janadhvani

Kannada Online News Paper

ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ- ಕೇಂದ್ರ ವಿಮಾನಯಾನ ಸಚಿವ

ನಾವು ಮಂಗಳೂರು ವಿಮಾನ ದುರಂತದಿಂದ ಪಾಠ ಕಲಿತಿದ್ದೇವೆ, ಪ್ರತಿನಿತ್ಯವೂ ಹೊಸ ಪಾಠ ವಿಮಾನಯಾನ ಕ್ಷೇತ್ರದಲ್ಲಿ ಕಲಿಯುತ್ತಿದ್ದೇವೆ, ಈಗ ಈ ಘಟನೆ ಮತ್ತೊಂದು ಹೊಸ ಪಾಠ ಕಲಿಸಿದೆ, ಅಪಘಾತಕ್ಕೆ ಕಾರಣ ನೈಜ ಸಮಯ ಆಧರಿಸಿ ಹೊರ ಬರಲಿದ್ದು ಇದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕಲ್ಲಿಕೋಟೆ: ದುಬೈ-ಕೋಯಿಕ್ಕೋಡ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರವನ್ನು ಏರ್ ಇಂಡಿಯಾ ನೀಡಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರಿದೀಪ್‍ಸಿಂಗ್ ಪುರಿ ತಿಳಿಸಿದ್ದಾರೆ.

ಇಂದು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡದ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದ ಅವರು ದುರ್ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಬಳಿಕ ಮಾತನಾಡಿ, ಜೀವಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿದ್ದು ಸಾವನ್ನಪ್ಪಿದರ ಕುಟುಂಬಕ್ಕೆ ಹತ್ತು ಲಕ್ಷ, ಗಂಭೀರ ಗಾಯಗೊಂಡವರಿಗೆ ಎರಡು ಲಕ್ಷ ಮತ್ತು ಸಣ್ಣ ಪುಟ್ಟ ಗಾಯಾಳುಗಳಿಗೆ 50 ಸಾವಿರ ಪರಿಹಾರ ಏರ್ ಇಂಡಿಯಾ ಕಡೆಯಿಂದ ನೀಡಲಾಗುವುದು. ಈಗಾಗಲೇ 23 ಮಂದಿ ಆಸ್ಪತ್ರೆ ಡಿಸ್ಚಾರ್ಜ್ ಆಗಿದ್ದಾರೆ. 149 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

ದುರಂತ ನಡೆದ ಸ್ಥಳದಲ್ಲಿ ವಿಮಾನದ ಎರಡು ಬ್ಲಾಕ್ ಬಾಕ್ಸ್ ಸಿಕ್ಕಿವೆ, ಮುಂದಿನ ಹಂತದಲ್ಲಿ ದುರಂತಕ್ಕೆ ನಿಖರ ಕಾರಣ ಪತ್ತೆಹಚ್ಚಲಾಗುವುದು ಈ ಬಗ್ಗೆ ತನಿಖೆ ನಡೆಸಿದೆ. ವಿಮಾನ ಹಾರಾಟ ನಡೆಸುತ್ತಿದ್ದವರು ಅನುಭವಿ ಪೈಲೆಟ್ ಗಳು ಈ ಪೈಕಿ ಮುಖ್ಯ ಪೈಲೈಟ್ ಸಾಠೆ ಹಿಂದೆ 27 ಬಾರಿ ಇದೇ ರನ್ ವೇ ಲ್ಯಾಂಡ್ ಮಾಡಿದ್ದಾರೆ ಅವರಿಗೆ 10,848 ಗಂಟೆ ವಿಮಾನ ಹಾರಾಟ ನಡೆಸಿರುವ ಅನುಭವ ಇದೆ ಆದರು ಅವಘಡ ಸಂಭವಿಸಿದೆ.

ನಾವು ಮಂಗಳೂರು ವಿಮಾನ ದುರಂತದಿಂದ ಪಾಠ ಕಲಿತಿದ್ದೇವೆ, ಪ್ರತಿನಿತ್ಯವೂ ಹೊಸ ಪಾಠ ವಿಮಾನಯಾನ ಕ್ಷೇತ್ರದಲ್ಲಿ ಕಲಿಯುತ್ತಿದ್ದೇವೆ, ಈಗ ಈ ಘಟನೆ ಮತ್ತೊಂದು ಹೊಸ ಪಾಠ ಕಲಿಸಿದೆ, ಅಪಘಾತಕ್ಕೆ ಕಾರಣ ನೈಜ ಸಮಯ ಆಧರಿಸಿ ಹೊರ ಬರಲಿದ್ದು ಇದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

error: Content is protected !! Not allowed copy content from janadhvani.com