janadhvani

Kannada Online News Paper

ಹಜ್ 2020: ಜುಲೈ 10 ಕ್ಕೆ ಆನ್‌ಲೈನ್‌ ನೋಂದಣಿ ಮುಕ್ತಾಯ

ರಿಯಾದ್| ಈ ವರ್ಷದ ಪವಿತ್ರ ಹಜ್ ಚಟುವಟಿಕೆಗಳಿಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಜುಲೈ 10 ಶುಕ್ರವಾರದಂದು ಕೊನೆಗೊಳ್ಳಲಿದೆ ಎಂದು ಸೌದಿ ಹಜ್ ಸಚಿವಾಲಯ ಪ್ರಕಟಿಸಿದೆ. ನೋಂದಣಿಗೆ ಇಲ್ಲಿ ಕ್ಲಿಕ್ ಮಾಡಿ

ಯಾತ್ರಿಕರ ಪಟ್ಟಿಯನ್ನು ಜುಲೈ 21 ರಂದು ಪ್ರಕಟಿಸಲಾಗುವುದು. ಈ ವರ್ಷ ಆನ್‌ಲೈನ್‌ನಲ್ಲಿ ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ.

ಹಜ್ ಅರ್ಜಿದಾರರು ಈ ಹಿಂದೆ ಹಜ್ ನಿರ್ವಹಿಸಿರುವುದಿಲ್ಲ ಎಂಬ ಪ್ರತಿಜ್ಞೆ ಹಾಗೂ ಕೊರೋನಾ ಸೋಂಕಿಗೆ ಒಳಗಾಗಿಲ್ಲ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಉಸಿರಾಟದ ಕಾಯಿಲೆಗಳಿಲ್ಲ ಎಂದೂ ಆರೋಗ್ಯ ಸಚಿವಾಲಯವು ಅಂಗೀಕರಿಸಿದ ಮಾನದಂಡಗಳನ್ನು ಸ್ವೀಕರಿಸಲು ಸಿದ್ಧನೆಂದೂ ಆನ್‌ಲೈನ್ ನೋಂದಣಿ ವೇಳೆ ದಾಖಲೆಯ ಮೂಲಕ ಅರ್ಜಿದಾರ ಖಚಿತಪಡಿಸಬೇಕು. ಹಜ್ ಮುಗಿದ ಬಳಿಕ 14 ದಿನಗಳ ಕಾಲ ಕ್ವಾರಂಟೈನ್‌ ನಲ್ಲೂ ಇರಬೇಕಾಗಿದೆ.

ಜಾಗತಿಕವಾಗಿ ಕೋವಿಡ್ ಹರಡಿರುವ ಹಿನ್ನೆಲೆಯಲ್ಲಿ, ಯಾತ್ರಿಕರ ಸುರಕ್ಷತೆಯ ದೃಷ್ಟಿಯಿಂದ ಈ ವರ್ಷದ ಹಜ್ ಅನ್ನು ಸೌದಿಯಲ್ಲಿರುವವರಿಗೆ ಮಾತ್ರವಾಗಿ ಇಳಿಸಲಾಗಿದೆ. 20 ರಿಂದ 50 ವರ್ಷದೊಳಗಿನ ಸೌದಿ ಅರೇಬಿಯಾದಲ್ಲಿ ವಾಸಿಸುವ ವಿದೇಶಿಯರು ಮತ್ತು ಸ್ಥಳೀಯರಿಗೆ ಈ ವರ್ಷದ ಹಜ್‌ನಲ್ಲಿ ಭಾಗವಹಿಸಲು ಅವಕಾಶವಿದೆ.

ಕಳೆದ ವರ್ಷ ಹಜ್‌ಗಾಗಿ 2,489,406 ಲಕ್ಷ ಭಕ್ತರು ಪವಿತ್ರ ಭೂಮಿಗೆ ಭೇಟಿ ನೀಡಿದ್ದರು. ಈ ಪೈಕಿ 1,855,027 ವಿದೇಶಗಳ ಮತ್ತು 634,379 ದೇಶೀಯ ಯಾತ್ರಾರ್ಥಿಗಳಾಗಿದ್ದಾರೆ.

error: Content is protected !! Not allowed copy content from janadhvani.com