janadhvani

Kannada Online News Paper

ವಾರದೊಳಗೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ, 3ನೇ ರಿಸಲ್ಟ್ಗೆ ಕಾಯುತ್ತಿದ್ದೇನೆ- ಸಿಟಿ ರವಿ

ಚಿಕ್ಕಮಗಳುರು: ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಅವರು ಭಾನುವಾರ ಮೂರನೇ ಬಾರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವರು “ಒಂದು ವಾರದೊಳಗಿನ ಎರಡು ಟೆಸ್ಟ್ನಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ, ಅದಕ್ಕಾಗಿ ನಾನು ಇಂದು 3ನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್-ಗಾಗಿ ಕಾಯುತ್ತಿದ್ದೇನೆ” ಎಂದಿದ್ದಾರೆ.

ಈ ಹಿಂದೆ ತಮಗೆ ಕೊರೋನಾ ದೃಢಪಟ್ಟಿರುವ ಬಗ್ಗೆ ಟ್ವೀಟ್ ಮಾಡಿದ್ದ ಸಚಿವ ಸಿಟಿ ರವಿ , ”ನಾನು ಕ್ಷೇಮವಾಗಿದ್ದೇನೆ. ಕೊರೋನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ” ಎಂದು ಹೇಳಿದ್ದರು.

error: Content is protected !! Not allowed copy content from janadhvani.com