janadhvani

Kannada Online News Paper

ದ.ಕ.ಜಿಲ್ಲೆಯಲ್ಲಿ ಒಟ್ಟು ಮರಣ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆ

ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ಜ.1ರಿಂದ ಜು.19ರವರೆಗೆ ವಿವಿಧ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ ಒಟ್ಟು 4,787. ಆದರೆ ಈ ಬಾರಿ ಕೊರೋನಾ ಸಾವುಗಳನ್ನು ಸೇರಿಸಿಯೂ ಜು.20ರವರೆಗೆ ಮೃತಪಟ್ಟಿರುವವರ ಸಂಖ್ಯೆ 3403. ಅಂದರೆ ಕೋವಿಡ್‌ ಅಬ್ಬರದ ನಡುವೆಯೂ ಈ ವರ್ಷ 1,384 ಕಡಿಮೆ ಮರಣ ದಾಖಲಾಗಿದೆ.

ಮಂಗಳೂರು, ಜು.27: ಲಾಕ್‌ಡೌನ್‌ ಹೇರಿದ್ದ ವೇಳೆ ಅಪಘಾತ, ಅಪರಾಧ ಚಟುವಟಿಕೆಗಳ ಸಂಖ್ಯೆ ಇಳಿಕೆಯಾದದ್ದು, ಜೊತೆಗೆ ಜನತೆ ಜಾಗೃತರಾಗಿ ಮನೆಯಲ್ಲುಳಿದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಗಣನೀಯವಾಗಿ ತಗ್ಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಜು.24ರ ರಾಜ್ಯ ಬುಲೆಟಿನ್‌ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4214 ಕೋವಿಡ್‌ ಸೋಂಕಿತರ ಪೈಕಿ 99 ಮಂದಿ ಮೃತಪಟ್ಟು ಡೆತ್‌ರೇಟ್‌ ಶೇ.2.34ಕ್ಕೇರಿದೆ. ಇಷ್ಟಾದರೂ ಮಂಗಳೂರಿನ ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ಬಾರಿ ಇಳಿಮುಖವಾಗಿರುವುದು ವಿಶೇಷ.

ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ಜ.1ರಿಂದ ಜು.19ರವರೆಗೆ ವಿವಿಧ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ ಒಟ್ಟು 4,787. ಆದರೆ ಈ ಬಾರಿ ಕೊರೋನಾ ಸಾವುಗಳನ್ನು ಸೇರಿಸಿಯೂ ಜು.20ರವರೆಗೆ ಮೃತಪಟ್ಟಿರುವವರ ಸಂಖ್ಯೆ 3403. ಅಂದರೆ ಕೋವಿಡ್‌ ಅಬ್ಬರದ ನಡುವೆಯೂ ಈ ವರ್ಷ 1,384 ಕಡಿಮೆ ಮರಣ ದಾಖಲಾಗಿದೆ.

ಕಳೆದ ವರ್ಷ ಜನವರಿಯಿಂದ ಜೂನ್‌ ಅಂತ್ಯದವರೆಗೆ ಮಂಗಳೂರಲ್ಲಿ 1,032 ಅಪಘಾತಗಳು ಸಂಭವಿಸಿ ಅದರಲ್ಲಿ 148 ಮಂದಿ ಸಾವಿಗೀಡಾಗಿದ್ದರು. 1075 ಮಂದಿ ಗಾಯಗೊಂಡಿದ್ದರು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 326 ಅಪಘಾತಗಳು ಸಂಭವಿಸಿ 50 ಮಂದಿ ಮೃತಪಟ್ಟಿದ್ದಾರೆ. 364 ಮಂದಿ ಮಾತ್ರ ಗಾಯಗೊಂಡಿದ್ದಾರೆ.

ಅಪಘಾತ ಪ್ರಕರಣಗಳು ಇಳಿಮುಖವಾಗಿರುವುದು ಒಂದು ಕಾರಣವಾದರೆ ಕೇರಳದಿಂದ ಬರುವ ರೋಗಿಗಳ ಸಂಖ್ಯೆ, ಹೊರ ಜಿಲ್ಲೆಗಳಿಂದ ದಕ್ಷಿಣ ಕನ್ನಡಕ್ಕೆ ಬರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿರುವುದು ಈ ರೀತಿ ಸಾವಿನ ಪ್ರಮಾಣ ತಗ್ಗಲು ಮತ್ತೊಂದು ಕಾರಣ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.

error: Content is protected !! Not allowed copy content from janadhvani.com