janadhvani

Kannada Online News Paper

ಚಾರ್ಟಡ್ ಫ್ಲೈಟ್ ಮೂಲಕ ವಿಟ್ಲದ ಯುವಕನಿಗೆ ಸಾಂತ್ವನದ ಹಸ್ತ ಚಾಚಿದ ಕೆ.ಸಿ.ಎಫ್

ಬುರೈದ ದಲ್ಲಿ ಆನಾರೋಗ್ಯ ನಿಮಿತ್ತ ಕೆಲಸವಿಲ್ಲದೆ ದಿನದೂಡಲು ಕಷ್ಟಪಡುತ್ತಿದ್ದ ವಿಟ್ಲ ಸಮೀಪದ ಯುವಕನೊಬ್ಬ ಪರಿಚಯಸ್ಥರ ಮುಖಾಂತರ ಕೆ.ಸಿ.ಎಫ್ ಅಲ್’ಗಸೀಂ ನೇತಾರರನ್ನು ಸಂಪರ್ಕಿಸಿ ತನ್ನ ದಾರುಣ ಸ್ಥಿತಿಯನ್ನು ತಿಳಿಸಿದಾಗ ತಕ್ಷಣ ಕಾಯ೯ ಪ್ರವೃತ್ತರಾದ ಕೆ.ಸಿ.ಎಫ್ ನೇತಾರರು ಯುವಕನನ್ನು ಬೇಟಿಯಾಗಿ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಸಿ ಆಹಾರ ಸಾಮಾಗ್ರಿಗಳನ್ನು ನೀಡಿ ಸಂತೈಸಿದರು.

ಒಂದೆರಡು ದಿನಗಳ ಬಳಿಕ ಕಫೀಲ್ ನೊಂದಿಗೆ ಮಾತಾಡಿ ಯುವಕನನ್ನು ಕರೆದು ಕೊಂಡು ಬಂದು 2 ತಿಂಗಳುಗಳ ಕಾಲ ಊಟ ಮತ್ತು ವಸತಿ ವ್ಯವಸ್ಥೆ ಮಾಡಿ 9-7-20 ರಂದು ಕೆ.ಸಿ.ಫ್ ಚಾರ್ಟರ್ಡ್ ವಿಮಾನದಲ್ಲಿ ಟಿಕೆಟ್ ಮತ್ತು ಕೊರೆಂಟೈನ್ ವೆಚ್ಚವನ್ನು ಭರಿಸಿ ಊರಿಗೆ ತಲುಪಿಸುವ ಮೂಲಕ ವಿಟ್ಲದ ಅನಿವಾಸಿ ಕನ್ನಡಿಗನ ಸಂಕಷ್ಟದಲ್ಲಿ ಸಾಂತ್ವನದ ಬೆಳಕಾಗುವ ಮೂಲಕ ಪ್ರಶಂಸೆಗೆ ಪಾತ್ರವಾದರು.

ಈ ಕಾರ್ಯಾಚರಣೆಯ ನೇತೃತ್ವವನ್ನು ಕೆ.ಸಿ.ಎಫ್ ಅಲ್ ಖಸೀಂ ಝೋನ್ ಸಾಂತ್ವನ ಇಲಾಖೆ ಕಾರ್ಯದರ್ಶಿ ರಝಾಕ್ ನೆಕ್ಕಿಲ್ ಹಾಗೂ ಕೆ.ಸಿ.ಎಫ್ ಇಶಾರ40 ಯೂನಿಟ್ ಉಪಾದ್ಯಕ್ಷ ಶಾಫಿ ಪೆರುವಾಯಿಯವರು ವಹಿಸಿದ್ದರು.

error: Content is protected !! Not allowed copy content from janadhvani.com