janadhvani

Kannada Online News Paper

ಕೆಸಿಎಫ್ ಅಬುಧಾಬಿ ಝೋನ್: ಬೃಹತ್ ರಕ್ತದಾನ ಶಿಬಿರ

ಅಬುಧಾಬಿ : “ರಕ್ತದಾನ ಜೀವದಾನ” ಎಂಬ ಘೋಷ್ಯ ವಾಕ್ಯದೊಂದಿಗೆ ಯುಎಇ ಕೆ.ಸಿ.ಎಫ್ ಅಬುಧಾಬಿ ಝೋನ್ ವತಿಯಿಂದ ಬರುವ ಜುಲೈ 24, ಶುಕ್ರವಾದಂದು ಅಬುಧಾಬಿ ಖಾಲಿದಿಯಾ ಮಾಲ್ ಸಮೀಪದ ಬ್ಲಡ್ ಬ್ಯಾಂಕ್ ಇದರಲ್ಲಿ ಬೆಳಿಗ್ಗೆ 9 ರಿಂದ 3ರ ವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಕೆ.ಸಿ.ಎಫ್ ಬ್ಲಡ್ ಸೈಬೋ ಇದರ ಅಧೀನದಲ್ಲಿ ನಡೆಯುವ ಈ ಶಿಬಿರವು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ದೇಶದ ಕಾನೂನನ್ನು ಗೌರವಿಸಿ ತನ್ನ ಶಿಬಿರವನ್ನು ನಡೆಸಲಿದೆ.

ಕೆ.ಸಿ.ಎಫ್ ಯು.ಎ.ಇ ಘಟಕವು ಕಳೆದ ನಾಲ್ಕು ತಿಂಗಳ ಕೋವಿಡ್ ಸಮಯದಲ್ಲಿ, ಉದ್ಯೋಗ ಕಳೆದುಕೊಂಡ ಅನಿವಾಸಿಗಳಿಗೆ, ಕೋವಿಡ್ ವೈರಸಿಗೆ ತುತ್ತಾದ ನೂರಾರು ರೋಗಿಗಳಿಗೆ ಹಾಗು ರಂಜಾನ್ ತಿಂಗಳ ಸಮಯದಲ್ಲಿ ಲಾಕ್ಡೌನ್ ತುರ್ತುಪರಿಸ್ಥಿತಿ ಸಮಯದಲ್ಲಿ ಸಾವಿರಾರು ಅನಿವಾಸಿಗಳಿಗೆ ಜಾತಿ ಮತ ಭೇದವಿಲ್ಲದೆ ತನ್ನ ಸಾಂತ್ವನ ಘಟಕದ ಮೂಲಕ ನೆರವಿನ ಹಸ್ತವನ್ನು ಚಾಚಿದೆ.

ಹಲವು ವಿಧದ ಸಂಕಷ್ಟಕ್ಕೊಳಗಾಗಿ ತಾಯಿನಾಡಿಗೆ ಮರಳಲಾಗದ ಅನಿವಾಸಿ ಕನ್ನಡಿಗರಿಗೆ ತನ್ನ ದೇಶಕ್ಕೆ ಮರಳಲು ಚಾರ್ಟಡ್ ವಿಮಾನವನ್ನು ಒದಗಿಸುವ ಮೂಲಕ ಕೆ.ಸಿ.ಎಫ್ ಅನಿವಾಸಿ ಕನ್ನಡಿಗರ ಏಕೈಕ ನೆಚ್ಚಿನ ಸಂಘಟನೆ ಎಂಬ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

ಶುಕ್ರವಾರ ನಡೆಯುವ ಬೃಹತ್ ರಕ್ತದಾನ ಶಿಬಿರದಲ್ಲಿ ಸರ್ವ ಅನಿವಾಸಿಗಳು ಭಾಗವಯಿಸಿ ಯಶಸ್ವಿಗೊಳಿಸುವಂತೆ ಕೆ.ಸಿ.ಎಫ್ ಅಬುಧಾಬಿ ಝೋನ್ ಘಟಕವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ:-ಇರ್ಫಾಝ್ ತುಂಬೆ

error: Content is protected !! Not allowed copy content from janadhvani.com