janadhvani

Kannada Online News Paper

ಸೌದಿ: ಜುಮಾ ದಿನ ಮಸೀದಿಗಳನ್ನು ಬೇಗನೆ ತೆರೆಯಲಾಗುವುದು

ರಿಯಾದ್: ಜುಮುಅ ಪ್ರಾರ್ಥನೆಗೆ 40 ನಿಮಿಷಗಳ ಮುಂಚಿತವಾಗಿ ಸೌದಿಯಲ್ಲಿ ಮಸೀದಿಗಳು ತೆರೆದುಕೊಳ್ಳಲಿವೆ.

ಮಸೀದಿಯಲ್ಲಿ ಜನ ದಟ್ಟಣೆಯನ್ನು ಕಡಿಮೆಗೊಳಿಸುವ ಯೋಜನೆಯಾಗಿದೆ ಇದು. ಈ ಮುಂಚೆ 20 ನಿಮಿಷಗಳ ಮೊದಲು ತೆರೆಯುವ ಪ್ರಸ್ತಾಪವಿತ್ತು. ಜುಮುಅ ಪ್ರಾರ್ಥನೆಯ 20 ನಿಮಿಷಗಳ ನಂತರ ಮಸೀದಿಗಳನ್ನು ಮುಚ್ಚಬೇಕೆಂದು ಸಹ ಸೂಚಿಸಲಾಗಿದೆ.

ಇತರ ಪ್ರಾರ್ಥನೆಗಳಿಗೆ 15 ನಿಮಿಷಗಳ ಮೊದಲು ಮಸೀದಿಯನ್ನು ತೆರೆಯಲಾಗುತ್ತದೆ, ಮತ್ತು ಪ್ರಾರ್ಥನೆಯ 10 ನಿಮಿಷಗಳ ಬಳಿಕ ಮಸೀದಿಯನ್ನು ಮುಚ್ಚಲಾಗುತ್ತದೆ.

ಕೋವಿಡ್ ಮುನ್ನೆಚ್ಚರಿಕೆ ಭಾಗವಾಗಿ ನಿರ್ದೇಶಿಸಲಾದ ಎಲ್ಲಾ ಕಾರ್ಯಗಳನ್ನು ಪಾಲಿಸಬೇಕಾಗಿದೆ ಎಂದು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಹೇಳಿದೆ.

ಸೌದಿ ಅರೇಬಿಯಾದಲ್ಲಿ 90,000 ಮಸೀದಿಗಳಿದ್ದು, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದ ಕಾರಣ ಈಗಾಗಲೇ ಸೌದಿಯಲ್ಲಿ ನೂರಾರು ಮಸೀದಿಗಳನ್ನು ಮುಚ್ಚಲಾಗಿದೆ. ನಿಯಮಗಳನ್ನು ಅನುಸರಿಸಿದ್ದಾಗಿ ಖಚಿತಪಡಿಸಿದ ನಂತರವೇ ಅವುಗಳನ್ನು ತೆರೆಯಲು ಅನುಮತಿ ನೀಡಲಾಗುವುದು.

ಜಿದ್ದಾ ಮತ್ತು ಮಕ್ಕಾದಲ್ಲಿನ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ನಿಷೇಧಿಸಲಾಗಿದೆ. ಎರಡೂ ಹರಮ್‌ಗಳಲ್ಲಿ ಪ್ರಾರ್ಥನೆಗಳನ್ನು ನಿರ್ಬಂಧಗಳೊಂದಿಗೆ ನಡೆಸಲಾಗುತ್ತದೆ.

error: Content is protected !! Not allowed copy content from janadhvani.com