janadhvani

Kannada Online News Paper

ಪಿಯುಸಿ ಪರೀಕ್ಷೆ: ಶಿರ್ತಾಡಿ ಅಫೀಝ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಮೂಡಬಿದಿರೆ: ಇಲ್ಲಿನ ಜೈನ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಅಫೀಝ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಪರೀಕ್ಷಾ ಮಂಡಳಿಯು ನಡೆಸಿದ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ, ಅಫೀಝ 581(97%) ಅಂಕಗಳನ್ನು ಪಡೆದಿದ್ದಾರೆ. ಇವರು ಮೂಡಬಿದರೆ ತಾಲ್ಲೂಕಿನ ಶಿರ್ತಾಡಿ ನಿವಾಸಿ ಅಬೂಬಕ್ಕರ್ ಹಾಗೂ ಝೀನತ್ ದಂಪತಿ ಪುತ್ರಿ .

ಮಗಳ ಸಾಧನೆಗೆ ಹೆತ್ತವರು, ಕುಟುಂಬಸ್ಥರು ಹಾಗೂ ಮಿತ್ರರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com