janadhvani

Kannada Online News Paper

ಕೊಲ್ಲಿ ರಾಷ್ಟ್ರಗಳಲ್ಲಿ ಕೋವಿಡ್ ಪ್ರಮಾಣ ಇಳಿಕೆ- ಸೌದಿಗೆ ರಸ್ತೆ ಮಾರ್ಗ ಪ್ರವೇಶಾನುಮತಿ

ಕೊಲ್ಲಿಯಲ್ಲಿ ಕಳೆದ 24 ಗಂಟೆಗಳಲ್ಲಿ, ಕೋವಿಡ್ ಮರಣ ಮತ್ತು ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. 47 ಮರಣ ವರದಿಯಾಗಿದ್ದು, ಕೊಲ್ಲಿಯಲ್ಲಿ ಒಟ್ಟು ಮರಣ ಸಂಖ್ಯೆ 4048 ಕ್ಕೆ ಏರಿದೆ. ಹೊಸ ಪ್ರಕರಣಗಳ ಸಂಖ್ಯೆ 5,000 ಕ್ಕಿಂತ ಕಡಿಮೆ.

ಸೌದಿ ಅರೇಬಿಯಾದಲ್ಲಿ 34, ಒಮಾನ್‌ನಲ್ಲಿ ಆರು, ಕುವೈತ್‌ನಲ್ಲಿ ನಾಲ್ಕು, ಬಹ್ರೇನ್‌ನಲ್ಲಿ ಎರಡು ಮತ್ತು ಕತಾರ್‌ನಲ್ಲಿ ಒಂದು ಮರಣ ಸಂಭವಿಸಿದ್ದು, ಯುಎಇಯಲ್ಲಿ ಯಾವುದೇ ಹೊಸ ಮರಣ ದೃಢಪಟ್ಟಿಲ್ಲ. ಕೊಲ್ಲಿಯಲ್ಲಿ ಒಟ್ಟು ರೋಗಿಗಳ ಸಂಖ್ಯೆ ಆರು ಲಕ್ಷವನ್ನು ತಲುಪಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ ಐದು ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ ಸೌದಿ ಅರೇಬಿಯಾ ಮತ್ತು ಒಮಾನ್‌ನಲ್ಲಿ ರೋಗಿಗಳ ಸಂಖ್ಯೆ ಇಳಿಕೆಯಾಗಿದೆ.

ಕತಾರ್‌ನಲ್ಲಿ ಶಾಲೆಗಳನ್ನು ತೆರೆಯಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಶೈಕ್ಷಣಿಕ ವರ್ಷವು ಮೂರು ಹಂತಗಳಲ್ಲಿ ಪ್ರಾರಂಭವಾಗಲಿದೆ. ಮೂರನೇ ಹಂತದಿಂದ ಅಧ್ಯಯನವು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಳ್ಳಲಿದೆ.

ಕೋವಿಡ್ ಸಂದರ್ಭದಲ್ಲಿ ಬಕ್ರೀದ್ ಹಬ್ಬ ಆಚರಣೆಗೆ ವಿವಿಧ ದೇಶಗಳು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಘೋಷಿಸಿವೆ. ಈದ್ಗಾ ಮತ್ತು ಮಸೀದಿಗಳಲ್ಲಿ ಈದ್ ಪ್ರಾರ್ಥನೆ ಇರುವುದಿಲ್ಲ. ಬಲಿದಾನಕ್ಕೂ ನಿಯಂತ್ರಣ ಹೇರಲಾಗಿದೆ.

ಈ ಮಧ್ಯೆ, ಸೌದಿ ಅರೇಬಿಯಾವು ದೇಶೀಯರಿಗೆ ಮತ್ತು ಅವರ ಅವಲಂಬಿತರಿಗೆ ರಸ್ತೆ ಮಾರ್ಗ ದೇಶಕ್ಕೆ ಹಿಂದಿರುಗುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಯುಎಇ, ಕುವೈತ್ ಮತ್ತು ಬಹ್ರೇನ್‌ನಿಂದ ಮಾತ್ರ ಮೊದಲ ಹಂತದಲ್ಲಿ ಮರಳಲು ಅವಕಾಶವಿದೆ.

error: Content is protected !! Not allowed copy content from janadhvani.com