janadhvani

Kannada Online News Paper

ಕೋವಿಡ್ ಮರಣ: 50 ಮೃತದೇಹಗಳ ಸಾಮೂಹಿಕ ದಹನ- ಆಕ್ರೋಶ

ಹೈದರಾಬಾದ್‌: ಕೋವಿಡ್ ನಿಂದ ಮೃತಪಟ್ಟ 50 ಮೃತದೇಹಗಳನ್ನು ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ದಹನ ಮಾಡಲಾಗಿದೆ.

ಸಾರಿಗೆ ವ್ಯವಸ್ಥೆ ಹಾಗೂ ಮಾನವ ಶಕ್ತಿಯ ಕೊರತೆಯಿಂದಾಗಿ ಇಲ್ಲಿನ ಎರ್ರಗಡ್ಡ ಶಾವಾಗಾರದಲ್ಲಿ ಇಂತಹ ಕೃತ್ಯ ನಡೆದಿದ್ದು, ಶವಗಳ ಸಾಮೂಹಿಕ ದಹನದ ವಿಡಿಯೋ ಇದೀಗ ದೇಶವ್ಯಾಪಿ ವೈರಲ್ ಆಗುತ್ತಿದೆ. ಪರಿಣಾಮ ಸರ್ಕಾರದ ನಡೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ತೆಲಂಗಾಣ ಆರೋಗ್ಯ ಇಲಾಖೆ, “ಈ ಮೃತ ದೇಹಗಳು ಒಂದೇ ದಿನ ಸಾವನ್ನಪ್ಪಿದವರದ್ದಲ್ಲ. ಕಳೆದ ಮೂರು ದಿನಗಳಿಂದ ಮೃತಪಟ್ಟವರ ದೇಹವನ್ನು ಒಟ್ಟಾಗಿ ಅಂತ್ಯಕ್ರಿಯೆ ಮಾಡಲಾಗಿದೆ” ಎಂದು ತಿಳಿಸಿದೆ.

ವಿಶ್ವದಾದ್ಯಂತ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 15 ದಶ ಲಕ್ಷಕ್ಕೂ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಕೊರೋನಾದಿಂದಾಗಿ ಈವರೆಗೆ 6,20,000 ಜನ ಮೃತಪಟ್ಟಿದ್ದಾರೆ. ಮಾರಣಾಂತಿಕ ಕೊರೋನಾ ವೈರಸ್ ಪ್ರಸ್ತುತ ಎಲ್ಲಾ ದೇಶಗಳಲ್ಲೂ ವ್ಯಾಪಿಸಿದೆ. ಆದರೆ, 2/3 ರಷ್ಟು ಪ್ರಕರಣಗಳು 10 ದೇಶಗಳಲ್ಲಿ ದಾಖಲಾಗುತ್ತಿದ್ದರೆ, ಒಟ್ಟು ಸೋಂಕಿತರ ಪೈಕಿ ಅರ್ಧದಷ್ಟು ಜನ ಕೇವಲ 3 ದೇಶಗಳಲ್ಲೇ ಇದ್ದಾರೆ. ಈ ಪೈಕಿ ಭಾರತವೂ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

error: Content is protected !! Not allowed copy content from janadhvani.com