ಶಾರ್ಜಾ ಝೋನ್: ಕೆ.ಸಿ.ಎಫ್ ಡೇ ಸಂಭ್ರಮಾಚರಣೆ

ಶಾರ್ಜಾ: ಗಲ್ಫ್ ನಾಡಿನಾದ್ಯಂತ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) “ಸಂಸ್ಕೃತಿ, ಸಹಬಾಳ್ವೆ, ಸಾಂತ್ವನದ ಹೆಬ್ಬಾಗಿಲು ಕೆ. ಸಿ. ಎಫ್” ಎಂಬ ಘೋಷವಾಕ್ಯದೊಂದಿಗೆ ಇದರ 5ನೇ ವಾರ್ಷಿಕೋತ್ಸವವನ್ನು ಬಹಳ ವಿಜೃಂಭಣೆಯಿಂದ ಫೆಬ್ರವರಿ 16ರ ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಶಾರ್ಜಾದ ಅಲ್ ಖಾನ್ ನಲ್ಲಿರುವ ಅಲ್ ಯಾಸಾತ್ ಸಂಕೀರ್ಣದಲ್ಲಿ ನಡೆಸಲಾಯಿತು.

ಕೆ ಸಿ ಎಫ್ ಶಾರ್ಜಾ ಝೋನ್ ಇದರ ಅಧ್ಯಕ್ಷರಾದ ಬಹು! ಅಬೂಸ್ವಾಲಿಹ್ ಸಖಾಫಿಯವರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಹಾಫಿಳ್ ಸಿರಾಜುದ್ದೀನ್‌ ನೆಲ್ಯಾಡಿಯವರು ತಮ್ಮ ಮಧುರ ಕಂಠದಿಂದ ಖಿರಾಅತ್ ಪಠಿಸಿ, ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ಸಂಘಟನಾ ವಿಭಾಗದ ಕನ್ವೀನರ್ ಕಮಾಲುದ್ದೀನ್ ಆಂಬ್ಲಮೊಗರುರವರು ಸ್ವಾಗತ ಭಾಷಣ ನಡೆಸಿದರು.

ಕೆ.ಸಿ.ಎಫ್ ಯು.ಎ.ಇ ಸಂಘಟನಾ ವಿಭಾಗದ ಚೇರ್ಮ್ಯಾನ್ ಮೂಸಾ ಹಾಜಿ ಬಸರಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಂತರ ಅಬ್ದುಲ್‌ ರಝಾಕ್ ಹುಮೈದಿಯವರು ಪ್ರಾಸ್ತಾವಿಕ ಭಾಷಣ ಮಾಡಿ, ಕೆ.ಸಿ.ಎಫ್ ನ ವಿವಿಧ ವಿಭಾಗಗಳ ಕಾರ್ಯ ವೈಖರಿಗಳನ್ನು ವಿವರಿಸಿದರು.

ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲಾರವರು ಸಂಚಲನ ನಡೆಸಿ ಮಾತನಾಡುತ್ತಾ, ಕೆ ಸಿ ಎಫ್ ತಮ್ಮ ಕಾರ್ಯಕರ್ತರಿಗೆ ಸುನ್ನಿ ದಿಗ್ಗಜರಿಂದ ನಡೆಸಿದ ಸಂಘಟನಾ ತರಗತಿಗಳು, ಆಧ್ಯಾತ್ಮಿಕತೆಗಾಗಿ ನಡೆಸಿದ ಮಜ್ಲಿಸುಗಳು, ಹುತಾತ್ಮರ ಸ್ಮರಣೆಗಳು, ಗಲ್ಫ್ ಇಶಾರ ಮಾಸಿಕ ಪತ್ರಿಕೆ, ಉತ್ತರ ಕರ್ನಾಟಕದ ಪಾಲಿಗೆ ಆಶಾಕಿರಣವಾದ ಇಹ್ಸಾನ್ ಯೋಜನೆ ಮತ್ತು ದೇಶ ಪ್ರೇಮದ ಸಂಕೇತವಾಗಿ ಹಮ್ಮಿಕೊಂಡ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮೊದಲಾದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ನಂತರ ಬಹು!ಅಬ್ದುಲ್ ಅಝೀಝ್ ಸಖಾಫಿಯವರು ಪ್ರಭಾಷಣ ಮಾಡುತ್ತಾ ಸಂಘಟನೆಯ ಅಗತ್ಯ ಹಾಗೂ ಸಂಘಟನೆಯಲ್ಲಿ ಸೇರಿದರೆ ಇಹಲೋಕದಲ್ಲಿ ಮತ್ತು ನಾಳೆ ಪರಲೋಕದಲ್ಲಿ ಲಭಿಸಬಹುದಾದ ಪ್ರತಿಫಲದ ಕುರಿತು ಮಾತನಾಡಿದರು.

ಇಕ್ಬಾಲ್ ಮಂಜನಾಡಿಯವರ ನೇತೃತ್ವದಲ್ಲಿ ಅನ್ಯೋನ್ಯತೆ ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು. ಕೆ.ಸಿ.ಎಫ್ ಕಾರ್ಯಕರ್ತರು ಸಂಘಟನೆಯಲ್ಲಿ ತಮಗೆ ಆದ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.ನಂತರ ಅಬ್ದುಲ್ ಕರೀಂ ಮುಸ್ಲಿಯಾರ್ ಮೋಡರೇಟರ್ ಭಾಷಣ ಮಾಡಿದರು.

ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಸಿ.ಎಫ್ ಐ.ಎನ್.ಸಿ ಪ್ರಧಾನ ಕಾರ್ಯದರ್ಶಿ ಶೇಖ್ ಬಾವ ಹಾಜಿಯವರು ಮೋಟಿವೇಶನಲ್ ತರಗತಿ ನಡೆಸಿದರು.ನಂತರ ಇಬ್ರಾಹಿಂ ಸಖಾಫಿ ಕೆದುಂಬಾಡಿರವರು ಭಕ್ತಿ ಗಾಂಭೀರ್ಯವಾದ ಉದ್ಭೋದನೆ ನಡೆಸಿದರು.

ಯು.ಎ.ಇ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಅಸ್ಸುಫ್ಫಾ ಎರಡನೇ ಹಂತದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ರಜಬ್ ಮುಹಮ್ಮದ್ ಉಚ್ಚಿಲ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಮತ್ತು ಕಳೆದ ಸಾಲಿನ ಗಲ್ಫ್ ಇಶಾರಾ ಅಭಿಯಾನದಲ್ಲಿ ಪ್ರಥಮ ಸ್ಥಾನ ಗಳಿಸಿದ ನ್ಯಾಷನಲ್ ಪೈಂಟ್ ಸೆಕ್ಟರ್ ಹಾಗೂ ಅತೀ ಹೆಚ್ಚು ಚಂದಾದಾರರಾಗಿ ಮಾಡಿದ ಅಬ್ದುಲ್ ರಝಾಕ್ ಮುಸ್ಲಿಯಾರ್ ರವರಿಗೆ ಬಹುಮಾನ ನೀಡಲಾಯಿತು.
ಕೆ.ಸಿ.ಎಫ್ ರಾಷ್ಟ್ರೀಯ ನಾಯಕರಾದ ಅಬ್ದುಲ್ಲಾ ನಲ್ಕಾ ಹಾಜಿ, ಉಸ್ಮಾನ್ ಹಾಜಿ ನಾಪೋಕ್ಲು ಮತ್ತು ಝೈನುದ್ದೀನ್ ಹಾಜಿ ಎಲ್ಲರಿಗೂ ಶುಭ ಹಾರೈಸಿದರು.

ರಾಷ್ಟ್ರೀಯ ಸಮಿತಿಯ ವೆಲ್ಫೇರ್ ವಿಭಾಗದ ಕನ್ವೀನರ್ ಹಾಗೂ ಶಾರ್ಜಾ ವಲಯ ಸಮಿತಿಯ ಆಡಳಿತ ವಿಭಾಗದ ಅಧ್ಯಕ್ಷ ಮುಹಮ್ಮದ್ ಶರೀಫ್ ಸಾಲೆತ್ತೂರು, ಝೋನ್ ನಾಯಕರಾದ ಅಬ್ದುಲ್ ರಝಾಕ್ ಹಾಜಿ, ರಫೀಕ್ ತೆಕ್ಕಾರ್, ತಾಜುದ್ದೀನ್ ಅಮ್ಮುಂಜೆ, ಹುಸೈನ್ ಇನೋಳಿ, ಇಲ್ಯಾಸ್ ತೆಕ್ಕಾರ್ ಮತ್ತು ಹನೀಫ್ ಉಳ್ಳಾಲರವರು ಉಪಸ್ಥಿತರಿದ್ದರು.

ಕೆ.ಸಿ.ಎಫ್ ಶಾರ್ಜ ವಲಯ ಸಮಿತಿಯ ಅಧ್ಯಕ್ಷರಾದ ಅಬೂಸ್ವಾಲಿಹ್ ಸಖಾಫಿಯವರು ಅಧ್ಯಕ್ಷ ಭಾಷಣ ಮಾಡಿದರು. ನಂತರ ಹಾಫಿಲ್ ಸಿರಾಜುದ್ದೀನ್ ರವರ ನೇತೃತ್ವದಲ್ಲಿ ಅಶ್ರಕ ಬೈತ್ ಹಾಡಿ ಇಬ್ರಾಹಿಮ್ ಸಖಾಫಿ ಕೆದುಂಬಾಡಿಯವರು ದುಆ ನೆರವೇರಿಸಿದರು. ಕೊನೆಯಲ್ಲಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!