janadhvani

Kannada Online News Paper

ಅಜ್ಜಿಯ ಎಡವಟ್ಟು: ಮಸಾಲ ಬದಲು ಕೀಟನಾಶಕ ಬಳಕೆ – ಮೊಮ್ಮಕ್ಕಳ ದಾರುಣ ಸಾವು

ಹೈದ್ರಾಬಾದ್‌:ಕೋಳಿ ಸಂಬಾರಿಗೆ ಚಿಕನ್ ಮಸಾಲ ಎಂದುಕೊಂಡು ಕೀಟನಾಶಕವನ್ನ ಮಿಕ್ಸ್‌ ಮಾಡುವ ಮೂಲಕ ಮಹಾ ಯಡವಟ್ಟೊಂದನ್ನ ಮಾಡಿಕೊಂಡಿರುವ ಅಜ್ಜಿ. ಕೀಟನಾಶಕ ಮಿಕ್ಸ್‌ ಮಾಡಿದ್ದ ಆಹಾರವನ್ನು ಸೇವಿಸಿ ಮಕ್ಕಳಿಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಮೃತರು 11 ವರ್ಷದ ರೋಹಿತ್ ಹಾಗೂ 8 ವರ್ಷದ ಜೀವನ್ ಎಂದು ತಿಳಿದುಬಂದಿದೆ. ಚಿತ್ತೋರ್‌ ಜಿಲ್ಲೆಯ ಎ.ಎಲ್.ರಾಮ್‌ಪುರಂನಲ್ಲಿ ಅಜ್ಜಿಯ ಮನೆ ಇದ್ದು ಪ್ರಸ್ತುತ ಶಾಲೆಗೆ ರಜೆ ಇರುವ ಹಿನ್ನೆಲೆ ರೋಹಿತ್ ಮತ್ತು ಜೀವನ ಇಬ್ಬರು ತಮ್ಮ ರಜಾದಿನಗಳನ್ನ ಕಳೆಯಲು ಅಲ್ಲಿ ಹೋಗಿದ್ದಾರೆ.

ಜೂ.22ರಂದು ಅಜ್ಜಿ ಗೋವಿಂದಮ್ಮ ತನ್ನ ಮೊಮ್ಮಕ್ಕಳಿಗಾಗಿ ಚಿಕನ್ ಕರಿ ಮಾಡಿದ್ದಾರೆ. ಆದರೆ ಯಡವಟ್ಟಾಗಿ ಚಿಕನ್‌ ಮಸಾಲ ಎಂದು ಅಂದುಕೊಂಡು ಕೀಟನಾಶಕವನ್ನ ಪದಾರ್ಥಕ್ಕೆ ಬೆರೆಸಿ ಅಡುಗೆ ಮಾಡಿದ್ದಾರೆ. ತಿಳಿಯದೆ ಮಾಡಿದ್ದರಿಂದ ಗೋವಿಂದಮ್ಮ ಹಾಗೂ ಇಬ್ಬರು ಮಕ್ಕಳು ಸೇರಿ ಊಟ ಮಾಡಿದ್ದಾರೆ.

ಊಟ ಮಾಡುತ್ತಿದ್ದಂತೆ ಮೂವರು ಅಸ್ವಸ್ಥರಾಗಿದ್ದಾರೆ. ಕೂಡಲೇ ಮಾಹಿತಿ ತಿಳಿದ ಸ್ಥಳೀಯರು ಮನೆಗೆ ಓಡಿ ಬಂದು. ಮೂವರನ್ನು ಆಸ್ಪತ್ರೆಗೆ ಕರೆದುಕೊಂಡು ಚಿತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ರೋಹಿತ್ ಮತ್ತು ಜೀವನ್ ಮೃತಪಟ್ಟಿದ್ದಾರೆ. ಗೊತ್ತಾಗದೆ ಮಾಡಿದ ಪ್ರಮಾದದಿಂದ ಅಜ್ಜಿಯ ಸ್ಥಿತಿಯು ಗಂಭೀರವಾಗಿದೆ.

error: Content is protected !! Not allowed copy content from janadhvani.com