janadhvani

Kannada Online News Paper

ಅನ್​ಲಾಕ್ 3.0​- ವಿದೇಶಗಳಿಗೆ ವಿಮಾನ‌ ಹಾರಾಟ ಸಾಧ್ಯತೆ

ನವದೆಹಲಿ,ಜುಲೈ.27:ಕರೋನಾ ವೈರಸ್, ಲಾಕ್‌ಡೌನ್ ನಿಂದಾಗಿ ದೇಶದಾದ್ಯಂತ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸೋಂಕು ‘ಪ್ರಸರಣ’ ತಡೆಗಟ್ಟಲು ಕೇಂದ್ರ ಸರ್ಕಾರ ಹಲವಾರು ಕಠಿಣ ನಿಬಂಧನೆಗಳನ್ನು ವಿಧಿಸಿದೆ.
ಈ ನಿಬಂಧನೆಗಳನ್ನು ಹಂತ ಹಂತವಾಗಿ ಸಡಿಲಿಸಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಎಚ್ಚರಿಸುತ್ತಲೇ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿದೆ. ಆಗಸ್ಟ್ ಒಂದರಿಂದ ಮೂರನೇ ಹಂತದ ಅನ್​ಲಾಕ್​ ನಿಯಮಗಳು ಜಾರಿ ಬರಬೇಕಿದೆ. ಇದಕ್ಕಾಗಿ ಕೇಂದ್ರ ಗೃಹ ಇಲಾಖೆ ಅಂತಿಮ ಹಂತದ ತಯಾರಿ ನಡೆಸುತ್ತಿದೆ.

ಮೂರನೇ ಹಂತದ ಲಾಕ್​ಡೌನ್​ ಮಾರ್ಗಸೂಚಿ ಪ್ರಕಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಹೊಸ ಮಾರ್ಗಸೂಚಿ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳಿಂದ ಅಭಿಪ್ರಾಯ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯದ ಮಾಹಿತಿಗಳ ಪ್ರಕಾರ ಮೂರನೇ ಹಂತದ ಅನ್​ಲಾಕ್​ ನಲ್ಲಿ ಏನಿರುತ್ತೆ? ಏನಿರಲ್ಲ? ಎಂಬ ಸಂಗತಿಗಳು ಈ ಕೆಳಕಂಡಂತಿವೆ.

  • ಶಾಲೆ ಮತ್ತು ಕಾಲೇಜುಗಳು ಆರಂಭದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ
  • ಅಗಸ್ಟ್ 15ರ ಬಳಿಕ ಅಥವಾ ಸೆಪ್ಟಂಬರ್ 1ರ ನಂತರ ಆರಂಭಕ್ಕೆ ನೀಡಬಹುದು
  • ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬಹುದು.
  • ಖಾಸಗಿ ಶೈಕ್ಷಣಿಕ ಕೋಚಿಂಗ್ ಸಂಸ್ಥೆಗಳಿಗೆ ಷರತ್ತು ಬದ್ಧವಾದ ಅವಕಾಶ ನೀಡಬಹುದುಆಗಸ್ ಕೊನೆಯಿಂದ ಸಿನಿಮಾ ಮಂದಿರಗಳನ್ನು ಆರಂಭಿಸಲು ಅನುಮತಿ ನೀಡಬಹುದು
  • ಶೇ. 25 ರಿಂದ 50 ರಷ್ಟು ವೀಕ್ಷಕರೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಹುದು
  • ಜಿಮ್ ಗಳಿಗೆ ಷರತ್ತುಗಳನ್ನು ವಿಧಿಸಿ ಅವಕಾಶ ನೀಡುವ ಸಾಧ್ಯತೆ ಇದೆ.
  • ಸದ್ಯಕ್ಕೆ ಪೂರ್ಣ ಪ್ರಮಾಣದ ರೈಲು ಸಂಚಾರ ಇರುವುದಿಲ್ಲ
  • ವಿಶೇಷ ವಿಶೇಷ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ
  • ಪೂರ್ಣ ಪ್ರಮಾಣದ ವಿಮಾನ ಸಂಚಾರ ಕೂಡ ಇರುವುದಿಲ್ಲ
  • ವಿಮಾನ ಹಾರಾಟದ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ
  • ಕೆಲ ವಿದೇಶಗಳಿಗೂ ನಿರ್ದಿಷ್ಟವಾದ ವಿಮಾನ‌ ಹಾರಾಟ ಸಾಧ್ಯತೆ ಇದೆ
  • ಮೆಟ್ರೋ ರೈಲು ಸಂಚಾರ ಮೇಲಿರುವ ನಿರ್ಬಂಧ ಸಡಿಲ ಮಾಡುವ ಸಾಧ್ಯತೆ ಇಲ್ಲ
  • ಸದ್ಯಕ್ಕೆ ಸ್ವಿಮಿಂಗ್ ಫೂಲ್ ತೆರೆಯಲು ಅವಕಾಶ ನೀಡುವ ಸಾಧ್ಯತೆಗಳೂ ಇಲ್ಲ
  • ಕಂಟೈನ್​​ಮೆಂಟ್ ಝೋನ್ ಹೊರೆತಾದ ಪ್ರದೇಶಗಳಲ್ಲಿ ನೈಟ್ ಕರ್ಪ್ಯೂ ಸಮಯ ಇಳಿಕೆ ಸಾಧ್ಯತೆ

error: Content is protected !! Not allowed copy content from janadhvani.com