janadhvani

Kannada Online News Paper

ಒಂದು ವಾರಗಳ ಲಾಕ್‌ಡೌನ್ ತೆರವು- ಏನೆಲ್ಲಾ ನಿರ್ಬಂಧ?

ಬೆಂಗಳೂರು: ಬೆಂಗಳೂರಿನಲ್ಲಿ ಇಂದಿಗೆ ಒಂದು ವಾರಗಳ ಕಾಲದ ಲಾಕ್‌ಡೌನ್‌ ಅವಧಿ ಮುಕ್ತಾಯವಾಗಿದ್ದು, ನಾಳೆಯಿಂದ ಲಾಕ್‌ಡೌನ್‌ ತೆರವಾಗಲಿದೆ. ಆದರೆ, ಲಾಕ್‌ಡೌನ್‌ ತೆರವಾದರೂ ಸಹ ಜನರ ಮುಕ್ತ ಸಂಚಾರಕ್ಕೆ, ಬೇಜಾಬಿಟ್ಟಿ ವರ್ತನೆಗೆ ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು ಕೆಲವು ನಿರ್ಬಂಧಗಳನ್ನು ಹೇರಲಿದೆ ಎನ್ನಲಾಗುತ್ತಿದೆ.

ಲಾಕ್‌ಡೌನ್‌ ತೆರವಾದರೂ ಸಹ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ, ಭಾನುವಾರದ ಲಾಕ್‌ಡೌನ್‌ ಮಧ್ಯ ಮಾರಾಟ ಹಾಗೂ ಅಗತ್ಯ ವಸ್ತುಗಳ ಮಾರಾಟ ಹಾಗೂ ಜನರ ಸಂಚಾರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಸಮಯದ ನಿರ್ಬಂಧವನ್ನು ಜಾರಿಗೊಳಿಸಲಿದೆ ಎನ್ನಲಾಗುತ್ತಿದೆ. ಹಾಗಾದರೆ ರಾಜ್ಯ ಸರ್ಕಾರದ ನೂತನ ಮಾರ್ಗಸೂಚಿ ಹೇಗಿರಲಿದೆ? ಯಾವೆಲ್ಲಾ ವಿಚಾರಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ? ಇಲ್ಲಿದೆ ಮಾಹಿತಿ.

  • ನೈಟ್ ಕರ್ಫ್ಯೂ ಸಮಯದಲ್ಲಿ ಬದಲಾವಣೆ, ರಾತ್ರಿ 8 ರ ಬದಲು ಸಂಜೆ 7 ರಿಂದ ನೈಟ್ ಕರ್ಫ್ಯೂ ಜಾರಿ ಸಾಧ್ಯತೆ.
  • ಜನ ಮತ್ತು ವಾಹನಗಳ ಸಂಚಾರ, ಚಟುವಟಿಕೆಗಳಿಗೂ ನಿರ್ಬಂಧ ಷರತ್ತು ಅಥವಾ ಸಮಯ ನಿಗದಿ ಮಾಡುವ ಪ್ರಸ್ತಾಪ ಇದೆ.
  • ಕಂಟೈನ್ಮೆಂಟ್ ವಲಯ ಮತ್ತು ಸೀಲ್‌ಡೌನ್ ವಲಯಗಳಲ್ಲಿ ಇನ್ನಷ್ಟು ಕಠಿಣ ನಿಯಮಗಳ ಸಾಧ್ಯತೆ.
  • ಬೆಂಗಳೂರಿಗೆ ಆಗಮಿಸುವವರು ಹಾಗೂ ಇಲ್ಲಿಂದ ಹೊರ ಜಿಲ್ಲೆಗಳಿಗೆ ಕ್ರಮಿಸುವವರ ಮೇಲೆ ಕೆಲವು ನಿಬಂಧನೆಗಳನ್ನು ವಿಧಿಸುವ ಸಾಧ್ಯತೆ.
  • ಮತ್ತೆ ಲಾಕ್‌ಡೌನ್ ಆಗುವ ಆತಂಕದಲ್ಲಿ ಬೆಂಗಳೂರು ಬಿಟ್ಟು ಹೋಗೋರಿಗೆ ಕಡಿವಾಣ.
  • ನಗರದ ಒಳಗೆ ಮತ್ತು ಹೊರ ವಲಯದಲ್ಲಿ , ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಳ.
  • ಭಾನುವಾರದ ಲಾಕ್‌ಡೌನ್ ಅವಧಿ ಆಗಸ್ಟ್ 2 ರವರೆಗೂ ಮುಂದುವರಿಕೆ.
  • ಶನಿವಾರ ಸರ್ಕಾರಿ ನೌಕರರಿಗೆ ರಜೆ ಘೋಷಿಸಿರುವ ತೀರ್ಮಾನ ಆಗಸ್ಟ್ 8 ರವರೆಗೂ ಮುಂದುವರಿಕೆ.
  • ಶನಿವಾರವೂ ಲಾಕ್‌ಡೌನ್ ಪ್ರಸ್ತಾಪ ಸದ್ಯಕ್ಕೆ ಜಾರಿ ಇಲ್ಲ.
  • ಬೇಕಾ ಬಿಟ್ಟಿ ಜನರ ಓಡಾಟಕ್ಕೆ ಬ್ರೇಕ್.
  • ಪಾರ್ಕ್ ನಲ್ಲಿ ಪ್ರವೇಶಕ್ಕೆ ಸಮಯ ನಿಗಧಿ.
  • ಮದ್ಯ ಮಾರಾಟ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗಧಿ.

error: Content is protected !! Not allowed copy content from janadhvani.com