್ಲಿ ವಿಸಿಟ್ ವಿಸಾ ಕಾಲಾವಧಿ ಮೀರಿರುವವರು ದಂಡ ಪಾವತಿಸದೇ ದೇಶವನ್ನು ತೊರೆಯುವ ಅವಕಾಶವನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.

ಈ ಹಿಂದೆ ನೀಡಲಾಗಿರುವ ಅವಧಿ ಇಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ ಇದನ್ನು ಪ್ರಕಟಿಸಿದ್ದಾಗಿ ಯುಎಇಯ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಐಸಿಎ ಪ್ರಯಾಣ ಪರವಾನಗಿ ಕಡ್ಡಾಯವಿಲ್ಲ

ಯುಎಇ ನಿವಾಸ ವೀಸಾ ಹೊಂದಿರುವವರಿಗೆ ಅಬುಧಾಬಿ ಮತ್ತು ಅಲ್ ಐನ್ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ಕಡ್ಡಾಯ ಐಸಿಎ ಪ್ರಯಾಣ ಪರವಾನಗಿ ಅಗತ್ಯವಿಲ್ಲ ಎಂದು ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಎ ಅನುಮೋದನೆಯ ಕೊರತೆಯಿಂದಾಗಿ ಮರಳಲು ವಿಳಂಬವಾಗಿರುವ ವಲಸಿಗರಿಗೆ ಇದು ದೊಡ್ಡ ಸಮಾಧಾನವಾಗಿದೆ.

ಪರಿಷ್ಕೃತ ಪ್ರಯಾಣ ನಿಯಮಗಳು ಇಂದಿನಿಂದ ಜಾರಿಗೆ ಬರಲಿವೆ. ವಿಮಾನಯಾನ ಸಂಸ್ಥೆಗಳಿಗೆ ಕಳುಹಿಸಿದ ಅಧಿಕೃತ ಅಧಿಸೂಚನೆಯಲ್ಲಿ ಇದನ್ನು ತಿಳಿಸಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಲಭ್ಯವಾಗಲಿದೆ.

ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ), ಟರ್ಕಿಶ್ ಏರ್ಲೈನ್ಸ್ ಮತ್ತು ಮಿಡಲ್ ಈಸ್ಟ್ ಏರ್ಲೈನ್ಸ್ನ ಟ್ರಾವೆಲ್ ಏಜೆನ್ಸಿಗಳಿಗೆ ಅಧಿಸೂಚನೆ ಲಭಿಸಿದೆ. ಆದರೆ, ಏರ್ ಇಂಡಿಯಾಕ್ಕೆ ಇನ್ನೂ ಸೂಚನೆ ನೀಡಿಲ್ಲ.

ಸರ್ಕಾರದ ಮಾನ್ಯತೆ ಪಡೆದ ಪ್ರಯೋಗಾಲಯದಿಂದ ಕೋವಿಡ್ ಪರೀಕ್ಷೆಯ ಫಲಿತಾಂಶಗಳ ಅವಶ್ಯಕತೆಯಲ್ಲಿ ಬದಲಾವಣೆ ಇಲ್ಲ.

error: Content is protected !! Not allowed copy content from janadhvani.com