janadhvani

Kannada Online News Paper

ಇತಿಹಾಸ ಪುರುಷರ ಪಠ್ಯಕ್ಕೆ ಕತ್ತರಿ: ಎಸ್ಸೆಸ್ಸೆಫ್ ಕ್ಯಾಂಪಸ್ ಖಂಡನೆ

ಕೋವಿಡ್ ನೆಪದಲ್ಲಿ ಪಠ್ಯಕ್ರಮದಲ್ಲಿ ಕಡಿತಗೊಳಿಸುತ್ತಿರುವ ಭಾಗವಾಗಿ ಇತಿಹಾಸ ವಿಭಾಗದ ಪಠ್ಯ ಪುಸ್ತಕದಿಂದ, ಮುಹಮ್ಮದ್ ಪೈಗಂಬರ್ ,ಜೀಸಸ್ ಕ್ರೈಸ್ಟ್ ಸಹಿತ ವಿದ್ಯಾರ್ಥಿಗಳು ಇದುವರೆಗೆ ಕಲಿಯುತ್ತಿದ್ದ ಕೆಲವು ಇತಿಹಾಸ ಪುರುಷರ ಹಾಗೂ ನಮ್ಮ ನಾಡಿನ ಅಭಿವೃದ್ಧಿಗೆ ದುಡಿದ ರಾಣಿ ಅಬ್ಬಕ್ಕ ದೇವಿ, ಟಿಪ್ಪು ಸುಲ್ತಾನ್ ಹಾಗೂ ಸಂಗೊಳ್ಳಿ ರಾಯಣ್ಣ ಮುಂತಾದವರ ಕುರಿತು ಇರುವ ಪಠ್ಯಭಾಗವನ್ನು ತೆಗೆದುಹಾಕಿರುವುದನ್ನು ಎಸ್ಸೆಸ್ಸೆಫ್ ಕ್ಯಾಂಪಸ್ ವಿಭಾಗವು ಖಂಡಿಸುತ್ತದೆ‌.

ಟಿಪ್ಪುಸುಲ್ತಾನ್ ಸಹಿತ‌ ಪೂರ್ವಿಕ ರಾಜರುಗಳು ದೇಶಕ್ಕೆ ವಿಶೇಷತಃ ಕರ್ನಾಟಕದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ.ಹೀಗಿರುವಾಗ ಕನ್ನಡಿಗರ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕಲಿಸಿಕೊಡಬೇಕಾದ ಸರ್ಕಾರವೇ ಅದನ್ನು ಬಚ್ಚಿಡುವುದು ಸರಿಯಲ್ಲ .ಮಕ್ಕಳ‌ ಶಿಕ್ಷಣದಲ್ಲಿ ಯಾವುದೇ ರಾಜಕೀಯ ಬೇಳೆ ಬೇಯಿಸುವ ಹುನ್ನಾರ ನಿಜಕ್ಕೂ ಆಕ್ಷೇಪಾರ್ಹ.ಚರಿತ್ರೆ ಸಂಬಂಧಿಸಿದ ಯಾವುದೇ ಸೂಕ್ಷ್ಮ ವಿಷಯದಲ್ಲಿ ರಾಜ್ಯ ಸರಕಾರವು ಹಸ್ತಕ್ಷೇಪ ನಡೆಸುವುದು ಸಮಂಜಸ ಕೂಡ ಅಲ್ಲವೆಂದು SSF ಕರ್ನಾಟಕ ರಾಜ್ಯ ಕ್ಯಾಂಪಸ್ ವಿಭಾಗ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com