ಭಾರತೀಯ ಮುಸ್ಲಿಮರಿಗೆ ರಾಜಕೀಯ ಪಾಠ ಯಾರೂ ಹೇಳಿಕೊಡಬೇಕಿಲ್ಲ- ದಮ್ಮಾಮ್ ‘ಕೆ.ಸಿ.ಎಫ್ ಡೇ ರಿಯಾಲಿಟೀ ಟಾಕ್ ಷೋ’ ಕಾರ್ಯಕ್ರಮದಲ್ಲಿ ಶಾಫೀ ಸಅದಿ

ದಮ್ಮಾಮ್:( ಜನಧ್ವನಿ ವಾರ್ತೆ) ಅನಿವಾಸಿ ಕನ್ನಡಿಗರ ಅಭಿಮಾನ ದ ವೇದಿಕೆಯಾದ ಕೆ.ಸಿ.ಎಫ್(ಕರ್ನಾಟಕ ಕಲ್ಚರಲ್ ಫೌಂಡೇಶನ್) ಸೌದಿ ಅರೇಬಿಯ ಇದರ ದಮ್ಮಾಮ್ ಝೋನ್ ಸಮೀತಿ ಕೆ.ಸಿ.ಎಫ್ ಡೇ ಅಂಗವಾಗಿ ನಡೆಸಿದ ಇಶಾರ ಕನ್ವೆನ್ಷನ್ ನ ‘ರಿಯಾಲಿಟೀ ಟಾಕ್ ಷೋ ಎಂಬ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ನಿರೂಪಕರ, ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ರಾಜ್ಯ ಎಸ್ ಎಸ್ ಎಫ್ ಇಹ್ಸಾನ್ ಚಯರ್ಮೇನ್ ಶಾಫೀ ಸಅದಿ
ಭಾರತೀಯ ಮುಸ್ಲಿಮರು ರಾಜಕೀಯವಾಗಿ ಪ್ರಬುಧ್ಧರಾಗಿದ್ದಾರೆ,

ಅವರಿಗೆ ಯಾರೂ ರಾಜಕೀಯದ ಪಾಠ ಹೇಳಿ ಕೊಡಬೇಕಾದ ಅಗತ್ಯವಿಲ್ಲ,,ಮುಸ್ಲಿಮರಿಗೆ ಸಿಗುವ ಸವಲತ್ತುಗಳು ಸಿಗದಿದ್ದರೆ ,ಮುಂದಿನ ಚುನಾವಣೆಯಲ್ಲಿ ಸರಕಾರವನ್ನೆ ಬದಲಿಸುವ ತಾಕತ್ತು ಮುಸಲ್ಮಾನರಿಗಿದೆ ಎಂದೇಳಿದರು…,ಮತ್ತು ಮುಸ್ಲಿಮರು ಎದುರಿಸುತ್ತಿರುವ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳು, ಅದಕ್ಕಿರುವ ಪರಿಹಾರದ ಬಗ್ಗೆಯೂ ಮಾತನಾಡಿದರು… ಬರೋಬ್ಬರಿ 3 ಘಂಟೆಗಳ ಕಾಲ ನಡೆದ ಚರ್ಚಾ ಕಾರ್ಯಕ್ರಮದಲ್ಲಿ

ರಾಷ್ಟ್ರೀಯ ಎಸ್ಸೆಸ್ಸೆಫ್ ಪ್ರ.ಕಾರ್ಯದರ್ಶಿ ಕೆ.ಎಂ ಸಿದ್ದೀಖ್ ಮೋಂಟುಗೋಳಿ, ಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಷ ಹಫೀಳ್ ಸಅದಿ, ಹಾಗೂ ಕರ್ನಾಟಕದ ಪ್ರಮುಖ ಉದ್ಯಮಿಗಳಾದ,, ಮುಝೈನ್ ಗ್ರೂಪ್ ನ ಸಿ.ಇ.ಓ ಝಕರೀಯ, ಅಲ್ ಫಲಾಹ್ ಗ್ರೂಪ್ ನ ಸಿ.ಇ.ಓ ನಝೀರ್, ರೈಸ್ಕೋ ಗ್ರೂಪ್ ನ ಸಿ.ಇ.ಓ ಅಬುಬಕ್ಕರ್ ಪಡುಬಿದ್ರಿ ,ರಜಾಕ್ ತೊಕೂರು (ಏರ್ಟೆಲ್) ಮುಂತಾದ ಉಲಮಾ, ಉಮರಾ ನಾಯಕರು ಭಾಗವಹಿಸಿದರು, ಚರ್ಚಾ ಕಾರ್ಯಕ್ರಮದ ನಿರೂಪಣೆಯನ್ನು ಕೆ.ಸಿ.ಎಫ್ ಅಂತರಾಷ್ಟ್ರೀಯ ಶಿಕ್ಷಣ ವಿಭಾಗದ ಚಯರ್ಮೇನ್ ಕಮರುದ್ದೀನ್ ಗೂಡಿನಬಳಿ ನಿರ್ವಹಿಸಿದರು…


ಅದಕ್ಕಿಂತಲೂ ಮುಂಚಿತವಾಗಿ ಅಸರ್ ನಮಾಝಿನ ಬಳಿಕ 4 ಘಂಟೆಗೆ  ಝೋನ್ ಅಧ್ಯಕ್ಷ ಫಾರೂಕ್ ಮುಸ್ಲಿಯಾರ್ ಕುಪ್ಪೆಟಿ ಅಧ್ಯಕ್ಷತೆಯಲ್ಲಿ ಸದಸ್ಯರಿಗಾಗಿ ಸಂಘಟನಾ ತರಗತಿ ನಡೆಯಿತು, ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಹಜ್ಜ್ ಕಮಿಟಿ ಸದಸ್ಯ ಕೆ.ಎಂ ಸಿದ್ದೀಖ್ ಮೊಂಟುಗೋಳಿ ಭಾಗವಹಿಸಿ ಮಾದರಿ ಸದಸ್ಯ ಹೇಗಿರಬೇಕೆಂದು ಮನೋಜ್ಞವಾಗಿ ಹೇಳಿ ತರಗತಿ ನಡೆಸಿದರು.. ದಮ್ಮಾಮ್ ಝೋನ್ ನಾಯಕ ಅಬ್ದುಲ್ ಹಝೀಝ್ ಸಅದಿ ಸ್ವಾಗತಿಸಿ ಧನ್ಯವಾದ ಹೇಳಿದರು.

 ಮಗ್ರಿಬ್ ನಮಾಝ್ ಬಳಿಕ 7 ಘಂಟೆಗೆ ದಮ್ಮಾಮಿನಾದ್ಯಂತ ಇರುವ ಕನ್ನಡಿಗ ಕುಟುಂಬಗಳ ಫ್ಯಾಮಿಲಿ ಮೀಟ್ ನಡೆಯಿತು, ಈ ಕಾರ್ಯಕ್ರಮದಲ್ಲಿ ನಡೆದ ಪ್ರತಿಭಾ ಸ್ಪರ್ಧೆಯಲ್ಲಿ ಹಲವು ಪ್ರತಿಭೆಗಳು ಭಾಗವಹಿಸಿ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಪ್ರಕಟಿಸಿದರು… ಹಾಗೂ ಮಹಿಳೆಯರಿಗಾಗಿ ಮಹಿಳಾ ವಿದ್ವಾಂಸೆಯಿಂದ ತರಗತಿ, ಹಾಗೂ ದೀನೀ ಚೌಕಟ್ಟು ಮೀರದ ಸ್ಪರ್ಧೆಗಳು,   ಕಾರ್ಯಕ್ರಮದಲ್ಲಿ ಉಸ್ಮಾನ್ ಝುಹ್ರಿ ಉಸ್ತಾದರ ನೇತೃತ್ವದಲ್ಲಿ ಜುಬೈಲ್ ಸೆಕ್ಟರ್ ಧಫ್ ತಂಡದಿಂದ ಆಕರ್ಷಕ ಧಫ್ ಪ್ರದರ್ಶನ ನಡೆಯಿತು…. ಹಾಗೂ ಆರೋಗ್ಯ ತಪಾಸಣೆ ಮುಂತಾದ ಕಾರ್ಯಕ್ರಮ ನಡೆಯಿತು,

 

ಆ ಬಳಿಕ ರಾತ್ರಿ 8 ಘಂಟೆಯಿಂದ ಕಾರ್ಯಕ್ರಮದ ಆಕರ್ಷಣೆಯಾದ ‘ರಿಯಾಲಿಟಿ ಟಾಕ್ ಷೋ ಕಾರ್ಯಕ್ರಮ ನಡೆಯಿತು, ಈ ಕಾರ್ಯಕ್ರಮದಲ್ಲಿ ಭಾರತೀಯ ಮುಸಲ್ಮಾನರು ಎದುರಿಸುತ್ತಿರುವ ಸಮಸ್ಯೆಗಳು, ಅದಕ್ಕಿರುವ ಪರಿಹಾರದ ಬಗ್ಗೆಯೂ ಬೆಳಕು ಚೆಲ್ಲಲಾಯಿತು.

 

ನಂತರ ರಾತ್ರಿ 12 ಘಂಟೆಗೆ ಇಶಾರ ಕನ್ವೇನ್ಷನ್ ಚಯರ್ಮೇನ್ ರೈಸ್ಕೋ ಅಬುಬಕ್ಕರ್ ಪಡುಬಿದ್ರಿಯವರ ಸಭಾಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು… ಸಮಾರೋಪ ಸಭೆಯನ್ನು ಎಸ್ಸೆಸ್ಸೆಫ್ ಮಾಜಿ ರಾಜ್ಯಧ್ಯಕ್ಷ ಹಫೀಳ್ ಸಅದಿ ಕೋಡಗು ಉಧ್ಘಾಟಿಸಿದರು, ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ ಸ್ವಾಗತಿಸಿದರು…. ಸಮಾರೋಪ ಕಾರ್ಯಕ್ರಮದಲ್ಲಿ ಹಲವು ವಿಜೇತರಿಗೆ ಮೊಮೆಂಟಮ್ ವಿತರಿಸಲಾಯಿತು,, ಕೆ.ಸಿ.ಎಫ್ ಸೌದಿ ರಾಷ್ಟ್ರ ಮಟ್ಟದಲ್ಲಿ ನಡೆಸಿದ ಅಸ್ಸುಫ ತರಗತಿಯ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ದ್ವಿತಿಯಾ ಸ್ಥಾನಿಯಾದ ಆಸೀಫ್ ಕಾಟಿಪಳ್ಳ , ಹಾಗೂ ದಮ್ಮಾಮ್ ಝೋನ್ ಮಟ್ಟದಲ್ಲಿ ಪ್ರಥಮ ಮನ್ಸೂರ್ ಕಾಟಿಪಳ್ಳ, ದ್ವಿತೀಯ ಶರೀಫ್ ಕನ್ನಂಗಾರ್, ತೃತೀಯ ಸ್ಥಾನಿಯಾದ ಇಸ್ಮಾಯಿಲ್ ಕಬಕರವರಿಗೆ ಮೊಮೆಂಟಮ್ ನೀಡಲಾಯಿತು,

ನಂತರ ಇಶಾರ ಕನ್ವೆನ್ಷನ್ ಕಾರ್ಯಕ್ರಮದ ಪ್ರಯುಕ್ತ ‘ಭಾರತೀಯ ಮುಸ್ಲಿಮರ ಸಬಲೀಕರಣ’ ಎಂಬ ವಿಷಯದ ಕುರಿತು ನಡೆಸಲಾದ ಝೋನ್ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರಿನ ಕೆ.ಎಂ ಇರ್ಶಾದ್ ಪಕ್ಷಿಕೆರೆ, ದ್ವಿತಿಯ ಸ್ಥಾನಿಯಾದ ಅಲ್ ಹಸ್ಸಾ ಸೆಕ್ಟರಿನ ಇಸ್ಹಾಕ್ ಫಜೀರ್, ತೃತೀಯ ಸ್ಥಾನಿಯಾದ ಅಲ್ ಹಸ್ಸಾ ಸೆಕ್ಟರಿನ ಅಶ್ರಫ್ ಕಟ್ಟದಪಡ್ಪುರವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು, ನಂತರ ಇಹ್ಸಾನ್ ರಾಜ್ಯಾಧ್ಯಕ್ಷ ಶಾಫೀ ಸಅದಿ ಮುಖ್ಯ ಪ್ರಭಾಷಣ ಮಾಡಿದರು, ಕೆ.ಎಂ ಸಿದ್ದೀಖ್ ಮೊಂಟುಗೋಳಿಯವರು ದಿಕ್ಸೂಚಿ ಭಾಷಣ ನಡೆಸಿದರು, ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮೀತಿ ಕೋರ್ಡಿನೇಟರ್ ಅಬ್ದುಲ್ಲಾ ಹಾಜಿ , ಮುಝೈನ್ ಗ್ರೂಪಿನ ಝಕರೀಯ,ಅಲ್ ಫಲಾಹ್ ಗ್ರೂಪಿನ ನಝೀರ್, ಹಾಗೂ ಶಾಹುಲ್ ಹಮೀದ್ ಉಜಿರೆ, ಕೆ.ಸಿ.ಎಫ್ ರಾಷ್ಟ್ರೀಯ ನಾಯಕರಾದ    ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಉಪಾಧ್ಯಕ್ಷ ನಝೀರ್ ಕಾಶಿಪಟ್ನ, ಹನೀಫ್ ಮಂಜನಾಡಿ, ಮೊಹಮ್ಮದ್ ಮಲೆಬೆಟ್ಟು,  ಸಲೀಂ ಕನ್ಯಾಡಿ, ದಮ್ಮಾಮ್ ಝೋನ್ ಶಿಕ್ಷಣ ವಿಭಾಗದ ಚಯರ್ಮೇನ್ ಅಬ್ದುರ್ರಶೀದ್ ಸಖಾಫಿ ಕುಂಬ್ರ ಝೋನ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ ಮುಂತಾದ ನಾಯಕರು ಉಪಸ್ಥಿತರಿದ್ದರು.. ಕಾರ್ಯಕ್ರಮದ ನಿರೂಪಣೆಯನ್ನು ಕೆ.ಸಿ.ಎಫ್ ಅಂತರಾಷ್ಟ್ರೀಯ ಶಿಕ್ಷಣ ವಿಭಾಗದ ಚಯರ್ಮೇನ್ ಗೂಡಿನ ಬಳಿ ಕಮರುದ್ದೀನ್ ನಿರ್ವಹಿಸಿದರು…
ಬಹಳ ಅದ್ದೂರಿಯಾಗಿ ನಡೆದ ಕೆ.ಸಿ.ಎಫ್ ಡೇ ಇಶಾರ ಕನ್ವೆನ್ಷನ್ ಕಾರ್ಯಾಕ್ರಮದಲ್ಲಿ ದಮ್ಮಾಮ್ ಝೋನಿಗೊಳಪಟ್ಟ ಜುಬೈಲ್, ದಮ್ಮಾಮ್,ಕೋಬಾರ್ ಅಲ್ ಹಸ್ಸಾ ಎಂಬ ನಾಲ್ಕು ಸೆಕ್ಟರಿನ ಕಾರ್ಯಕರ್ತರು,, ಹಾಗೂ ದಮ್ಮಾಮಿನಲ್ಲಿರುವ ಅನಿವಾಸಿ ಕರುನಾಡಿನ ಕುಟುಂಬಗಳು ಭಾಗವಹಿಸಿದವು….

Leave a Reply

Your email address will not be published. Required fields are marked *

error: Content is protected !!