janadhvani

Kannada Online News Paper

ಮಂಗಳೂರು ತಲುಪಿದ ಕೆ.ಸಿ.ಎಫ್ ಬಹರೈನ್ ಪ್ರಥಮ ಚಾರ್ಟರ್ಡ್ ಫ್ಲೈಟ್

ಮನಾಮ: ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕೆ.ಸಿ.ಎಫ್ ಹಲವಾರು ಜನಪರ ಕಾರ್ಯಾಚರಣೆಗಳಮೂಲಕ ಸರ್ವರ ಆಶಾಕಿರಣವಾಗಿ ಮೂಡಿ ಬಂದಿದೆ.ಕೋವಿಡ್-19 ಪರಿಣಾಮವಾಗಿ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದೆ. ಜಾತಿ ಮತ ಧರ್ಮಗಳ ಭೇಧವಿಲ್ಲದೆ ಆಹಾರದ ಕಿಟ್ಗಳನ್ನು ನೀಡಿ ಅವರ ಕಣ್ಣೀರೊರೆಸುವ ಸಾಂತ್ವನ ಚಟುವಟಿಕೆಗಳು, ವೈದ್ಯಕೀಯ ಹಾಗೂ ಆರ್ಥಿಕವಾದ ನೆರವನ್ನು ನೀಡಿದೆ.

ವಿಮಾನಯಾನ ರದ್ದಾದ ಕಾರಣದಿಂದಾಗಿ ಊರಿಗೆ ಹೋಗಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದ ಅನಿವಾಸಿ ಕನ್ನಡಿಗರಿಗೆ ಆಪತ್ ಭಾಂದವನಾಗಿ ಚಾರ್ಟರ್ ಫ್ಲೈಟ್ ಅನ್ನು ಆಯೋಜಿಸಿತು. ವಿಟ್ಟಲ್ ಜಮಾಲುದ್ದೀನ್ ಅಧ್ಯಕ್ಷರಾಗಿರುವ ಬಹ್ರೈನ್ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಚಾರ್ಟರ್ ಫ್ಲೈಟ್ ಯೋಜನೆಯ ತಂಡದ ಉಸ್ತುವಾರಿಯಾಗಿ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿಯವರು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು.

ಬಹರೈನ್ ನಿಂದ ಮಂಗಳೂರಿಗೆ ಪ್ರಥಮವಾಗಿ ಚಾರ್ಟರ್ಡ್ ವಿಮಾನ ಆಯೋಜಿಸಿದ ಹೆಗ್ಗಳಿಕೆ ಕೆಸಿಎಫ್ ಬಹರೈನ್ ಗೆ ಸಲ್ಲುತ್ತದೆ.

ಆಗಸ್ಟ್ 06ರಂದು ಬಹರೈನ್ ಸಮಯ ಬೆಳಿಗ್ಗೆ 9-15 ಕ್ಕೆ ಹೊರಟ ವಿಮಾನವು ಸಂಜೆ 4 :30 ಕ್ಕೆ ಮಂಗಳೂರು ತಲುಪಿತು.ವೀಸಾ ಕಾಲಾವಧಿ ಮುಗಿದವರು, ನಿರು ದ್ಯೋಗಿಗಳು, ಗರ್ಭಿಣಿಯರು ಸೇರಿದಂತೆ 170 ಮಂದಿ ವಿಭಿನ್ನ ಸಂತ್ರಸ್ತರು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದರು.
ಪ್ರಯಾಣಿಕರಿಗೆ ಬೇಕಾದ ಅಗತ್ಯ ಧಾಖಲೆಗಳು, ಆರೋಗ್ಯ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡಲಾಗಿತ್ತು. ಕೊರೊನಾ ಹರಡುವ ವಿಕೆಯ ಮುನ್ನೆಚ್ಚರಿಕೆಯಾಗಿ ಪಿ.ಪಿ.ಇ ಕಿಟ್ ಸಮಿತಿಯ ವತಿಯಿಂದ ನೀಡಲಾಗಿತ್ತು.

ಸರ್ಕಾರದ ಅನುಮತಿಯನ್ನು ಪಡೆಯಲು ಹಾಗೂ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಯಾತ್ರಿಕರನ್ನು ಬರಮಾಡಿಕೊಂಡು ಅವರಿಗೆ ಬೇಕಾದ ಕೋರೊಂಟೈನ್ ವ್ಯವಸ್ಥೆ ಯನ್ನು ಮಾಡಲು ಸಹಕರಿಸಿದ ಕರ್ನಾಟಕ ಮುಸ್ಲಿಮ್ ಜಮಾತ್, ಎಸ್.ವೈ.ಎಸ್ ಹಾಗೂ ಕೆ.ಸಿ.ಎಫ್ ಐಎನ್ಸಿ ನೇತಾರರಿಗೆ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯು ಅಭಿನಂಧನೆಗಳನ್ನು ಸಲ್ಲಿಸಿದೆ.

error: Content is protected !! Not allowed copy content from janadhvani.com