janadhvani

Kannada Online News Paper

ಮಗುವಿನ ಹೊಟ್ಟೆಯಲ್ಲಿ ಅಯಸ್ಕಾಂತದ ತುಂಡುಗಳು- ಶಸ್ತ್ರಚಿಕಿತ್ಸೆ ಯಶಸ್ವಿ

ಬೆಂಗಳೂರು: ನಗರದಲ್ಲಿ ಎರಡು ವರ್ಷದ ಮಗು ಅಯಸ್ಕಾಂತದ ಎರಡು ತುಂಡುಗಳನ್ನು ನುಂಗಿದ್ದು, ದೇವರ ಬೀಸನಹಳ್ಳಿಯ ಸಾಕ್ರ ವರ್ಲ್ಡ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆಯಸ್ಕಾಂತಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಮೇ 24ರಂದು ಆಟವಾಡುತ್ತಿದ್ದ 2 ವರ್ಷದ ಹೆಣ್ಣು ಮಗು ಅಯಸ್ಕಾಂತದ ತುಂಡುಗಳನ್ನು ನುಂಗಿತ್ತು. ಆದರೆ, ಈ ವಿಷಯ ಪೋಷಕರಿಗೆ ಗೊತ್ತಿರಲಿಲ್ಲ. ಹೊಟ್ಟೆನೋವು ಕಾಣಿಸಿಕೊಂಡು ಮಗು ಅಳುತ್ತಿದ್ದುದರಿಂದ ಪೋಷಕರು ಅದೇ ದಿನ ಸಂಜೆ ಮಗುವನ್ನು ಸಮೀಪದ ಸಾಕ್ರ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದರು. ವೈದ್ಯರು ಎಕ್ಸ್‌ ರೇ ತೆಗೆದಾಗ ಹೊಟ್ಟೆಯಲ್ಲಿ ಒಂದು ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ಇನ್ನೊಂದು ಅಯಸ್ಕಾಂತದ ತುಂಡು ಇರುವುದು ಪತ್ತೆಯಾಯಿತು. ಇದಕ್ಕೆ ಎಂಡೋಸ್ಕೋಪಿ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಇದಕ್ಕೆ ಒಪ್ಪಂದ ಪೋಷಕರು ಮಗುವನ್ನು ಮನೆಗೆ ಕರೆದೊಯ್ದಿದ್ದರು.

ಮರುದಿನ ಮತ್ತೆ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ತಪಾಸಣೆ ಮಾಡಿಸಿದರು. ಈ ವೇಳೆ ಎರಡು ತುಂಡುಗಳು ಒಟ್ಟಾಗಿ ಕರುಳಿನ ಬಳಿ ಇರುವುದು ಕಂಡುಬಂತು. ಒಂದು ತುಂಡು ಸುಮಾರು 6 ಎಂಎಂ ಗಾತ್ರದ್ದಾಗಿತ್ತು. ನಂತರ ವೈದ್ಯರು ಲ್ಯಾಪರೋಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನಡೆಸಿ ಆಯಸ್ಕಾಂತಗಳನ್ನು ಹೊರತೆಗೆದರು.
ಈ ಕುರಿತು ಮಾಹಿತಿ ನೀಡಿದ ವೈದ್ಯ ಡಾ.ಅನಿಲ್‌ ಕುಮಾರ್‌, ”ಮಗುವನ್ನು ಬೇಗನೆ ಕರೆತಂದಿದ್ದರಿಂದ ಆಯಸ್ಕಾಂತ ನುಂಗಿದೆ ಎಂದು ಶೀಘ್ರವಾಗಿ ತಿಳಿಯಲು ಸಾಧ್ಯವಾಯಿತು. ಮಕ್ಕಳು ವಸ್ತುಗಳನ್ನು ನುಂಗುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಮಕ್ಕಳು ಆಟವಾಡುವಾಗ ಪೋಷಕರು ಎಚ್ಚರ ವಹಿಸಬೇಕು” ಎಂದರು

error: Content is protected !! Not allowed copy content from janadhvani.com