janadhvani

Kannada Online News Paper

ಮುಹಬ್ಬತೇ ಅಸಾಸ್‌‌- ನೂತನ ಸಮಿತಿ ಆಸ್ತಿತ್ವಕ್ಕೆ

ಮುಹಬ್ಬತೇ ಅಸಾಸ್‌‌ ಸಮಿತಿ (ಅಸಾಸ್‌ ಸಂಸ್ಥೆ ಮಲ್ಲೂರು ಇದರ ಅಭಿವೃದ್ಧಿಗೆ ಬೇಕಾಗಿ ರಚಿಸಿದ ಸಮಿತಿ) ಇದರ ಮಹಾಸಭೆಯು ಜು.31 ರಂದು ನಡೆಯಿತು.

ಶೈಖ್ ರಿಫಾಯೀ ಮಸೀದಿಯಲ್ಲಿ,ಸಂಸ್ಥೆಯ ಅಧ್ಯಕ್ಷರಾಗಿರುವ MPM ಅಶ್ರಫ್ ಸಅದಿ ಮಲ್ಲೂರು ಹಾಗೂ ಕಾರ್ಯದ್ಯಕ್ಷರಾಗಿರುವ Ml ಶರೀಪ್ ಮಲ್ಲೂರು ಇವರ ಸಮ್ಮುಖದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸಮಿತಿ ಆಸ್ತಿತ್ವಕ್ಕೆ ಬಂದಿರುತ್ತದೆ.

ಸಲಹೆಗಾರರಾಗಿ MPM ಅಶ್ರಫ್ ಸಅದಿ ಮಲ್ಲೂರು, MG ಇಕ್ಬಾಲ್ ದಮಾಮ್.

ಅಧ್ಯಕ್ಷರಾಗಿ MS ಜಲೀಲ್, ಉಪಾಧ್ಯಕ್ಷರಾಗಿ MS ಉಬೈದ್, MG ನಾಸೀರ್.

ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಮ್ಮುಂಜೆ, ಜೊತೆ ಕಾರ್ಯದರ್ಶಿಯಾಗಿ ಖಲೀಲ್ ಅಬ್ಬೆಟ್ಟು. ಶಮೀರ್ ಮಲ್ಲೂರು.

ಕೋಶಾಧಿಕಾರಿಯಾಗಿ ಅಶ್ರಫ್ ಸಖಾಫಿ ಹಾಗೂ ವಿದೇಶದಲ್ಲಿರುವ ಕಾರ್ಯಕರ್ತರನ್ನೊಳಗೊಂಡ 21 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಮುಹಬ್ಬತೇ ಅಸಾಸ್‌‌ ಸಮಿತಿ ಕಳೆದ ಒಂದು ವರ್ಷದ ಹಿಂದೆ‌ ಕಾರ್ಯರೂಪಕ್ಕೆ ಬಂದಿದ್ದು,ಕಳೆದ ಒಂದು ವರ್ಷದಿಂದ ನಿರಂತರವಾಗಿ ಒಂದು ಉಸ್ತಾದರ ವೇತನ Rs-10,000/- ಹಾಗೂ ಸಂಸ್ಥೆಯ ಉಸ್ತಾದರಿಗೆ ಎಲ್ಲಾ ರೀತಿಯ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿರುತ್ತದೆ .

ಕಳೆದ ಒಂದು ವರ್ಷಗಳಿಂದ ಯಶಸ್ವಯಾಗಿ ಸಮಿತಿಯನ್ನು ಮುಂದುವರೆಸಿದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸಂಸ್ಥೆಯ ಸಾರಥಿಗಳು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

error: Content is protected !! Not allowed copy content from janadhvani.com