janadhvani

Kannada Online News Paper

SSLC ವಿದ್ಯಾರ್ಥಿಗಳನ್ನು ಪರೀಕ್ಷೆ ರಹಿತ ಪಾಸ್ ಮಾಡಿ, ಆನ್​ಲೈನ್ ಶಿಕ್ಷಣ ರದ್ದುಗೊಳಿಸಿ-ವಾಟಾಳ್​ ನಾಗರಾಜ್

ಹುಬ್ಬಳ್ಳಿ: ಎಸ್ಎಸ್ಎಲ್​ಸಿ ಪರೀಕ್ಷೆ ಹಾಗೂ ಆನ್​ಲೈನ್ ಶಿಕ್ಷಣ ರದ್ದುಗೊಳಿಸುವಂತೆ  ಅವರು ಚನ್ನಮ್ಮ ವೃತ್ತದ ಬಳಿ ಜಾಗಟೆ ಭಾರಿಸಿ ವಿನೂತನವಾಗಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್ ಅವರು​ ಹಠಕ್ಕೆ ಬಿದ್ದು ಎಸ್​ಎಸ್​ಎಲ್​ಸಿ ಪರೀಕ್ಷೆ ಮಾಡಲು ಹೊರಟಿದ್ದಾರೆ. ಕೊರೊನಾ ಪ್ರಕರಣ ಕಡಿಮೆ ಇದ್ದ ವೇಳೆ ಲಾಕ್​ಡೌನ್ ಮಾಡಿದ್ರು. ಕೋವಿಡ್​ 19 ಅಟ್ಟಹಾಸ ಮೆರೆಯುವ ವೇಳೆ ಓಪನ್ ಮಾಡಿದ್ದಾರೆ ಎಂದು ಅವರು ಹೇಳಿದರು.

ಎಸ್ಎಸ್ಎಲ್​ಸಿ ಪರೀಕ್ಷೆ ನಂತರ ಮೌಲ್ಯಮಾಪನ ಮಾಡುವ ಶಿಕ್ಷಕರ ಭವಿಷ್ಯದ ಪ್ರಶ್ನೆ ಎದುರಾಗಿದೆ. ರಾಜ್ಯದಲ್ಲಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಪ್ರಾಥಮಿಕ ಹಂತದಿಂದ ಡಿಗ್ರಿಯವರೆಗೂ ಆನ್​ಲೈನ್​ ಶಿಕ್ಷಣ ಮಾಡೋದು ಬೇಡ ಎಂದು ಅವರು ಆನ್​ಲೈನ್​ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಸದ್ಯ ಕರ್ನಾಟಕವನ್ನು ಅಮೇರಿಕಾ ಮಾಡಲು ಆಗಲ್ಲ. ಕೊರೊನಾ ವೈರಸ್ ವೇಳೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿಲ್ಲ. ಹೀಗಾಗಿ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ ಎಂದು ವಾಟಾಳ್​ ನಾಗರಾಜ್ ಅವರು ನುಡಿದರು.

error: Content is protected !! Not allowed copy content from janadhvani.com