janadhvani

Kannada Online News Paper

ಕೋವಿಡ್ ನೆಪವೊಡ್ಡಿ ಟಿಪ್ಪು ಸುಲ್ತಾನ್ ಪಾಠವನ್ನು ಕಿತ್ತು ಹಾಕಿದ ಕೆಟಿಬಿಎಸ್

ಯೇಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದ್ ಅವರ ಬೋಧನೆಗಳ ಸಂಪೂರ್ಣ ಅಧ್ಯಾಯವನ್ನು ಆರನೇ ತರಗತಿಯಿಂದ ಕೈಬಿಡಲಾಗಿದೆ. ಆದರೆ ವಿದ್ಯಾರ್ಥಿಗಳು ಈ ಧಾರ್ಮಿಕ ವ್ಯಕ್ತಿಗಳು ಮತ್ತು ಅವರ ಬೋಧನೆಗಳನ್ನು ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಾರೆ. ಬೌದ್ಧಧರ್ಮ ಮತ್ತು ಜೈನ ಧರ್ಮವನ್ನು ಕಲಿಸಲು ನಿಗದಿಪಡಿಸಿದ ಸಮಯವನ್ನು ಸಹ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ ಎಂದು ಕೆಟಿಬಿಎಸ್ ಹೇಳಿದೆ.

ಬೆಂಗಳೂರು,ಜು.28- ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ಮೈಸೂರು ಇತಿಹಾಸದ ಪ್ರಮುಖ ಭಾಗವಾದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದು ಹಾಕಿದೆ, ಕೋವಿಡ್ ಕಾರಣದಿಂದಾಗಿ ಸಮಯದ ಕೊರತೆ ನೆಪವೊಡ್ಡಿ ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಐತಿಹಾಸಿಕ ಚರಿತ್ರೆ ಭಾಗದಿಂದ ಟಿಪ್ಪು ಸುಲ್ತಾನ್ ಪಾಠವನ್ನು ಕಿತ್ತು ಹಾಕಲಾಗಿದೆ.

ಈ ನಡುವೆ ಮೈಸೂರು ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಈ ವಿಷಯಗಳ ಬಗ್ಗೆ ಪ್ರಸ್ತುತಿಗಳನ್ನು ತಯಾರಿಸಿ ತೋರಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಟಿಬಿಎಸ್ ಹೇಳಿದೆ.

2020-21ರ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಅಂದಾಜು ಮಾಡಿ, ಭಾಗಗಳನ್ನು ಪರಿಷ್ಕರಣೆ ಅಥವಾ ಮೊಟಕು ಮಾಡಲಾಗಿದೆ. ಸೆಪ್ಟೆಂಬರ್ 1 ರಿಂದ 120 ದಿನಗಳಲ್ಲಿಅಗತ್ಯವಾದ ಪಠ್ಯದ ಭಾಗಗಳನ್ನು ಕಲಿಸಲು ಕೆಟಿಬಿಎಸ್ 6 ರಿಂದ 10 ನೇ ತರಗತಿಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಇದೇ ರೀತಿ ಬೇರೆ ಬೇರೆ ವಿಷಯಗಳ ಕೈಪಿಡಿಯೂ ಸಹ ಬಿಡುಗಡೆಯಾಗಿದೆ. ‘ಧರ್ಮಗಳು, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ತುಳುನಾಡಿನ ಜಾನಪದ’ ಮೊದಲಾದ ಹೆಚ್ಚು ಪ್ರಮುಖ ವಿಷಯಗಳತ್ತ ಶಿಕ್ಷಕರು ಗಮನಹರಿಸಬೇಕಾಗಿದ್ದು ಅದಕ್ಕಾಗಿ ಟಿಪ್ಪು ಅಧ್ಯಾಯ ಮೊಟಕುಗೊಳಿಸಲಾಗಿದೆ

ಯೇಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದ್ ಅವರ ಬೋಧನೆಗಳ ಸಂಪೂರ್ಣ ಅಧ್ಯಾಯವನ್ನು ಆರನೇ ತರಗತಿಯಿಂದ ಕೈಬಿಡಲಾಗಿದೆ. ಆದರೆ ವಿದ್ಯಾರ್ಥಿಗಳು ಈ ಧಾರ್ಮಿಕ ವ್ಯಕ್ತಿಗಳು ಮತ್ತು ಅವರ ಬೋಧನೆಗಳನ್ನು ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಾರೆ. ಬೌದ್ಧಧರ್ಮ ಮತ್ತು ಜೈನ ಧರ್ಮವನ್ನು ಕಲಿಸಲು ನಿಗದಿಪಡಿಸಿದ ಸಮಯವನ್ನು ಸಹ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ ಎಂದು ಕೆಟಿಬಿಎಸ್ ಹೇಳಿದೆ.

error: Content is protected !! Not allowed copy content from janadhvani.com