ಸುಳ್ಯ ವಿದ್ಯಾರ್ಥಿನಿ ಕೊಲೆಯ ಸೂಕ್ತ ತನಿಖೆಗೆ ಎಸ್ಸೆಸ್ಸೆಫ್ ಆಗ್ರಹ

ಸುಳ್ಯ:(ಜನದ್ವನಿ ವಾರ್ತೆ) ಕೆ.ವಿ.ಜಿ ವಿದ್ಯಾ ಸಂಸ್ಥೆಯ ಬಿ.ಎಸ್ಸಿ ವಿದ್ಯಾರ್ಥಿನಿ ಅಕ್ಷತಾ ಕೊಲೆಯ ಸೂಕ್ತ ತನಿಖೆಗೆ ಆಗ್ರಹಿಸಿ ಎಸ್ಸೆಸ್ಸೆಫ್ ಸ ಡಿವಿಷನ್ ಕ್ಯಾಂಪಸ್ ಸಮಿತಿ ವತಿಯಿಂದ ಸುಳ್ಯ ಪೊಲೀಸ್‌ ಠಾಣಾ ವೃತ್ತ ನಿರೀಕ್ಷರಾದ ಶತೀಶ್’ರವರಿಗೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಅಬ್ದಲ್ಲತೀಫ್ ಸಖಾಫಿ ಗೂನಡ್ಕ, ಪ್ರ.ಕಾರ್ಯದರ್ಶಿ ಜಿ.ಕೆ. ಇಬ್ರಾಹಿಂ ಅಂಜದಿ ಮಂಡೆಕೋಲು, ರಾಜ್ಯ ಸಮಿತಿ ಸದಸ್ಯರಾದ ಅಬ್ದುರ್ರಹ್‌ಮಾನ್ ಮೊಗರ್ಪಣೆ, ಜಿಲ್ಲಾ ಸಮಿತಿ ಸದಸ್ಯರಾದ ಶಮೀರ್ ಮೊಗರ್ಪಣೆ, ಡಿವಿಷನ್ ಸಮಿತಿ ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಕೊಯಂಗಿ, ಖಲೀಲ್ ಝುಹ್‌ರಿ ನೆಕ್ಕಿಲ, ಸಿದ್ದೀಕ್ ಕಟ್ಟೆಕಾರ್, ಅಬ್ಬಾಸ್ ಎ.ಬಿ. ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!